ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಸೆಪ್ಟಂಬರ್ 07ರಂದು, ಮಂಗಳೂರಿನ ಕಪಿತಾನಿಯೋ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ. ಕ್ವಿಜ್ ಸ್ಪರ್ಧೆಯಲ್ಲಿ ಸುದಾನ ಪ್ರೌಢ ಶಾಲೆಯ ಹಿತೇಶ್ ಕೃಷ್ಣ ಪಿ. ಜಿ (10ನೇ) ವಿಜೇತರಾಗಿದ್ದು ಮುಂದೆ ನಡೆಯಲಿರುವ ಮೈಸೂರು ವಿಭಾಗೀಯ ಮಟ್ಟದ ಕ್ವಿಜ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಸತತ ಹನ್ನೆರಡನೆ ಬಾರಿಗೆ ಸುದಾನ ವಸತಿಯುತ ಶಾಲೆಯು ಈ ಸಾಧನೆಯನ್ನು ಮಾಡಿದೆ. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್‍ರವರು ಶುಭ ಹಾರೈಸಿದ್ದಾರೆ. ಈತ ಶ್ರೀ ಗೋಪಾಲಕೃಷ್ಣ ಪಿ.ವಿ. ಮತ್ತು ವೀಣಾ ಭಾಸ್ಕರ್ ಅವರ ಪುತ್ರ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ