ಮಂಗಳೂರು: ಮಾಂಡೋವಿ ಮೋಟರ್ಸ್‌ನಲ್ಲಿ ಬಹು ನಿರೀಕ್ಷಿತ ಆಲ್‌ ನ್ಯೂ ALTO-K10 ಬಿಡುಗಡೆ

Upayuktha
0



ಮಂಗಳೂರು: ಆಲ್‌ ನ್ಯೂ ALTO-K10 ಅನ್ನು ಮಂಗಳೂರು ಮಾರುಕಟ್ಟೆಗೆ ಮಾರುತಿ ಸುಜುಕಿ ಅರೆನಾ ಮಾಂಡೋವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್, ಮಂಗಳೂರಿನಲ್ಲಿ ಶುಕ್ರವಾರ (ಸೆಪ್ಟೆಂಬರ್ 09) ಬಿಡುಗಡೆ ಮಾಡಲಾಯಿತು.


ಐಪಿಎಸ್, ಡಿಜಿಪಿ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತ ಶ್ರೀ ಎನ್ ಶಶಿಕುಮಾರ್ ಮತ್ತು ಖ್ಯಾತ ಲೇಖಕಿ ಮತ್ತು ಪ್ರಾಧ್ಯಾಪಕರಾದ ಶ್ರೀಮತಿ ಮೀನಾಕ್ಷಿ ರಾಮಚಂದ್ರ ಅವರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿದ್ದರು.


ಮಾಂಡೋವಿ ಮೋಟಾರ್ಸ್ ಗ್ರೂಪ್‌ನ ನಿರ್ದೇಶಕ ಶ್ರೀ ಆರೂರು ಸಂಜಯ್ ರಾವ್ ಮುಖ್ಯ ಅತಿಥಿಗಳನ್ನು ಸ್ವಾಗತಿಸಿ,  ಕಾರ್ಯಕ್ರಮವನ್ನು ನಿರ್ವಹಿಸಿದರು.


ಮಾಂಡೋವಿ ಮೋಟಾರ್ಸ್‌ನ ಸಹಾಯಕ ಉಪಾಧ್ಯಕ್ಷ ನೇರಂಕಿ ಪಾರ್ಶ್ವನಾಥ್ ಕಾರಿನ ಸುರಕ್ಷತಾ ವೈಶಿಷ್ಟ್ಯಗಳನ್ನು ವಿವರಿಸಿದರು. ಶ್ರೀ ಅಕ್ಷಯ್ ಕುಮಾರ್ ಜೈನ್,  ALTO-K10 ನ ಎಲ್ಲಾ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡಿದರು. 


ಈ ಸಂದರ್ಭದಲ್ಲಿ ಶ್ರೀ ಶಶಿಧರ್ ಕಾರಂತ್ ಡಿಜಿಎಂ, (ಮಾರಾಟ ಮತ್ತು ಮಾರುಕಟ್ಟೆ) ಮತ್ತು ಶ್ರೀ ಕಿಶನ್ ಕೆ ಶೆಟ್ಟಿ (ಸೀನಿಯರ್ ಮ್ಯಾನೇಜರ್ ಸೇಲ್ಸ್) ಸೇರಿದಂತೆ ಸಂಸ್ಥೆಯ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು.


ಮುಖ್ಯ ಅತಿಥಿಗಳಿಂದ ದೀಪ ಬೆಳಗಿಸುವುದರೊಂದಿಗೆ ಮಿಸ್ ಮಾನಸಾ ಅವರ ಸ್ವಾಗತದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. 

ಉದ್ಘಾಟನಾ ಕಾರ್ಯಕ್ರಮದ ನಂತರ ಎಲ್ಲಾ ಉದ್ಯೋಗಿಗಳಿಗೆ ಓಣಂ ನ ಶುಭಾಶಯಗಳನ್ನು ನೀಡಲಾಯಿತು. ಕಾರ್ಯಕ್ರಮವನ್ನು ಅಸಿಸ್ಟೆಂಟ್ ಸೇಲ್ಸ್‌ ಮ್ಯಾನೇಜರ್‌  ಶ್ರೀ ಮುರಳೀಧರ್ ಬಿ ಜೆ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

إرسال تعليق

0 تعليقات
إرسال تعليق (0)
To Top