ಮಹಾರಾಷ್ಟ್ರ ಡಿಸಿಎಂ ಫಡ್ನವಿಸ್‌ರಿಂದ ಐಕಳ ಹರೀಶ್‌ ಶೆಟ್ಟಿಯವರಿಗೆ ಪಟ್ಲ ಸಂಮಾ‌ನ

Upayuktha
0

ಮುಂಬಯಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಸಂಚಾಲಕ ಶ್ರೀ ಐಕಳ ಹರೀಶ್ ಶೆಟ್ಟಿ ಅವರನ್ನು ಮಹಾರಾಪ್ಟ್ರದ ಉಪ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್ ಅವರು ಮುಂಬೈ ಬಂಟರ ಸಂಘದಲ್ಕಿ ನಡೆದ ವಿಶ್ವ ಬಂಟರ ಸಮ್ಮಿಲನ-2022 ರಲ್ಲಿ ಪಟ್ಲ ಟ್ರಸ್ಟ್ ಪರವಾಗಿ ಸಂಮಾನಿಸಿದರು.


ಒಕ್ಕೂಟದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಐಕಳ ಅವರ ಸಾಧನೆಯನ್ನು ಹಾಗೂ ಪಟ್ಲ ಟ್ರಸ್ಟ್ ಗೆ ಆರಂಭಿಕ ದಿನದಿಂದಲೂ ಅವರು ನೀಡುತ್ತಿರುವ ಸಹಕಾರ, ಮಾರ್ಗದರ್ಶನ ವನ್ನು ನೆನಪಿಸಿ "ದೇಶಕೊಬ್ಬ ನರೇಂದ್ರ,ಮಹಾರಾಷ್ಟ್ರಕ್ಕೊಬ್ಬ ದೇವೇಂದ್ರ, ಬಂಟ ಕುಲಕ್ಕೊಬ್ಬ ಸಾರ್ವಭೌಮ..." ಎಂದು ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಅಭಿನಂದಿಸಿದರು.


ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಗೌರವಾಧ್ಯಕ್ಷ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಉಪಾಧ್ಯಕ್ಷ ಪೆರ್ಮುದೆ ಅಶೋಕ ಶೆಟ್ಟಿ, ಕೇಂದ್ರ ಸಮಿತಿಯ ಪ್ರದೀಪ್ ಆಳ್ವ ಕದ್ರಿ, ರವಿ ಶೆಟ್ಟಿ ಅಶೋಕ ನಗರ, ಬಾಳ ಜಗನ್ನಾಥ ಶೆಟ್ಟಿ, ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ ಉಪಸ್ಥಿತರಿದ್ದರು.


ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಢಾರಿ ಅಡ್ಯಾರ್ ಸಂಮಾನ ಪತ್ರ ವಾಚಿಸಿದರು. ವಿಶ್ವ ಬಂಟರ ಸಮ್ಮಿಲನ 2022 ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top