ಮಂಗಳೂರು: ಕೃಷಿಯನ್ನು ಆಧುನಿಕ ರೀತಿಯಲ್ಲಿ ನಡೆಸುವ ಮೂಲಕ 'ಕೃಷಿಕೋದ್ಯಮ' ರೂಪಿಸಬೇಕೆಂಬ ನಿಟ್ಟಿನಲ್ಲಿ ಮುಳಿಯ-ಸುದ್ದಿ ಸಹಯೋಗದೊಂದಿಗೆ ಚಿಂತನ-ಮಂಥನ ಕಾರ್ಯಕ್ರಮ ಸೆ.20ರಂದು ಪುತ್ತೂರಿನ ಮುಳಿಯ ಜ್ಯುವೆಲ್ಸ್‌ನ ಅಪರಂಜಿ ರೂಫ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮ ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ನಡೆಯಲಿದೆ. ಕೃಷಿಯ ಕುರಿತ ಹಲವು ವರ್ಷಗಳ ಅನುಭವ, ಮಣ್ಣು ಪರೀಕ್ಷೆ, ಎನ್‌ಪಿಕೆ, ತೆಂಗು-ಕಂಗು-ರಬ್ಬರ್ ಈ ಎಲ್ಲ ವಿಷಯಗಳ ಬಗ್ಗೆ ಅನುಭವಿಗಳ ಜತೆಗೆ ಸಂವಾದ, ಚರ್ಚೆ ನಡೆಯಲಿದೆ.
ಸುವ್ಯವಸ್ಥಿತ ಅಭಿವೃದ್ಧಿಗಾಗಿ ಕೃಷಿಯಲ್ಲಿ ಮ್ಯಾನೇಜ್‌ಮೆಂಟ್ ಸೂತ್ರಗಳನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತದೆ.
ಕಾರ್ಯಕ್ರಮವನ್ನು ಶ್ರೀ ಕೇಶವ ಪ್ರಸಾದ್ ಮುಳಿಯ ಅವರು ದೀಪೋಜ್ವಲನದೊಂದಿಗೆ ಉದ್ಘಾಟಿಸಲಿದ್ದಾರೆ. ಶ್ರೀ ವೇಣು ಶರ್ಮ ಮುನ್ನುಡಿಗಳನ್ನು ಆಡಲಿದ್ದಾರೆ. ಬೆಳಗ್ಗೆ 10ರಂದ 12 ಗಂಟೆಯ ವರೆಗೆ- ಮಾ ಇಂಟಿಗ್ರೇಟರ್ಸ್, ಇಂಟಿಗ್ರೇಟೆಡ್ ಅಗ್ರಿಕಲ್ಚರಿಸ್ಟ್‌ನ ಸಂಸ್ಥಾಪಕ ಶ್ರೀ ಅಶೋಕ್ ಕುಮಾರ್, ಕಾಸರಗೋಡು ಸಿಪಿಸಿಆರ್‌ಐನ ಮುಖ್ಯ ತಾಂತ್ರಿಕ ಅಧಿಕಾರಿ ಶ್ರೀ ಎಚ್. ಮುರಳಿಕೃಷ್ಣ, ಅನುಭವಿ ಕೃಷಿಕ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ಅವರು 'ಅನುಭವಿ ಪರಿಣತರ ಮಾತುಗಳನ್ನು' ಹಂಚಿಕೊಳ್ಳಲಿದ್ದಾರೆ.
ಮಧ್ಯಾಹ್ನ 12:15ರಿಂದ 1 ಗಂಟೆಯ ವರೆಗೆ ಪುರಂದರ ಕುಬಣೂರಾಯ ಮತ್ತು ವೇಣು ಶರ್ಮ ಅವರು ಸಂವಾದ ನಡೆಸಿಕೊಡಲಿದ್ದಾರೆ.
ಅಪರಾಹ್ನ 1 ಗಂಟೆಗೆ ಭೋಜನ ವಿರಾಮದ ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಯು.ಪಿ ಶಿವಾನಂದ ಶ್ರೀ ಕೃಷ್ಣ ನಾರಾಯಣ ಮುಳಿಯ ಅವರು ಪಾಲ್ಗೊಳ್ಳಲಿದ್ದಾರೆ.
ಡಾ. ವೇಣು ಕಳೆಯತ್ತೋಡಿ (ಸಾವಯವ ಕೃಷಿ), ಶ್ರೀಹರಿ ಭಟ್ ಸಜಂಗದ್ದೆ (ಕೃಷಿ ತಂತ್ರಗಾರಿಕೆ), ವೇಣುಗೋಪಾಲ್ (ನರ್ಸರಿ), ಕೃಷ್ಣ ಮೋಹನ್ (ಇನ್‌ಫ್ರಾ ಬಾಸ್ಕೆಟ್, ಕೃಷಿ ಮಳಿಗೆ), ಡಾ. ಹರಿಕೃಷ್ಣ ಪಾಣಾಜೆ (ಆಯುರ್ವೇದ ಮೂಲಿಕೆಗಳ ಕೃಷಿ), ಗೋವಿಂದ ಭಟ್ ಮಾಣಿಲ (ಸುರಂಗ ನೀರಾವರಿ), ಶ್ರೀಮತಿ ಕಸ್ತೂರಿ ಅಡ್ಯಂತಾಯ (ಹೈನುಗಾರಿಕೆ), ಸುರೇಶ್ ಗೌಡ (ಬಸಳೆ ಕೃಷಿ), ಶ್ರೀರಾಮ ಭಟ್ಟ ಚೆನ್ನಂಗೋಡು (ತರಕಾರಿ ಕೃಷಿ), ಶ್ರೀನಿವಾಶ ಭಟ್ಟ ಚಂದುಕೂಡ್ಲು (ಕೃಷಿ), ಮಹೇಶ್ ಪುಚ್ಚಪ್ಪಾಡಿ (ಕೃಷಿ ಸಂಘಟನೆ- ಸಾಮಾಜಿಕ ಜಾಲತಾಣ) ವಿಚಾರವಾಗಿ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ