ಕಾರ್ಕಳ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು(ರಿ) ಮೈಸೂರು ಇದರ ಕಾರ್ಕಳ ತಾಲೂಕು ಘಟಕ ಹಾಗೂ 'ಕದಳಿ ಮಹಿಳಾ ವೇದಿಕೆ ಉಡುಪಿ ಜಿಲ್ಲಾ ಘಟಕ'ದ ವತಿಯಿಂದ ಆ.29 ರಂದು ಜಗದ್ಗುರು, ಪರಮಪೂಜ್ಯ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಜಯಂತಿ ಪ್ರಯುಕ್ತ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕೈರಬೆಟ್ಟುವಿನಲ್ಲಿ ಮಕ್ಕಳಿಗೆ ವಚನಗಳಲ್ಲಿ ನಿಸರ್ಗದ ಪರಿಕಲ್ಪನೆ - ವಚನಸ್ಪರ್ಧೆ - ಗಾಯನ ಮತ್ತು ಅದರ ವಿಶ್ಲೇಷಣೆ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು. ಸುಮಾರು 20 ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಡಾ. ವೀಣಾದೇವಿ ಶಾಸ್ತ್ರೀಮಠ, ಅಧ್ಯಕ್ಷರು- ಕಾರ್ಕಳ ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು(ರಿ) ಮೈಸೂರು ಹಾಗು ಅಧ್ಯಕ್ಷರು ಕದಳಿ ಮಹಿಳಾ ವೇದಿಕೆ, ಉಡುಪಿ ಜಿಲ್ಲಾ ಘಟಕ ಇವರು ಕಾರ್ಯಕ್ರಮದ ಬಗೆಗೆ ಪ್ರಾಸ್ತಾವಿಕ ಮಾತುಗಳನ್ನಾಡಿ ದೀಪವನ್ನು ಬೆಳಗಿಸಿದರು.
ಗೌರವಾನ್ವಿತ ಅತಿಥಿಗಳಾಗಿ ನಿಟ್ಟೆ ಕ್ಯಾಂಪಸ್ ಮೈಂಟೆನೆನ್ಸ್ & ಡೆವಲಪ್ಮೆಂಟ್ ನ ನಿರ್ದೇಶಕ ಶ್ರೀ ಯೋಗೀಶ್ ಹೆಗ್ಡೆ, ನಿಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಡಾ. ಸುದೀಪ್ ಹೆಗ್ಡೆ ಮತ್ತು ನಿಟ್ಟೆ ಕಾಲೇಜಿನ ಡಾ.ಶಂಕರ್ ಬಿ.ಬಿ ಇವರು ಉಪಸ್ಥಿತರಿದ್ದು ಮಕ್ಕಳೊಡನೆ ಹಿತಚಿಂತನೆ ನಡೆಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಶಿಕಲಾ ಶೆಟ್ಟಿಯವರು ಕಾರ್ಯಕ್ರಮವನ್ನು ಸಂಯೋಜಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ