ಧರ್ಮಸ್ಥಳ ಭಜನಾ ಕಮ್ಮಟ: ಭಜನಾ ತರಬೇತಿಯಲ್ಲಿ 174 ಮಂಡಳಿಗಳಿಂದ 322 ಶಿಬಿರಾರ್ಥಿಗಳು ಭಾಗಿ

Upayuktha
0



ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳಾದ ಪೂಜ್ಯ ಡಾ|| ಡಿ ವೀರೇಂದ್ರ ಹೆಗ್ಗೆಡೆಯವರ ಮಾರ್ಗದರ್ಶನದಲ್ಲಿ ಸೆ.16 ರಿ0ದ 24 ನೇ ವರ್ಷದ ಭಜನಾ ಕಮ್ಮಟ ತರಬೇತಿಯು ಮಹೋತ್ಸವ ಸಭಾ ಭವನದಲ್ಲಿ ನಡೆಯುತ್ತಿದೆ.


ಈ ವರ್ಷ 174 ಭಜನಾ ಮಂಡಳಿಗಳಿಂದ 322 ಶಿಬಿರಾರ್ಥಿಗಳು ಭಜನೆಯಲ್ಲಿ ಭಾಗವಹಿಸಿದ್ದಾರೆ. ವಿಶೇಷವಾಗಿ 138 ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿರುತ್ತಾರೆ. ಕಳೆದ ಮೂರು ದಿನಗಳಲ್ಲಿ ರಾಗ ತಾಳಗಳ ಪರಿಚಯ ಹಾಗೂ ತರಗತಿಯನ್ನು ಶ್ರೀಮತಿ ಮನೋರಮಾ ತೋಳ್ಪಡಿತ್ತಾಯ, ಸಂಗೀತ ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ಹಾಗೂ ಶ್ರೀಮತಿ ಸಂಗೀತ ಬಾಲಚಂದ್ರ ಉಡುಪಿ, ಯವರು ಆಗಮಿಸಿ ಭಜನಾ ತರಬೇತಿಯನ್ನು ನೀಡಿರುತ್ತಾರೆ. ಶ್ರೀಮತಿ ಸೌಮ್ಯ ಸುಭಾಷ್ ರವರು ಸಂಪ್ರದಾಯ ಹಾಡುಗಳ ತರಬೇತಿಯನ್ನು ನಡೆಸಿಕೊಟ್ಟರು. ಈ ದಿನ ಭಜನಾ ಕಮ್ಮಟದ ಮೂರನೆಯ ದಿನವಾಗಿದ್ದು  ಪ್ರಥಮ ಬಾರಿಗೆ ಭಜನಾ ತರಬೇತಿಯಲ್ಲಿ ಹಿಮ್ಮೇಳದಲ್ಲಿ  ಡೋಲಕ್, ಕೀ ಬೋರ್ಡ್‍ಗಳನ್ನು ಬಳಸಲಾಗಿದೆ.


ಭಜನಾ ಮ0ಗಳೋತ್ಸವ ಸೆ. 23 ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದ್ದು ಅಂದಾಜು 500 ಮಂಡಳಿಗಳಿ0ದ 6000 ಭಜಕರು ಭಾಗವಹಿಸುವ ನಿರೀಕ್ಷೆ ಇದೆ. 


ರಾಜ್ಯದ ಪ್ರತಿಷ್ಠಿತ ಭಜನಾ ಕಲಾವಿದರಾದ ಶ್ರೀ ರಾಮಕೃಷ್ಣ ಕಾಟುಕುಕ್ಕೆ ದಿನಾಂಕ: 19.09.2022 ಮತ್ತು  20.09.2022 ರಂದು, ಶ್ರೀ ಉಪ್ಪುಂದ ರಾಜೇಶ್ ಪಡಿಯಾರ್ ಮೈಸೂರು 20.09.2022 ಮತ್ತು 21.09.2022 ರಂದು, ಶ್ರೀ ಶಂಕರ ಶ್ಯಾನುಭಾಗ್ ಬೆಂಗಳೂರು, ಇವರು 21.09.2022 ಮತ್ತು 22.09.2022 ರಂದು ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲಿದ್ದಾರೆ.


ದಿನಾಂಕ 17.09.2022 ಮದ್ಯಾಹ್ನ 12 ರಿಂದ 1.00 ಘಂಟೆ ಸಮಯದಲ್ಲಿ ಶ್ರೀ ಉಜಿರೆ ಆಶೊಕ್ ಭಟ್ ಯಕ್ಷಗಾನ ಕಲಾವಿದರು ತಮ್ಮ ಮಾತಿನಲ್ಲಿ ಭಜನಾ ಮಂಡಳಿಗಳಲ್ಲಿ ಧಾರ್ಮಿಕ ಆಚರಣೆಗಳ ಬಗ್ಗೆ ಉಪನ್ಯಾಸ ನೀಡಿದರು.. ದಿನಾಂಕ:18.09.2022 ರಂದು  ಶ್ರೀ ಮನು ಹಂದಾಡಿ ಕುಂದಾಪ್ರ ಕನ್ನಡದ ಸಾಂಸ್ಕೃತಿಕ ರಾಯಭಾರಿ, ಇವರಿಂದ ಕುಂದಾಪ್ರ ಕನ್ನಡದ-ಗ್ರಾಮ್ಯ ಭಾಷೆಯ ಹಾಸ್ಯ  ಮಾತುಗಾರಿಕೆ ಮೂಲಕ ಶಿಬಿರಾರ್ಥಿಗಳನ್ನು ರಂಜಿಸಿದರು.


ದಿನಾಂಕ 16.09.2022 ಕಮ್ಮಟದ ಮೊದಲನೇ ದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತೃಶ್ರೀ ಡಾ|| ಹೇಮಾವತಿ ವೀ. ಹೆಗ್ಗಡೆಯವರ ಪರಿಕಲ್ಪನೆಯ ‘ಯಡವಟ್ಟು ರಾಜ’ ಎಂಬ ಹಾಸ್ಯಮಯ ನಾಟಕವನ್ನು ರಂಗಶಿವ ಕಲಾ ಬಳಗ ಧರ್ಮಸ್ಥಳದ ಕಲಾದರಿಂದ  ನಾಟಕ ಪ್ರದರ್ಶನ ನಡೆಯಿತು.


ಎರಡನೆ ಹಾಗೂ ಮೂರನೆಯ ದಿನ ಆಂಗ್ಲ ಮಾದ್ಯಮ ಶಾಲೆ ಧರ್ಮಸ್ಥಳದ ವಿದ್ಯಾರ್ಥಿಗಳಿಂದ  ಕಿರುನಾಟಕ ಪ್ರದರ್ಶನಗೊಂಡಿತು. ಮತ್ತು ರಂಗಶಿವ ಕಲಾ ಬಳಗ ಧರ್ಮಸ್ಥಳ ಇವರು ರಂಗಗೀತೆಗಳನ್ನು ಪ್ರಸ್ತುತಪಡಿಸಿದರು.


ದಿನಾಂಕ 18.09.2022 ರಂದು  ಸಂಜೆ ಧರ್ಮಸ್ಥಳದ ಶ್ರೀ ಡಿ ಸುರೇಂದ್ರ ಕುಮಾರ್ ರವರು ಭಜನಾ ಶಿಬಿರಾರ್ಥಿಗಳಿಗೆ  ಮೂರು ಭಕ್ತಿಗೀತೆಗಲನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.


ಕಮ್ಮಟದ ಸಂಧರ್ಭದಲ್ಲಿ  ಡಾ|| ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ಶ್ರೀ ಧಾಮ ಮಾಣಿಲ. ಮಾತೃಶ್ರೀ ಡಾ|| ಹೇಮಾವತಿ ಹೆಗ್ಗಡೆಯವರು, ಶ್ರೀ ಸುರೇಂದ್ರ ಕುಮಾರ್, ಶ್ರೀಮತಿ ಅನಿತಾ ಸುರೇಂದ್ರ ಕುಮಾರ್, ಶ್ರೀ ಹರ್ಷೇಂದ್ರ ಕುಮಾರ್, ಶ್ರೀ ಎ.ಎಸ್ ಅಮಿತ್, ಶ್ರೀಮತಿ ಶ್ರದ್ಧಾ ಅಮಿತ್ ರವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top