ಉಡುಪಿ: ಸೆ.29ರಂದು ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಶ್ರೀ ಶಿವ-ಶಕ್ತಿಯರ ನೃತ್ಯ ಪ್ರದರ್ಶನ

Upayuktha
0

 



ಉಡುಪಿ: ಉಡುಪಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ದಾಸವರೇಣ್ಯ ಪುರಂದರದಾಸರು- ಶ್ರೀ ಶಿವ-ಶಕ್ತಿಯರ ನೃತ್ಯ ಪ್ರದರ್ಶನ ಸೆ.29ರಂದು ನಡೆಯಲಿದೆ. ಬೆಂಗಳೂರಿನ "ನಟನಂ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್" ಇವರು ಪ್ರಸ್ತುತ ಪಡಿಸಲಿದ್ದಾರೆ.  


ದಾಸ ಶ್ರೇಷ್ಠ ಪುರಂದರ ದಾಸರು ನಾರದಂಶ ಸಂಭೂತರು. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅನೇಕ ದೇವರನಾಮಗಳು, ಉಗಾಭೋಗಗಳು, ಸುಳಾದಿಗಳನ್ನು ಬರೆದಿದ್ದಾರೆ. ಇವರನ್ನು "ಕರ್ನಾಟಕ ಸಂಗೀತದ ಪಿತಾಮಹ" ಎಂದು ಕರೆಯುತ್ತಾರೆ. ಸಣ್ಣ ಮಕ್ಕಳಿಗೆ ಸುಲಭವಾಗಿ ಸಂಗೀತವನ್ನು ಕಲಿಯಲು ಸರಳೆ ವರಸೆ, ಜಂಟಿವರಸೆ, ಅಲಂಕಾರಗಳು, ಪಿಳ್ಳಾರಿ ಗೀತೆಗಳನ್ನು ರಚಿಸಿದ್ದಾರೆ. ಸಮಾಜದಲ್ಲಿ ಇರುವ ಡಾಂಭಿಕತನ, ಮೂಢನಂಬಿಕೆಯಿಂದ ಹಿಡಿದು ಆಧ್ಯಾತ್ಮದವರೆಗೆ ದೇವರನಾಮಗಳನ್ನು ಬರೆದಿದ್ದಾರೆ. ಇಂತಹ ದಾಸ ಶ್ರೇಷ್ಠರ ಅನೇಕ ಕೃತಿಗಳಲ್ಲಿ ಅವರ ಜೀವನ ಚರಿತ್ರೆಗೆ ಸಂಬಂಧಿಸಿದ ಕೃತಿಗಳನ್ನು ಆರಿಸಿಕೊಂಡು "ನಟನಂ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್" ಸಂಸ್ಥೆಯ ಸಂಸ್ಥಾಪಕರಾದ ಡಾ. ರಕ್ಷ ಕಾರ್ತಿಕ್ ರವರು ತಮ್ಮ ಶಿಷ್ಯೆಯರೊಂದಿಗೆ ನೃತ್ಯ ರೂಪಕವನ್ನು ಪ್ರದರ್ಶಿಸಲಿದ್ದಾರೆ.


ಡಾ. ರಕ್ಷ ಕಾರ್ತಿಕ್ ರವರು ಅಂತರರಾಷ್ತ್ರೀಯ ನೃತ್ಯ ಕಲಾವಿದೆ. ಅಭಿನಯ ಚತುರೆ. ಇವರು ತಮ್ಮ ನೃತ್ಯ ರೂಪಕದ ಮೂಲಕ ಪುರಂದರ ದಾಸರ ಮೂಗುತಿ ಪ್ರಸಂಗ, ಮಕ್ಕಳಿಗೆ ಸಂಗೀತ ಪಾಠ, ಜನರ ಡೊಂಕನ್ನು ತಿದ್ದುವ ಹಾಗು ಕೊನೆಯಲ್ಲಿ ಅವರ ಪತ್ನಿಯ ಅಗಲಿಕೆ ಹಾಗು ಮೋಕ್ಷ ಹೊಂದುವುದು ಎಲ್ಲವನ್ನೂ ಬಹಳ ಹೃದಯ ಸ್ಪರ್ಶಿ ಆಗುವಂತೆ  ಅವರ ಕೃತಿಗಳನ್ನೇ ಆರಿಸಿಕೊಂಡು ಅಭಿನಯಿಸಲಿದ್ದಾರೆ. ಇದೇ ತಿಂಗಳ 28.9.2022 ರಂದು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಅರ್ಪಿಸಲಿದ್ದಾರೆ. 


ಉಡುಪಿ ಬೈಲೂರಿನ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ 29.09.2022ರಂದು ಸಂಜೆ 7ರಿಂದ 8:30ವರೆಗೆ ಶ್ರೀ ಶಿವ-ಶಕ್ತಿಯರ ನೃತ್ಯ ಪ್ರದರ್ಶನದ ಭರತನಾಟ್ಯವಿದೆ. ಹಿಮಗಿರಿ ತನಯೇ, ಶ್ರೀಚಕ್ರರಾಜಸಿಂಹಾಸನೇಶ್ವರಿ, ದುರ್ಗೇ ದುರ್ಗೇ, ನಾಗೇಂದ್ರ ಹಾರಾಯ, ಭೋ ಶಂಭೋ ಮುಂತಾದವು. ಈ ಸಂಜೆಯ ಸುಂದರವಾದ ಸಂಗೀತ, ನರ್ತನದ ಕಾರ್ಯಕ್ರಮದ ರಸಾಸ್ವಾದವನ್ನು ಉಣ ಬಡಿಸಲಿದ್ದಾರೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕ: +91 98861 07701  

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top