ಮಕ್ಕಳಿಗೆ ಎಳೆಯ ವಯಸ್ಸಿನಲ್ಲೇ ಭಜನೆಯ ಸಂಸ್ಕಾರ ಕಲಿಸಬೇಕು: ಡಾ. ಹೇಮಾವತಿ ವೀ. ಹೆಗ್ಗಡೆ

Upayuktha
0

ಭಜನಾ ತರಬೇತಿ ಕಮ್ಮಟದಲ್ಲಿ ಉಪನ್ಯಾಸ



ಧರ್ಮಸ್ಥಳ: ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಭಜನೆಯ ಸಂಸ್ಕಾರವನ್ನು ಕೊಡಬೇಕು. ಹಿಂದೆ ಬೀಡಿನಲ್ಲಿಯೂ ಭಜನಾ ಕಾರ್ಯಕ್ರಮ ನಡೆಯುತ್ತಿತ್ತು. ಹಿರಿಯರು ಮಕ್ಕಳು ಎಲ್ಲರು ಭಜನೆಗೆ ಕುಳಿತುಕೊಳ್ಳುತ್ತಿದ್ದರು. ಶ್ಲೋಕಗಳನ್ನು ಕಲಿಸಿಕೊಡಬೇಕು ಎಳವೆಯಲ್ಲಿಯೇ ಅಭ್ಯಾಸ ಮಾಡಬೇಕಾಗಿದೆ. ಒಳ್ಳೊಳ್ಳೆ ಪ್ರವಚನಗಳು, ಭಜನೆಗಳ ಅಗತ್ಯವಿದೆ ಎಂದು ಮಾತೃಶ್ರೀ ಡಾ ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು.


ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಭಜನಾ ಕಮ್ಮಟದಲ್ಲಿ ಅವರು ಉಪನ್ಯಾಸ ನೀಡಿದರು.


ಮಕ್ಕಳಲ್ಲಿ ಮೊಬೈಲ್ ಬಳಕೆಯ ಅಭ್ಯಾಸವನ್ನು ಬಿಡಿಸಬೇಕಾಗಿದೆ. ಮಕ್ಕಳು ತಮ್ಮ ತಂದೆ ತಾಯಿ ಹಿರಿಯರನ್ನು ನೋಡಿ ಸಂಸ್ಕಾರವನ್ನು ಕಲಿತುಕೊಳ್ಳುತ್ತಾರೆ. ಮಕ್ಕಳು ಬೆಳೆಯುತ್ತಾ ಇದ್ದ ಹಾಗೆ ಮಾತು ಕತೆ ಇನ್ನೊಬ್ಬರನ್ನು ಹಿರಿಯರನ್ನು ಅನುಕರಣೆ ಮಾಡುತ್ತಾ ನೋಡಿ ನೋಡಿ ಕಲಿತುಕೊಳ್ಳುತ್ತಾರೆ. ಟಿ.ವಿ ಮಾಧ್ಯದ್ಯಮದಿಂದ ಧಾರಾವಾಹಿಗಳಿಂದ ದೂರವಿರಿಸಬೇಕು. ಈ ಬಗ್ಗೆ ಮಕ್ಕಳನ್ನು ನಿರ್ಲಕ್ಷ್ಯ ವಹಿಸಬಾರದು. ಮಕ್ಕಳನ್ನು ಹಾಗೂ ಹಿರಿಯರನ್ನು ಸರಿಯಾಗಿ ನೋಡಿಕೊಳ್ಳಬೇಕು. ಮನೆಯಲ್ಲಿ ಅಪ್ಪ ಅಮ್ಮನನ್ನು ನೋಡಿಕೊಳ್ಳುವ ಸಂಸ್ಕಾರವನ್ನು ಬೆಳಸಬೇಕು ಎಂದು ಕಿವಿಮಾತು ನುಡಿದರು.


ವಾತ್ಸಲ್ಯ ಕಾರ್ಯಕ್ರಮದಲ್ಲಿ 14000 ಕುಟುಂಬಗಳಿವೆ, ಮನೆ ಇಲ್ಲದವರಿಗೆ ಮನೆ, ಆಹಾರದ ಬಗ್ಗೆ ಕಾಳಜಿ, ಇತರ ಸೌಕರ್ಯಗಳನ್ನು ನೀಡುವ  ಕಾರ್ಯಕ್ರಮಗಳನ್ನು ಕ್ಷೇತ್ರದಿಂದ ನಡೆಸಲಾಗುತ್ತಿದೆ. ಉತ್ತಮ ಜಾತಿಯ ಸಾಕುಪ್ರಾಣಿಗಳಿಗೆ ಉತ್ತಮ ಬೆಲೆಯಿದೆ ಆದರೆ ಮನುಷ್ಯರಿಗೆ ಬೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ದೇವರು ಸೃಷ್ಟಿಸಿದ ಜಗತ್ತು, ಮಾನವರು ಹಾಳು ಮಾಡಬಾರದು. ನಮ್ಮ ಭಾರತ ದೇಶವು ಕೌಟುಂಬಿಕವಾಗಿ ಉತ್ತಮ ಸಂಸ್ಕಾರವಿರುವ ದೇಶ. ಶ್ರದ್ಧೆಯಿಂದ ರೈತನು ಶ್ರದ್ಧೆಯಿಂದ ಉತ್ತಮ ಬೀಜವನ್ನು ಬಿತ್ತುತ್ತಾನೆ ಇದರಿಂದ ನಮಗೆ ಉತ್ತಮ ಆಹಾರ ದೊರೆಯುತ್ತದೆ ಎಂದರು.


ಒಂದು ಮಗುವು ಭೂಮಿಗೆ ಬರುವಾಗ ಅತ್ಯಂತ ಶ್ರದ್ಧೆಯಿಂದ ಬರುತ್ತದೆ, ವಿಶ್ವಾಸ ಬೇರೆ, ಶ್ರಧ್ಧೆ ಬೇರೆ ಮನಸ್ಸಿನಿಂದ ಬರುವುದೇ ಶ್ರದ್ಧೆ, ಮಗು ಶ್ರದ್ಧೆಯಿಂದ ಹೊರ ಬರುತ್ತದೆ, ಹೆಣ್ಣು ಮಗುವಾದರೆ ಈ ಬಗ್ಗೆ ನಿರ್ಲಕ್ಷ್ಯವಿದೆ. ಇದು ಸರಿ ಅಲ್ಲ ಸಾವಿರಾರು ವರ್ಷಗಳಿಂದ ಹೆಣ್ಣಿನ ಬಗ್ಗೆ ತಾತ್ಸಾರ ಭಾವನೆ ಇದೆ. ಇದು ಸಂಪೂರ್ಣವಾಗಿ ಹೋಗಲಾಡಿಸಬೇಕು. ವಿಜ್ಞಾನ ಹೇಳುತ್ತದೆ ಹೆಣ್ಣು- ಗಂಡು ಮಕ್ಕಳಿಗೆ ಜನ್ಮ ನೀಡುವುದು ಹೆಂಗಸಿನ ಕೈಯಲ್ಲಿ ಇಲ್ಲ. ನಮ್ಮೊಳಗೆ ಪರಿವರ್ತನೆಯಾಗಬೇಕು. ಎಷ್ಟು ಕತ್ತಲೆ ಇದ್ದರೂ ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಕಾಲೇ ಕಂಬ ದೇಹವೇ ದೇಗುಲವಯ್ಯಾ. ಸಂಸ್ಕಾರ, ಸಂಸ್ಕೃತಿ ಹಿರಿಯರಿಂದ ಬಂದಿರುತ್ತದೆ. ಮಕ್ಕಳನ್ನು ಉತ್ತಮ ಸಂಸ್ಕಾರದಿಂದ ಬೆಳೆಸಿ ನಮ್ಮ ಸಂಸ್ಕೃತಿಯನ್ನು ಉಳಿಸಬೇಕಾಗಿದೆ. ಅದನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕಾಗಿದೆ ಎಂದು ತಿಳಿಸಿದರು.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top