ಜ್ಞಾನದ ಪ್ರಸರಣವು ಸದಾ ಚಾಲ್ತಿಯಲ್ಲಿರಬೇಕು: ಕೆ ಸತ್ಯಲಕ್ಷ್ಮಿ

Upayuktha
0

ಮೂಡುಬಿದಿರೆ: ಆಳ್ವಾಸ್ ನ್ಯಾಚುರೋಪತಿ ಆ್ಯಂಡ್ ಯೋಗಿಕ್ ಸೈನ್ಸ್ ಕಾಲೇಜು ಹಾಗೂ  ಭಾರತ ಸರಕಾರದ  ಆಯುಷ್ ಇಲಾಖೆಯ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದ ಪ್ರಾಯೋಜಕತ್ವದಲ್ಲಿ 6 ದಿನಗಳ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ಸೋಮವಾರ ಕಾಲೇಜಿನ ಆವರಣದಲ್ಲಿ ಆರಂಭಗೊಂಡಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಾರತ ಸರಕಾರದ ರಾಷ್ಟ್ರೀಯ ನೇಚುರೋಪತಿ ಸಂಸ್ಥೆಯ  ನಿರ್ದೇಶಕಿ ಡಾ. ಕೆ ಸತ್ಯಲಕ್ಷ್ಮಿ ಮಾತನಾಡಿ, ವಿವಿಧ ರಾಜ್ಯಗಳಿಂದ ಬಂದು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದಾಗಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಪರಸ್ಪರ ಚರ್ಚಸಿಬಹುದಾಗಿದೆ. ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಹೊಸ ಬದಲಾವಣೆಯನ್ನು ತರಲು ಸಹಕರಿಸುತ್ತದೆ ಎಂದರು. ಜ್ಞಾನದ ಪ್ರಸರಣವು ಸದಾ ಚಾಲ್ತಿಯಲ್ಲಿರಬೇಕೆ ಹೊರತು ಜಡತ್ವವನ್ನು ಹೊಂದಬಾರದು ಎಂದರು.


ಆಧುನಿಕ ಯುಗದಲ್ಲಿ ಸಾಮಾನ್ಯ ಜನರನ್ನು ಕಾಡುವ 12 ಆರೋಗ್ಯ ಸಂಬಂಧಿ ಕಾಯಿಲೆಗಳ ಬಗ್ಗೆ ವಿವರಿಸಿದ ಅವರು, ಅವುಗಳಿಗೆ ಪರಿಹಾರವನ್ನು ಸೂಚಿಸಿದರು. ಸಾವಯವ ಕೃಷಿ ಪದ್ದತಿಗೆ ಹೆಚ್ಚಿನ ಒತ್ತನ್ನು ನೀಡುವಂತೆ ತಿಳಿಸಿದರು.


ಕಾರ್ಯಕ್ರಮದ ಅದ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಜ್ಮೆಂಟ್ ಟ್ರಸ್ಟಿ ವಿವೇಕ ಆಳ್ವ, ನಿಖರವಾದ ಸಂಶೋಧನೆಯಿಂದ ಮಾತ್ರ ಬದಲಾವಣೆ ಸಾಧ್ಯ. ಉತ್ತಮವಾದದ್ದನ್ನು ನಿರೀಕ್ಷಿಸುವ ಮೊದಲು ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ ಎಂದರು. ದೇಶದ ಭವಿಷ್ಯವನ್ನು ರೂಪಿಸಲು ಜನರು ಸಾಮೂಹಿಕವಾಗಿ ಕೆಲಸ ಮಾಡುವುದು ಒಳಿತು ಎಂದರು.


ಕಾರ್ಯಕ್ರಮದಲ್ಲಿ ಎಸ್ ವ್ಯಾಸ ವಿವಿಯ ನೇಚುರೋಪತಿ ಕಾಲೇಜಿನ ಪ್ರಾಚಾರ್ಯ ಡಾ.ಅಪಾರ ಎ ಸಾವೋಜಿ, ಮೈಸೂರಿನ ಸೀನಿಯರ್ ಫಿಜಿಶಿಯನ್ ಡಾ ಹರಿ ಗಣೀಶ್, ಪ್ರೊ. ಗೀತಾ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರಥಮ ವರ್ಷದ ನ್ಯಾಚುರೋಪತಿ ವಿದ್ಯಾರ್ಥಿ  ಅನಂತಕೃಷ್ಣ ನಿರೂಪಿಸಿ, ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ  ಆ್ಯಂಡ್ ಯೋಗಿಕ್ ಸೈನ್ಸ್‍ನ ಪ್ರಾಂಶುಪಾಲೆ ಡಾ ವನಿತಾ ಶೆಟ್ಟಿ ಸ್ವಾಗತಿಸಿ, ಯಶಸ್ವಿನಿ ಹಾಗೂ ತಂಡ ಪ್ರಾರ್ಥಿಸಿ, ಪ್ರೋ ಡಾ ನಿತೇಶ್ ಗೌಡ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top