ಡಾ.ಆರ್. ವಾದಿರಾಜುರವರ ಕೃತಿಗಳ ಲೋಕಾರ್ಪಣೆ

Upayuktha
0

ಬೆಂಗಳೂರು: ಸ್ನೇಹ ಬಳಗ ವತಿಯಿಂದ ಆಯೋಜಿಸಿದ್ದ ವಿಜಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಲೇಖಕ ಡಾ.ಆರ್.ವಾದಿರಾಜು ವಿರಚಿತ ದಾಸಸಾಹಿತ್ಯ ಮೇರು ಶ್ರೀ ವಾದಿರಾಜರು- ಒಂದು ಅವಲೋಕನ  ಮತ್ತು ಹಿರಿಯ ಸಾಹಿತಿ ಡಾ.ಕವಿತಾಕೃಷ್ಣರವರ ಬದುಕು- ಬರಹ  ಸಾಧನೆಗಳ ಕಿರುನೋಟ ‘ಸಾರ್ಥಕ- ಸಾಧಕ’ ಕೃತಿಯನ್ನು ಖ್ಯಾತ ಹರಿದಾಸ ವಿದ್ವಾಂಸ ವಿದ್ಯಾವಾಚಸ್ಪತಿ ಡಾ. ಅರಳಮಲ್ಲಿಗೆ ಪಾರ್ಥಸಾರಥಿ ನಗರದ ಗಾಂಧಿ ಭವನದಲ್ಲಿ ಲೋಕಾರ್ಪಣೆಗೊಳಿಸಿದರು.


ಹಿರಿಯ ಲೇಖಕ ತಿರುಮಲ ರಾವ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸ್ನೇಹ ಬಳಗದ ಡಾ.ಪಾನ್ಯಂ ನಟರಾಜು, ಡಾ.ಚೌಡಯ್ಯ, ಡಾ.ಕೃಷ್ಣ ಹಾನಬಾಳ್, ಡಾ.ಕೆ.ಸಿ.ಮುನಿಯಪ್ಪ, ಡಾ.ಪ್ರತಿಮಾ, ಹಿರಿಯ ಕಾದಂಬರಿಕಾರ ಡಾ.ಕೆ.ರಮಾನಂದ, ಚಿತ್ರ ನಿರ್ದೇಶಕ ಡಾ.ಗುಣವಂತ ಮಂಜು, ಸಂಸ್ಕøತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮೊದಲಾದವರು ಉಪಸ್ಥಿತರಿದ್ದು ಡಾ.ವಾದಿರಾಜುರವರ ಜನ್ಮದಿನದ ಪ್ರಯುಕ್ತ ಅಭಿನಂದಿಸಿದರು.


إرسال تعليق

0 تعليقات
إرسال تعليق (0)
To Top