ಆಳ್ವಾಸ್ ಸಹಕಾರ ಸಂಘಕ್ಕೆ 2,24,31,397 ಕೋಟಿ ನಿವ್ವಳ ಲಾಭ

Upayuktha
0

ಸಂಘದ 6ನೇ ವಾರ್ಷಿಕ ಮಹಾಸಭೆ



ಮೂಡುಬಿದಿರೆ: ಆಳ್ವಾಸ್ ಸಹಕಾರ ಸಂಘ (ನಿ) 2021-22ನೇ ಸಾಲಿನ 6ನೇ ವಾರ್ಷಿಕ ಮಹಾಸಭೆ ಇಲ್ಲಿನ ವಿದ್ಯಾಗಿರಿಯ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಿತು.


ಮಹಾಸಭೆಯಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಸಹಕಾರಿ ಸಂಘದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಅನುಭವಿಗಳು ಸಂಘದ ಆಡಳಿತ ಮಂಡಳಿಯಲ್ಲಿ ಇರುವುದರಿಂದ ಉತ್ತಮ ಮಾರ್ಗದರ್ಶನ ಪಡೆಯಲು ಸಾಧ್ಯ. ಠೇವಣಿದಾರರು ಹಾಗೂ ಸಂಘದ ಸದಸ್ಯರ ವಿಶ್ವಾಸಪೂರ್ವ ನಡೆಯಿಂದ ಕಡಿಮೆ ಸಮಯದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಯಿತು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಧನ ಸಹಾಯವನ್ನು ಮಾಡುವ ಸಲುವಾಗಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ಸಂಘದ ವತಿಯಿಂದ ಸಾರ್ವಜನಿಕ ಉಪಕಾರ ನಿಧಿ ದೇಣಿಗೆ ನೀಡಿದ್ದೇವೆ ಎಂದರು.


ಕಾರ್ಯಕ್ರಮದಲ್ಲಿ ಸಂಘದ ವಾರ್ಷಿಕ ವರದಿಯನ್ನು ವಾಚಿಸಿದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅರ್ಪಿತ ಶೆಟ್ಟಿ `ಸಹಕಾರಿ ಸಂಘವು ಪ್ರಸಕ್ತ ವರ್ಷದಲ್ಲಿ 2,24,31,397 ಕೋಟಿ ನಿವ್ವಳ ಲಾಭ ಗಳಿಸಿರುತ್ತದೆ. 2020-21ನೇ ಸಾಲಿಗೆ ಹೋಲಿಸಿದರೆ 56% ಹೆಚ್ಚಿನ ಲಾಭ ಪಡೆದಿದೆ. ಈ ಸಂಘದ ಸದಸ್ಯರ ಪ್ರೋತ್ಸಾಹದಿಂದ ಸತತ 4 ವರ್ಷಗಳಿಂದ ಆಡಿಟ್ ವರ್ಗೀಕರಣದಲ್ಲಿ ಉನ್ನತ ಶ್ರೇಣಿ `ಎ' ವರ್ಗದ ಸಂಘವೆಂದು ಪರಿಗಣಿಸಲಾಗಿದೆ. ಸದಸ್ಯರಿಗೆ ಪಾಲು ಬಂಡವಾಳದ ಮೇಲೆ ಶೆ. 17 ರಷ್ಟು ಡಿವಿಡೆಂಡ್‌ ನೀಡಲು ಆಡಳಿತ ಮಂಡಳಿ ಶಿಫಾರಸ್ಸು ಮಾಡಿದೆ ಎಂದರು.

ಮಾರ್ಚ್ 2023ರ ಅಂತ್ಯಕ್ಕೆ ಸಂಘವು ಒಟ್ಟು 70 ಕೋಟಿ ಠೇವಣಿ ಸಂಗ್ರಹಿಸಿ, 65 ಕೋಟಿ ಸಾಲವನ್ನು ಕೊಡುವ ಗುರಿಯನ್ನು ಹೊಂದಿದೆ, ಈ ಮೂಲಕ ಒಟ್ಟು ವ್ಯವಹಾರವನ್ನು 135 ಕೋಟಿಗಿಂತಲೂ ಹೆಚ್ಚಿಸಿ 3 ಕೋಟಿಗೂ ಅಧಿಕ ನಿವ್ವಳ ಲಾಭ ಗಳಿಸುವ ಗುರಿಯನ್ನು ಹೊಂದಿದೆ ಎಂದರು.


ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ನಿರ್ದೇಶಕರುಗಳಾದ ಜಯಶ್ರೀ ಎ ಶೆಟ್ಟಿ, ಶ್ರೀಪತಿ ಭಟ್, ನಾರಾಯಣ ಪಿ. ಎಂ., ವಿವೇಕ್ ಆಳ್ವ, ಮೊಹಮ್ಮದ್ ಶರೀಫ್, ದೇವಿಪ್ರಸಾದ್ ಶೆಟ್ಟಿ, ಪ್ರಕಾಶಿನಿ ಹೆಗ್ಡೆ, ರಮೇಶ್ ಶೆಟ್ಟಿ, ರಾಮಚಂದ್ರ ಮಿಜಾರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಎ. ಮೋಹನ್ ಪಡಿವಾಳ್ ಸ್ವಾಗತಿಸಿ, ನಿರ್ದೇಶಕ ಜಯರಾಮ ಕೋಟ್ಯಾನ್ ವಂದಿಸಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು. 


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top