ಹವ್ಯಕ ಮಹಾಸಭೆ ವತಿಯಿಂದ ಸ್ವರ್ಣವಲ್ಲಿ ಮಠದಲ್ಲಿ ಭಿಕ್ಷಾಸೇವೆ

Upayuktha
0


ಸೋಂದಾ-ಸ್ವರ್ಣವಲ್ಲಿ: ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಚಾತುರ್ಮಾಸ್ಯಾಂಗ ಭಿಕ್ಷಾವಂದನೆ, ಪಾದುಕಾಪೂಜೆ ನಡೆಯಿತು.

ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಹವ್ಯಕ ಮಹಾಸಭೆಯ ಸೇವೆಯನ್ನು ಸ್ವೀಕರಿಸಿ ಮಾತನಾಡಿದ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು, ಹವ್ಯಕ ಮಹಾಸಭೆ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ವಿದ್ಯಾಸಹಾಯ, ಆರ್ಥಸಹಾಯ ಮುಂತಾದ ಕಾರ್ಯಗಳ ಮೂಲಕ ಸಮಾಜದ ಕಷ್ಟಗಳಿಗೆ ಸ್ಪಂದಿಸುತ್ತಿದೆ ಎಂದು ಶ್ಲಾಘಿಸಿದರು. 

ಮಹಾಸಭೆಯ ಜೊತೆ ಸ್ವರ್ಣವಲ್ಲೀ ಮಠವಿರಲಿದ್ದು, ಎಲ್ಲಾ ಕಾರ್ಯಗಳಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು. 

ಹಂಡ್ರಮನೆ ಗೋಪಾಲಕೃಷ್ಣ ಭಟ್ ದಂಪತಿಗಳು ಮಹಾಸಭೆಯ ಪರವಾಗಿ ಭಿಕ್ಷಾವಂದನೆ ಹಾಗೂ ಪಾದುಕಾಪೂಜೆ ಸಲ್ಲಿಸಿದರು. ಮಹಾಸಭೆಯ ಕಾರ್ಯದರ್ಶಿ ಪ್ರಶಾಂತ ಭಟ್ ಮಲವಳ್ಳಿ, ನಿರ್ದೇಶಕರಾದ ಗಣೇಶ ಭಟ್ ಕಾಜಿನಮನೆ, ಪ್ರಶಾಂತ ಹೆಗಡೆ ಸಂಕಲ್ಪ, ಹು.ಬಾ. ಅಶೋಕ್ ಮುಂತಾದವರು ಉಪಸ್ಥಿತರಿದ್ದು ಆಶೀರ್ವಾದ ಮಂತ್ರಾಕ್ಷತೆ ಪಡೆದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top