ಎಸ್.ಎ.ಇ ಏರೋಡಿಸೈನ್ ಚ್ಯಾಲೆಂಜ್ 2022: ಏರೋ ಕ್ಲಬ್ ನಿಟ್ಟೆಗೆ ರಾಷ್ಟ್ರಮಟ್ಟದ ಎರಡನೇ ಸ್ಥಾನ

Upayuktha
0

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಏರೋ ಕ್ಲಬ್ ಸೆಪ್ಟೆಂಬರ್ ಮೊದಲ ವಾರದಲ್ಲಿ ಚೆನ್ನೈನ ಎಸ್.ಆರ್.ಎಂ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ನಲ್ಲಿ ನಡೆದ ಎಸ್.ಎ.ಇ ಏರೋಡಿಸೈನ್ ಚ್ಯಾಲೆಂಜ್ 2022 ರಲ್ಲಿ ಮೈಕ್ರೊ ಕ್ಲಾಸ್ ವರ್ಗದಲ್ಲಿ ರಾಷ್ಟ್ರಮಟ್ಟಕ್ಕೆ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.


ಈ ಏರೋ ಕ್ಲಬ್ ತಂಡದಲ್ಲಿ ದೀಕ್ಷಾ, ಅಮನ್ ಕುಮಾರ್, ದೀಕ್ಷಿತ್ ಪ್ರಭು, ಅದಿತಿ ಭಟ್ ದಿನಮಣಿ, ಕೆ. ನಿಶ್ಮಿತಾ ಪೈ, ಸುಚಿತ್ರಾ ಪೈ ಹಾಗೂ ರತನ್ ರಾಜ್ ಕೆ ವಿವಿಧ ತಾಂತ್ರಿಕ ಜವಾಬ್ದಾರಿಗಳನ್ನು ನಿಭಾಯಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ.ಗುರುರಾಜ ಉಪಾಧ್ಯಾಯ ತಾಂತ್ರಿಕ ಸಂಯೋಜಕರಾಗಿ ಸ್ಪರ್ಧೆಯುದ್ದಕ್ಕೂ ತಂಡಕ್ಕೆ ಬೆನ್ನೆಲುಬಾಗಿದ್ದರು.


ತಜ್ಞರಾದ ಶ್ರೀ ಅನಂತ ಇರಸಪ್ಪ, ಶ್ರೀ ಕಾರ್ತಿಕ್ ಬದನಿಡಿಯೂರು, ಸುಶ್ಮಿತಾ ಎಸ್ ಶೆಟ್ಟಿ, ಶ್ರೀ ಅಂಕಿತ್ ಭಂಡಾರಿ ಮಾರ್ಗದರ್ಶಕರಾಗಿ ತಂಡಕ್ಕೆ ಸಹಾಯ ಮಾಡಿರುವರು ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top