|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು ವಿವಿ: ಗ್ರಂಥಾಲಯದಿಂದ ಆಗಸ್ಟ್ 8 ರಿಂದ ಕಾರ್ಯಾಗಾರ

ಮಂಗಳೂರು ವಿವಿ: ಗ್ರಂಥಾಲಯದಿಂದ ಆಗಸ್ಟ್ 8 ರಿಂದ ಕಾರ್ಯಾಗಾರ

ಮಂಗಳೂರು: ಆಜಾದಿ ಕಾ ಅಮೃತ್ ಮಹೋತ್ಸವʼದ ಅಂಗವಾಗಿ, ಮಂಗಳೂರು ವಿಶ್ವವಿದ್ಯಾನಿಲಯ ಗ್ರಂಥಾಲಯವು ಆಗಸ್ಟ್ 8 ರಿಂದ ಆಗಸ್ಟ್ 12 ರವರೆಗೆ 'ಎನ್ಇಪಿ 2020 ಗಾಗಿ ಗ್ರಂಥಾಲಯಗಳ ಪರಿವರ್ತನೆ' ಕುರಿತು ಕಾರ್ಯಾಗಾರ ಆಯೋಜಿಸಲಿದೆ.


ಕಾರ್ಯಾಗಾರದ ಉಪ ವಿಷಯಗಳೆಂದರೆ- ಎನ್‌ಇಪಿ, ಅಂತರಶಿಸ್ತೀಯ ಸಂಶೋಧನೆ ಮತ್ತು ಗ್ರಂಥಾಲಯಗಳ ಪಾತ್ರ, ಉನ್ನತ ಶಿಕ್ಷಣ ಸಂಸ್ಥೆಗಳ ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗಾಗಿ ಆನ್‌ಲೈನ್ ಡೇಟಾಬೇಸ್‌ಗಳು, ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕ ಓಪನ್ ಸೋರ್ಸ್ ಎಲೆಕ್ಟ್ರಾನಿಕ್ ಸಂಪನ್ಮೂಲಗಳು, ಸಂಶೋಧನಾ ಬರವಣಿಗೆ ಸಾಧನಗಳು - ವ್ಯಾಕರಣ, ಕೃತಿಚೌರ್ಯ ಮತ್ತು ಸಂಶೋಧನಾ ನೀತಿಗಳು, ಡೇಟಾ ವಿಶ್ಲೇಷಣೆಯಲ್ಲಿ ಸಂಖ್ಯಾಶಾಸ್ತ್ರೀಯ ಸಾಧನಗಳ ಅಪ್ಲಿಕೇಶನ್‌ಗಳು – ಎಸ್‌ಪಿಎಸ್‌ಎಸ್‌ ಪ್ಯಾಕೇಜ್, ಮತ್ತು ಕೋಹಾ ಸೈದ್ಧಾಂತಿಕ ಚೌಕಟ್ಟು, ವಿವಿಧ ಮಾಡ್ಯೂಲ್‌ಗಳು ಮತ್ತು ಗ್ರಂಥಾಲಯಗಳಲ್ಲಿ ಅವುಗಳ ಉಪಯೋಗ.


ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳು ಅಥವಾ ಇತರೆ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಗ್ರಂಥಾಲಯ ವೃತ್ತಿಪರರು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು, ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ, ಆಸಕ್ತರು ಈ ಸಂಖ್ಯೆಯನ್ನು ಸಂಪರ್ಕಿಸಬಹುದು: 94494 50671.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post