ಕಾಮ ಮೋಹಗಳನ್ನು ತ್ಯಜಿಸಿದವನು ನಿಜವಾದ ತಪಸ್ವಿ, ಸನ್ಯಾಸಿ!

Upayuktha
0

ತಪಸ್ಸಿನ ವ್ರತದಲ್ಲಿದ್ದಾಗ ರಾವಣನೂ ಕೂಡ ಪ್ರಬಲ ಸನ್ಯಾಸಿ!! ಇಂದ್ರ ಕನ್ನಿಕೆಯರೂ ರಾವಣನನ್ನು ಸೋಲಿಸಲಾಗಲಿಲ್ಲ. ಅದೇ ರಾವಣ ವ್ರತವಿಲ್ಲದ ಕಾಲದಲ್ಲಿ ರಾಮನ ಮೇಲಿನ ಪ್ರತಿಕಾರಕ್ಕೆ ಆಯ್ದುಕೊಂಡಿದ್ದು ಸನ್ಯಾಸಿ ವೇಷ!! ಪ್ರತಿಯಾಗಿ ರಾವಣನಿಗೆ ಸಿಕ್ಕಿದ ಶಿಕ್ಷೆ ಸಾವು!!


ಅನುರೂಪಳಾದ ಸತಿಯನ್ನು (ಸುಭದ್ರೆ) ಪಡೆಯುವುದಕ್ಕಾಗಿ ಕೃಷ್ಣನ ಸಲಹೆಯಂತೆ, ಅರ್ಜುನ ಹಾಕಿದ್ದೂ ಸನ್ಯಾಸಿ ವೇಷವೆ!!! ಅದೇ ಅರ್ಜುನ ಸಕಲ ಕಾಮ, ಮೋಹ, ಭೋಗಗಳ ಅವಕಾಶಗಳಿದ್ದರೂ ವೇಷ ಧರಿಸದೆ, ಸ್ವರ್ಗದಲ್ಲಿ ಸನ್ಯಾಸಿಯಾಗಿ ಇದ್ದು ಬಂದಿದ್ದು ಕೂಡ ಒಂದು ರೋಚಕ ತಪಸ್ಸಿನ ಕತೆ!!  


ಕಾಮ, ಮೋಹ, ಭೋಗಗಳಲ್ಲಿ ಸನ್ಯಾಸಿ ತೊಡಗಿಸಿಕೊಂಡರೆ ಜನ ನೋಡುವ ದೃಷ್ಟಿ ಬದಲಾಗುತ್ತದೆ.  ಶಾಪ-ವರ ಕೊಡುವ ತಪೋ ಶಕ್ತಿಯು, ಧರ್ಮ ಶಕ್ತಿಯೂ ಅವನಲ್ಲಿ ಕ್ಷೀಣಿಸಬಹುದು. ಅವನೇ ಜನರ ಶಾಪಕ್ಕೋ, ಹಾಸ್ಯಕ್ಕೋ ಗುರಿಯಾಗಬಹುದು. ಜನರ ಮನಸ್ಸಿನಲ್ಲಿ ಸನ್ಯಾಸಿ ಸಂಸಾರಿಯಾದಾನು!!! 


ಆದೇ ಕಾಮ, ಮೋಹ, ಭೋಗಗಳಲ್ಲಿ ನಿರತನಾಗದೆ ಅವುಗಳನ್ನು ಗೆದ್ದರೆ ಸಂಸಾರಿಯೂ ಸನ್ಯಾಸಿಯಾಗುತ್ತಾನೆ. ಸ್ವರ್ಗದಂತಹ ಸ್ವರ್ಗದಲ್ಲೇ ಸಂಸಾರಿ ಅರ್ಜುನ ಸನ್ಯಾಸಿಯಾಗಿ ಉಳಿದಿದ್ದು ಒಂದು ತಪಸ್ಸಿನ ಕತೆ!! ಪ್ರತಿಯಾಗಿ ಅರ್ಜುನನಿಗೂ  ಸಿಕ್ಕಿದ್ದು ವರ ರೂಪದ ಶಾಪ!! ಶಾಪ ರೂಪದ ವರ!! ಕೊಟ್ಟಿದ್ದು ಊರ್ವಶಿ!!


ಸನ್ಯಾಸ, ಮೋಹ, 'ಬಿಡದಿ'ರುವ ಕಾಮ, ಶಿಕ್ಷೆ, ಪಲಾಯನ, ಕಾನೂನು, 

ದುರ್ಗದೆತ್ತರದ ಜನರ ನಂಬಿಕೆ, ಧರ್ಮದ ಕೋಟೆಗಳೆಲ್ಲ ಸದ್ದು ಮಾಡಿ ಸುದ್ದಿಯಾಗುವ ಕಾಲಕ್ಕೆ..... ಸ್ವರ್ಗಕ್ಕೆ ಹೋಗಿ ಬಂದ ತಾಪಸಿ (ಸನ್ಯಾಸಿ) ಅರ್ಜುನನ ವನವಾಸದ ಒಂದು ಕತೆಯನ್ನು ತಾಳ ಮದ್ದಳೆ ರೂಪದಲ್ಲಿ ನೋಡುವ ಬನ್ನಿ.


ಪ್ರಸಂಗ ಊರ್ವಶಿ ಶಾಪ

ಸ್ಥಳ: ಗಣಪತಿ ಪೆಂಡಾಲ್, ಸಿಗದಾಳ್, 

ದಿನಾಂಕ : 03.09.2022  ಸಂಜೆ 7.00 ಗಂಟೆಗೆ.


ಕಾರ್ಯಕ್ರಮದ ವಿಶೇಷತೆ:

೧) ತಾಳಮದ್ದಳೆಯ ಹಿಮ್ಮೇಳದಲ್ಲಿ ಮಹಿಳಾ ಭಾಗವತರು..... ಶ್ರೀಮತಿ ಅಮೃತಾ ಅಡಿಗ, ಪಾಣಾಜೆ.

೨) ಪ್ರಬುದ್ಧ ಮಾತುಗಾರರಾದ ಶ್ರೀ ಅಶೋಕ್ ಭಟ್, ಉಜಿರೆಯವರು ಮಲೆನಾಡಿನ ತಾಳಮದ್ದಳೆಯಲ್ಲಿ....

೩) ಮಾತಿನಲ್ಲೇ ಮೋಡಿ ಮಾಡುವ, ಪ್ರಸಂಗಕರ್ತರೂ ಆದ ಶ್ರೀ ಪವನ್ ಕಿರಣ್‌ಕೆರೆ ಪ್ರಮುಖ ಪಾತ್ರದಲ್ಲಿ....


***

ಎಲ್ಲರಿಗೂ ವೈಯಕ್ತಿಕ ಕರೆ ಮಾಡಲು ಸಾಧ್ಯವಾಗದೇ ಇರುವುದರಿಂದ, ಈ ಪ್ರೀತಿಯ ಆತ್ಮೀಯ ಆಹ್ವಾನವನ್ನೇ ವೈಯಕ್ತಿಕ ಕರೆ ಎಂದು ಪರಿಗಣಿಸಿ ತಾಳಮದ್ದಳೆಗೆ ಬಂದು ನೋಡಿ ಹಾರೈಸಿ ಶ್ರೀ ಗಣಪತಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಈ ಮೂಲಕ ಕೋರಿಕೆ.

ಈ ಕತೆ ಕೇಳಲು ದೊರೆವುದು ಜನರಿಗೆ ದೋಷದ ಪರಿಹಾರ

03.09.2022 ಸಂಜೆ 7.00 ಗಂಟೆಗೆ ಭೇಟಿಯಾಗೋಣ, ಬನ್ನಿ.


-ಅರವಿಂದ ಸಿಗದಾಳ್, ಮೇಲುಕೊಪ್ಪ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top