ಯಕ್ಷ ಸುಪ್ರಸನ್ನ- ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ- ಯಕ್ಷಗಾನವೇ ವೃತ್ತಿ, ಪ್ರವೃತ್ತಿ ಎಲ್ಲವೂ

Upayuktha
0

ವಸ್ತ್ರವಿನ್ಯಾಸದ ಮೆರುಗು, ಕುಣಿತದ ಶ್ರೀಮಂತಿಕೆ, ಮಾತುಗಾರಿಕೆಯ ಅಬ್ಬರದಲ್ಲಿ ಪ್ರೇಕ್ಷಕರನ್ನು ರಂಜಿಸುವ ಕಲೆಯ ಮತ್ತೊಂದು ಹೆಸರೇ ಯಕ್ಷಗಾನ. ಯಕ್ಷಗಾನವನ್ನೇ ವೃತ್ತಿಯಾಗಿಸಿಕೊಂಡು ತಮ್ಮದೇ ವಿಶೇಷ ಶೈಲಿಯ ಮೂಲಕ ಜನಪ್ರಿಯತೆ ಗಳಿಸಿದ ಕಲಾವಿದ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ.


ಉಡುಪಿ ಜಿಲ್ಲೆಯ ಮಂದಾರ್ತಿಯ ಶ್ರೀಮತಿ ಸುಲೋಚನಾ ಹಾಗೂ ಗಂಗಾಧರ್ ಶೆಟ್ಟಿಗಾರ್ ಇವರ ಮಗನಾಗಿ ೧೪.೦೭.೧೯೮೫ ರಂದು ಪ್ರಸನ್ನ ಶೆಟ್ಟಿಗಾರ್ ಅವರ ಜನನ. ದ್ವಿತೀಯ ಪಿಯುಸಿ ವರೆಗೆ ವಿದ್ಯಾಭ್ಯಾಸ. ಟಿ.ಹಿರಿಯಣ್ಣ ಶೆಟ್ಟಿಗಾರ್ ತಂತ್ರಾಡಿ ಮಕ್ಕಳ ಮೇಳ ಇವರ ಯಕ್ಷಗಾನದ ಗುರುಗಳು. ಯಕ್ಷಗಾನದ ತವರೂರಾದ ಮಂದಾರ್ತಿಯಲ್ಲಿ ಆಗುತ್ತಿದ್ದ ಯಕ್ಷಗಾನವನ್ನು ನೋಡಿ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ಶೆಟ್ಟಿಗಾರ್.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ :-

ಪ್ರಸಂಗ ಪ್ರತಿ ನೋಡುವುದು, ಪುರಾಣ ಪುಸ್ತಕ ಓದುವುದು, ಹಿರಿಯ ಕಲಾವಿದರ ಜೊತೆ ಸಮಾಲೋಚನೆ ಮಾಡಿ ತಯಾರು ಆಗುತ್ತೇನೆ ಎಂದು ಶೆಟ್ಟಿಗಾರ್ ಅವರು ಹೇಳುತ್ತಾರೆ.


ದಕ್ಷಯಜ್ಞ, ಹರಿಶ್ಚಂದ್ರ, ಶ್ರೀ ಕೃಷ್ಣ ಪಾರಿಜಾತ, ಭೀಷ್ಮ ವಿಜಯ, ಶ್ರೀ ರಾಮ ಪಟ್ಟಾಭಿಷೇಕ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.

ಈಶ್ವರ, ಕರ್ಣ, ಸಾಲ್ವ, ಹರಿಶ್ಚಂದ್ರ, ದುಶ್ಯಾಸನ, ಕಂಸ, ಇತ್ಯಾದಿ ಇವರ ನೆಚ್ಚಿನ ವೇಷಗಳು.


ಯಕ್ಷಗಾನ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ:-

ಅನೇಕ ಬದಲಾವಣೆಗಳೊಂದಿಗೆ ಉತ್ತಮ ಸ್ಥಿತಿಯಲ್ಲಿದೆ.


ಯಕ್ಷಗಾನ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ:-

ಪ್ರೇಕ್ಷಕರಿಂದ ಉತ್ತಮವಾದ ಬೆಂಬಲ ಸಿಗುತ್ತಿದೆ. ವಿಮರ್ಶೆ ಮಾಡುವ, ಅಭಿಪ್ರಾಯ ತಿಳಿಸುವ ಅಧಿಕಾರ ಅವರಿಗಿದೆ. ಎಲ್ಲದನ್ನೂ ಸ್ವೀಕರಿಸಿ ರಂಗದಲ್ಲಿ ಒಪ್ಪಿಸುವುದಕ್ಕೆ ಕಲಾವಿದನಿಗೆ ಕಷ್ಟ ಆಗಬಹುದು.


ಯಕ್ಷಗಾನ ರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-

ಪರಿಪೂರ್ಣ ಉತ್ತಮ ಕಲಾವಿದನಾಗಿ ಬೆಳೆದು ಯಕ್ಷರಂಗದಲ್ಲಿ ಮುಂದುವರಿಯಬೇಕೆಂಬ ಬಯಕೆ ಇದೆ.


ಮಂದಾರ್ತಿ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.

ಹಲವಾರು ಸಂಘ ಸಂಸ್ಥೆಗಳು ಇವರಿಗೆ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.


ಪ್ರಸನ್ನ ಶೆಟ್ಟಿಗಾರ್ ಅವರು ವೀಣಾ ಇವರನ್ನು ವಿವಾಹವಾಗಿ ಮಗಳು ಧನಿಷ್ಠಾ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


#Photos_by:- S.G Bhagwat Clicks, Praveen Photography, Sudarshan Mandarthi, Prashanth Malyadi, Nagaprasad, M.B.T.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top