ಆ.8ರವರೆಗೆ ಕರ್ನಾಟಕಕ್ಕೆ ಭಾರಿ ಮಳೆ: ರೆಡ್‌ ಅಲರ್ಟ್ ಘೋಷಣೆ

Upayuktha
0


ಬೆಂಗಳೂರು: ಕರ್ನಾಟಕದ ಕಾರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ಅತ್ಯಂತ ಚುರುಕಾಗಿರುವ ಮುಂಗಾರು ಮಳೆ ಆಗಸ್ಟ್ 8ರವರೆಗೆ ಹೀಗೆ ಮುಂದುವರಿಯಲಿದೆ. ಇದರಲ್ಲಿ ಎರಡು ದಿನ ಆರು ಜಿಲ್ಲೆಗಳಿಗೆ 'ರೆಡ್‌ ಅಲರ್ಟ್' ಘೋಷಿಸಲಾಗಿದೆ.


ಶನಿವಾರದವರೆಗೆ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಹಾಗೂ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಅಬ್ಬರಿಸಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ಕಳೆದ ಎರಡು ದಿನದಿಂದ ರಾಜ್ಯಾದ್ಯಂತ ವರುಣನ ಆರ್ಭಟ ಮುಂದುವರಿದ್ದು, ಹೀಗೆಯೆ ಮುಂದಿನ ಐದು ದಿನಗಳವರೆಗೆ ಮಳೆ ಮುಂದುವರಿಯಲಿದೆ. ಆರಂಭದ ಮೂರು ದಿನ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಹಾಗೂ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿತ್ರದುರ್ಗ, ತುಮಕೂರು ಸೇರಿದಂತೆ ಬಹುತೇಕ ಜಿಲ್ಲೆಗಳ ಅನೇಕ ಕಡೆ ಮಳೆ ಸುರಿಯಲಿದೆ. ಅವುಗಳಗೆ ಆರೆಂಜ್‌ ಮತ್ತು ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ದಕ್ಷಿಣ ಕನ್ನಡದಲ್ಲಿ ಅಧಿಕ ಮಳೆ ದಾಖಲು:

ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ರಾಜ್ಯದ ನಾನಾ ಕಡೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಬಿದ್ದಿದೆ. ಇದರಲ್ಲಿ ದಕ್ಷಿಣ ಕನ್ನಡದ ಸುಬ್ರಹ್ಮಣ್ಯದಲ್ಲಿ 17ಸೆಂ.ಮೀ, ಕೊಟ್ಟಿಗೆಹಾರದಲ್ಲಿ 13ಸೆಂ.ಮೀ. ಮಳೆ ಆಗಿದೆ. ಉಳಿದಂತೆ ಹೊಸಕೋಟೆ 12ಸೆಂ.ಮೀ, ಮುಲ್ಕಿ, ಭಾಗಮಂಡದಲ್ಲಿ ತಲಾ 11ಸೆಂ.ಮೀ ಮಳೆ ದಾಖಲಾಗಿದೆ.


ಅಲ್ಲದೇ ವಿರಾಜಪೇಟೆ, ಮಂಡ್ಯ, ಬೆಂಗಳೂರು, ಮಾಗಡಿ, ಬಾಗಲಕೋಟೆ, ಕಲಬುರಗಿ, ಹಾಸನ, ವಿಜಯಪುರ, ಗದಗ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಅಲ್ಲಲ್ಲಿ ಜೋರು ಮಳೆ ಆಗಿದೆ. ಸಮುದ್ರ ತೀರದಲ್ಲಿ ಗಾಳಿಯ ವೇಗ ಗಂಟೆಗೆ ಸುಮಾರು 60ಕಿ.ಮೀ ಇರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top