ಬ್ರಿಟಿಷರ ಕಾಲದಲ್ಲಿದ್ದ ಯಕ್ಷಗಾನ ಸಂಘದ ಸಾಧನೆ ದಾಖಲಾರ್ಹ: ರವಿಚಂದ್ರ ಶೆಟ್ಟಿ

Upayuktha
0

ಮಂಗಳೂರು: ಬ್ರಿಟಿಷರ ಆಳ್ವಿಕೆಯ ಕಾಲದಲ್ಲೂ ಇದ್ದ ಸಂಘ ಎನ್ನುವುದು ನಿಜಕ್ಕೂ ಆಶ್ಚರ್ಯದ ವಿಚಾರ.  ಅಗಲಿದ ಕಲಾವಿದರ ಸಂಸ್ಮರಣೆ, ಹಿರಿಯ ಕಲಾವಿದರ ಸಂಮಾನ ನಿಜಕ್ಕೂ ಅಭಿನಂದನೀಯ. ಇನ್ನಷ್ಟು ಕೀರ್ತಿ ಶ್ರೀ ವಾಗೀಶ್ವರೀ ಯಕ್ಷಗಾನ ಸಂಘಕ್ಕೆ ಸಿಗಲಿ ಎಂದು ಹಾಪ್ ಕಾಮ್ಸ್, ಮಂಗಳೂರು ಇದರ ಪ್ರಬಂಧಕ, ಪಟ್ಲ ಟ್ರಸ್ಟ್‌ನ ಟ್ರಸ್ಟಿ ಶ್ರೀ ರವಿಚಂದ್ರ ಶೆಟ್ಟಿ ಹೇಳಿದರು.


ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ, ಶ್ರೀ ವಾಗೀಶ್ವರೀ ಯಕ್ಷಗಾನ ಸಂಘದ ಶತಮಾನೋತ್ಸವದ 23ನೆಯ ಸರಣಿಯ ಅಧ್ಯಕ್ಷೀಯ ಭಾಷಣದಲ್ಲಿ ಅವರು ಮಾತನಾಡಿದರು.


ಕೀರ್ತಿಶೇಷ ಕಾವೂರು ಕೇಶವ ಇವರ ಸಂಸ್ಮರಣೆಯನ್ನು ಅಶೋಕ್ ಬೋಳೂರು ನಿರ್ವಹಿಸಿದರು. ಹಲವು ಪ್ರಸಂಗಗಳನ್ನು ರಚಿಸಿ, ಹಲವು ಕಲಾವಿದರನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಪ್ರಖ್ಯಾತ ಸ್ತ್ರೀ ವೇಷಧಾರಿಯಾಗಿ, ಮೇಳಗಳ ಸಂಚಾಲಕ ರಾಗಿ ಯಕ್ಷಗಾನ ಕ್ಷೇತ್ರಕ್ಕೆ ಕೇಶವರು ನೀಡಿದ ಕೊಡುಗೆಯನ್ನು ಸ್ಮರಿಸಿದರು.


ಸುಬ್ರಹ್ಮಣ್ಯ ಹೊಳ್ಳ, ಶಕ್ತಿನಗರ, ಇವರ ಅಭಿನಂದನೆಯನ್ನು ಶಿವಪ್ರಸಾದ್ ಪ್ರಭು ಮಾಡಿದರು.

ವೇಷಧಾರಿಯಾಗಿ ಹಲವು ಮೇಳಗಳಲ್ಲಿ ದುಡಿದು, ಇತ್ತೀಚಿಗೆ ಮುಖ ವರ್ಣಿಕೆಯ ವೃತ್ತಿಯಲ್ಲಿ ಕಲಾ ಸೇವೆಯನ್ನು ಮಾಡುತ್ತಿದ್ದಾರೆ. ನಮ್ಮ ಸಂಘದಲ್ಲಿ ಹಲವು ವರ್ಷಗಳಿಂದ ಸೇವೆಯನ್ನು ಮಾಡುತ್ತಿರುವ ಹೊಳ್ಳರನ್ನು ಸಂಮಾನಿಸುವುದು ಸಂತೋಷದ ವಿಷಯ ಎಂದರು.


ಸುಬ್ರಹ್ಮಣ್ಯ ಹೊಳ್ಳ, ಸಂಘಕ್ಕೆ ತಾನು ಸಲ್ಲಿಸಿದ ಸೇವೆಯನ್ನು ಗುರುತಿಸಿ ಸಂಮಾನಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು.


"ಇತ್ತೀಚಿನ ದಿನಗಳಲ್ಲಿ ವಿಮರ್ಶಕರ ಸಂಖ್ಯೆ ಪ್ರತಿಯೊಂದು ಕಲಾಪ್ರಕಾರಗಳಲ್ಲಿ ನಾವು ಹೆಚ್ಚಾಗಿ ಕಾಣುತ್ತೇವೆ. ವಿಮರ್ಶೆಯನ್ನೇ ಮಾಡುತ್ತಾ ತಲೆಯ ಮಾಧುರ್ಯವನ್ನು ಸವಿಯುವಲ್ಲಿ ಅವರು ಅಸಮರ್ಥರಾಗುತ್ತಾರೆ. ಕಲಾಪ್ರಕಾರವನ್ನು ಒಟ್ಟಂದದಲ್ಲಿ ಸವಿಯುವಂತಹ ಮನಸ್ಥಿತಿ ಬಂದಾಗ ಕಲೆಗಳು ಮತ್ತಷ್ಟು ಬೆಳೆ ಯುವುದಕ್ಕೆ ಕಾರಣವಾಗುತ್ತದೆ. ನೂರು ವರ್ಷಗಳ ಕಾಲ ಕ್ರಿಯಾಶೀಲರಾಗಿ, ನಿರಂತತೆಯನ್ನು ಸಾಧಿಸಿಕೊಂಡು ಸಂಘವನ್ನು ನಡೆಸಿಕೊಂಡು ಬಂದಂತಹ ಸಂಘ ಇದು. ಸ್ವಾತಂತ್ರೋತ್ಸವದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನೂರುವರ್ಷಗಳ ಯಕ್ಷಗಾನ ಕಲಾವರ್ಧಕ ಸಂಘದ ಬಗ್ಗೆ ಪತ್ರಿಕೆಯಲ್ಲಿ ಬರೆಯಬೇಕಾದುದು ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ಶ್ರಮಿಕರ ರಂಗಭೂಮಿಯೇ ಯಕ್ಷಗಾನ ಯಕ್ಷಗಾನದಲ್ಲಿ ಗಳಿಸುವಂತಹುದು ಅರಿವು ಮಾತ್ರ.ಅರಿವು ಸಂಸ್ಕಾರವನ್ನು ನೀಡುತ್ತದೆ ಅದೇ ರೀತಿ ಸಂಸ್ಕೃತಿಯನ್ನು ಬೆಳೆಸುತ್ತದೆ ಅಂತಹ ಒಂದು ಯಕ್ಷಗಾನ ಕಲಾಸಂಘದ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ" ಎಂದು ಕಣಿಪುರ ಪತ್ರಿಕೆಯ ಪ್ರಧಾನ ಸಂಪಾದಕ, ಎಂ. ನಾರಾಯಣ ಚಂಬಲ್ತಿಮಾರ್ ತಿಳಿಸಿದರು.


ಬಿ. ಟಿ. ಕುಲಾಲ್ ಸಂಮಾನ ಪತ್ರವನ್ನು ವಾಚಿಸಿದರು. ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಿ.ಎಸ್, ಭಂಢಾರಿ, ಕೋಶಾಧಿಕಾರಿ ಶಿವಪ್ರಸಾದ್ ಪ್ರಭು, ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್, ಅಶೋಕ್ ಬೋಳೂರು ಉಪಸ್ಥಿತರಿದ್ದರು. ಶ್ರೀಮತಿ ಶೋಭಾ ಐತಾಳ್ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top