ಧರ್ಮತ್ತಡ್ಕ ಶಾಲೆಯಲ್ಲಿ ಥ್ರೋಬಾಲ್ ಚಾಂಪಿಯನ್‌ಶಿಪ್ ಪಂದ್ಯಾಟ

Upayuktha
1


ಧರ್ಮತ್ತಡ್ಕ: ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ 7ನೇ ಕಾಸರಗೋಡು ಜಿಲ್ಲಾ ಥ್ರೋ ಬಾಲ್ ಜೂನಿಯರ್ ವಿಭಾಗದ ಚಾಂಪಿಯನ್ಶಿಪ್ ಪಂದ್ಯಾಟವು ಆ. 20ರಂದು ಸಂಪನ್ನಗೊಂಡಿತು.


ಸಭೆಯ ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಥ್ರೋ ಬಾಲ್ ಸಂಘದ ಅಧ್ಯಕ್ಷರಾದ ಸೂರ್ಯನಾರಾಯಣ ಭಟ್ ನಿರ್ವಹಿಸಿದರು. ಥ್ರೋಬಾಲ್ ಆಟವನ್ನು ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್ ಚೆಂಡನ್ನು ಎಸೆಯುವ ಮೂಲಕ ಔಪಚಾರಿಕವಾಗಿ ಉದ್ಘಾಟಿಸಿದರು. ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಎನ್ ರಾಮಚಂದ್ರ ಭಟ್ ಅತಿಥಿ ಯಾಗಿ ಆಗಮಿಸಿ "ನಿರಂತರ ಅಭ್ಯಾಸದಿಂದ ಆಟದಲ್ಲಿ ಉನ್ನತ ಸಾಧನೆ ಗಳಿಸಲು ಸಾಧ್ಯ" ಎಂದು ಹೇಳಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಇ ಎಚ್ ಗೋವಿಂದ ಭಟ್ ಸ್ವಾಗತಿಸಿದರು.


ಶಶಿಕಾಂತ್ ಜಿ ಆರ್, ದೈಹಿಕ ಶಿಕ್ಷಣ ಅಧ್ಯಾಪಕ ಅಗಲ್ಪಾಡಿ ಶಾಲೆ, ಜುಬೈರ್ ದೈ ಹಿಕ ಶಿಕ್ಷಣ ಅಧ್ಯಾಪಕ, ಪೀಸ್ ಪಬ್ಲಿಕ್ ಎಂ ಪಿ ಕ್ಯಾಂಪಸ್ ಕಾಸರಗೋಡು, ಕೇರಳ ರಾಜ್ಯ ಥ್ರೋಬಾಲ್ ಅಸೋಸಿಯೇಷನ್ ನಿರೀಕ್ಷಕರಾದ ಆದಿನಮ್ ಎಂ ಎನ್, ಮಂಜೇಶ್ವರ ಸಬ್ ಜಿಲ್ಲಾ ಸ್ಪೋರ್ಟ್ಸ್ ಆಂಡ್ ಗೇಮ್ಸ್ ಕಾರ್ಯದರ್ಶಿ ಉದಯ ಶೆಟ್ಟಿ, ಸಂತೋಷ್ ಕುಮಾರ್ ಪಿ ಎಚ್ ಕಾರ್ಯದರ್ಶಿ ಕಾಸರಗೋಡು ಜಿಲ್ಲಾ ಥ್ರೋಬಾಲ್ ಸಂಘ ಹಾಗೂ ದೈಹಿಕ ಶಿಕ್ಷಣ ಅಧ್ಯಾಪಕ ಮಹಾಜನ ಸಂಸ್ಕೃತ ಕಾಲೇಜು ನೀರ್ಚಾಲು, ಮೊಹಮದ್ ಫಹದ್ ದೈಹಿಕ ಶಿಕ್ಷಣ ಅಧ್ಯಾಪಕ ಟಿ ಐ ಎಚ್ ಎಸ್ ಎಸ್ ನಾಯಮಾರಮೂಲೆ,  ಸಂತೋಷ್ ಕುಮಾರ್ ಎಂ ದೈಹಿಕ ಶಿಕ್ಷಣ ಅಧ್ಯಾಪಕ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕ. ಮುಂತಾದವರು ಸಹಕರಿಸಿದರು.


ನಂತರ ಜರಗಿದ ಜೂನಿಯರ್ ಹುಡುಗರ ಪಂದ್ಯಾವಳಿಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಪ್ರೌಢಶಾಲೆ ಅಗಲ್ಪಾಡಿ ಪ್ರಥಮ ಸ್ಥಾನ, ಮಹಾಜನ ಸಂಸ್ಕೃತ ಕಾಲೇಜು ನೀರ್ಚಾಲು ದ್ವಿತೀಯ ಸ್ಥಾನ ಹಾಗೂ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕ ತೃತೀಯ ಸ್ಥಾನವನ್ನು ಗಳಿಸಿತು.


ಜೂನಿಯರ್ ಹುಡುಗಿಯರ ಪಂದ್ಯದಲ್ಲಿ  ಅನ್ನಪೂರ್ಣೇಶ್ವರಿ ಪ್ರೌಢಶಾಲೆ ಅಗಲ್ಪಾಡಿ ಪ್ರಥಮ ಸ್ಥಾನ, ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕ ದ್ವಿತೀಯ ಸ್ಥಾನ ಹಾಗೂ ಪೀಸ್ ಪಬ್ಲಿಕ್ ಎಂ ಪಿ ಕ್ಯಾಂಪಸ್ ಕಾಸರಗೋಡು ತೃತೀಯ ಸ್ಥಾನ ಗಳಿಸಿತು.


ಸಮಾರೋಪ ಸಮಾರಂಭ ಸಭೆಯ ಅಧ್ಯಕ್ಷತೆಯನ್ನು ಎನ್ ರಾಮಚಂದ್ರ ಭಟ್ ನಿರ್ವಹಿಸಿದರು. ಕೇರಳ ಥ್ರೋ ಬಾಲ್ ಸಂಘದ ಅಧ್ಯಕ್ಷ ಕೆ ಎಂ ಬಲ್ಲಾಳ್ ಉಪಸ್ಥಿತರಿದ್ದು "ಕ್ರೀಡೆಯಲ್ಲಿ ಉನ್ನತ ಜಯಗಳಿಸುವ ಮೂಲಕ ಉನ್ನತ ಹುದ್ದೆಯನ್ನೇರಲು ಸಾಧ್ಯ" ಎಂದು ನುಡಿದರು.


ಬಹುಮಾನ ವಿತರಣೆಯನ್ನು ಎನ್ ಶಂಕರನಾರಾಯಣ ಭಟ್, ಎನ್ ಮಹಾಲಿಂಗ ಭಟ್, ಯು ಪಿ ಶಾಲೆಯ ಮುಖ್ಯೋಪಾಧ್ಯಾಯರು. ಇ ಎಚ್ ಗೋವಿಂದ ಭಟ್, ಬಶೀರ್ ನಿವೃತ್ತ ದೈಹಿಕ ಶಿಕ್ಷಣ ಅಧ್ಯಾಪಕ, ಶಶಿಕಾಂತ ಜಿ ಆರ್ ನಿರ್ವಹಿಸಿದರು. ಸಂತೋಷ್ ಕುಮಾರ್ ಎಂ ಸ್ವಾಗತಿಸಿ, ಸಂತೋಷ್ ಪಿ ಎಚ್ ಧನ್ಯವಾದ ಸಮರ್ಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

1 تعليقات
إرسال تعليق
Mandovi Motors Presents MONSOON BONANZA
Mandovi Motors Presents MONSOON BONANZA
To Top