ಶ್ರೀನಿವಾಸ ವಿಶ್ವವಿದ್ಯಾನಿಲಯ ಮತ್ತು ಕೆನರಾ ಬ್ಯಾಂಕ್ ನಡುವೆ ಎಂಒಯು

Upayuktha
0

ಮಂಗಳೂರು: ಕೆನರಾ ಬ್ಯಾಂಕ್ ಮತ್ತು ಶ್ರೀನಿವಾಸ ವಿಶ್ವವಿದ್ಯಾನಿಲಯ ಮತ್ತು ಶ್ರೀನಿವಾಸ ಗ್ರೂಪ್ ಕಾಲೇಜುಗಳ ನಡುವೆ 17 ಆಗಸ್ಟ್ 2022 ರಂದು ತಿಳುವಳಿಕೆ ಪತ್ರ (MOU)ಗೆ ಸಹಿ ಹಾಕಲಾಯಿತು.

ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಕೋರ್ಸ್‌ಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲವನ್ನು ನೀಡುವ ಉದ್ದೇಶವನ್ನು ಈ ಸಹಯೋಗ ಹೊಂದಿದೆ.


ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಮತ್ತು ಎ. ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಸಿಎ. ಎ. ರಾಘವೇಂದ್ರ ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹ ಕುಲಾಧಿಪತಿ ಮತ್ತು ಎ. ಶಾಮರಾವ್ ಫೌಂಡೇಶನ್‌ ಉಪಾಧ್ಯಕ್ಷ ಡಾ. ಎ. ಶ್ರೀನಿವಾಸ್ ರಾವ್, ಕೆನರಾ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕಿ ಎಸ್. ಸುಚಿತ್ರಾ, ವಿಭಾಗೀಯ ವ್ಯವಸ್ಥಾಪಕ ಪ್ರಭು ಎಚ್. ವಿ., ಮುಖ್ಯ ಪ್ರಬಂಧಕ ಎಂ. ಪಿ. ನಂದನ, ಹಿರಿಯ ವ್ಯವಸ್ಥಾಪಕ ಎನ್. ರವಿಕುಮಾರ್, ಶ್ರೀನಿವಾಸ ವಿವಿ ಉಪಕುಲಪತಿ ಡಾ. ಪಿ. ಎಸ್. ಐತಾಳ್, ಮೌಲ್ಯಮಾಪನ ಕುಲಸಚಿವ ಡಾ. ಶ್ರೀನಿವಾಸ ಮಯ್ಯ ಡಿ., ಅಭಿವೃದ್ಧಿ ರಿಜಿಸ್ಟ್ರಾರ್ ಡಾ. ಅಜಯ್ ಕುಮಾರ್, ರಿಜಿಸ್ಟ್ರಾರ್ ಡಾ. ಅನಿಲ್ ಕುಮಾರ್, ಇನ್ ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್ ಡೀನ್ ಪ್ರೊ. ಪವಿತ್ರ ಕುಮಾರಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
To Top