
ತನ್ನ ಪ್ರೊಮೋಷನ್ ನ ಪದವಿಯ ಆಯ್ಕೆಯಲ್ಲಿ ಷಣ್ಮುಗ ಒಪ್ಪಿಕೊಂಡದ್ದು ವಿದೇಶಿ ಪ್ರವಾಸದ ಟ್ರೈನೆರ್ ಹುದ್ದೆಯನ್ನು, ಅದು ಅವನ ಕನಸಿನ ಕೆಲಸವೂ ಆಗಿತ್ತು. ”ಹೌದು ನಾನು ಅಮೇರಿಕಕ್ಕೆ ಹೋಗುತ್ತೇನೆ, ಹೌದು ಅಮೇರಿಕ- ನನ್ನ ಕನಸಿನ ಊರು, ಅಲ್ಲಿ ಮೂರು ತಿಂಗಳು”. ಹಾಗೆಂದು ಆತ ತನ್ನ ಟಿಕೆಟ್ ವ್ಯವಸ್ಥೆ ಮತ್ತು ವೀಸಾಕ್ಕೆಂದು ಚೆನ್ನೈನ ಅಮೇರಿಕ ಕೌನ್ಸುಲೇಟ್ ಗೆ ಹೋಗಿಬಂದಿದ್ದೂ ಆಯಿತು. ಇಮ್ಮಿಗ್ರೇಷನ್ ಕ್ಲೀಯರೆನ್ಸ್ ಎಲ್ಲ ಪಡೆದಾಯಿತು, ಇನ್ನೇನು ಮುಂದಿನ ಬುಧವಾರ ರಾತ್ರಿ ಹನ್ನೆರಡು ಗಂಟೆಗೆ ನಾನು ಬೆಂಗಳೂರಿನಿಂದ ಸಿಂಗಾಪುರ ಮತ್ತೆ ಅಲ್ಲಿಂದ ಬೆಳಿಗ್ಗೆ ೧೧ ಗಂಟೆಗೆ, ಅಂದರೆ ಸಿಂಗಪುರ ಸಮಯ, ಅಲ್ಲಿಂದ ಹೊರಟರೆ ಮತ್ತೆ ಹದಿನಾಲ್ಕು ಗಂಟೆಯ ಲೋಸ್ ಏಂಜೆಲ್ಸ್ ಪಯಣ. ಅಲ್ಲಿಯ ತಮ್ಮ ಕಾರ್ಯಾಲಯದಿಂದ ಬಂದು ಒಬ್ಬರು ಅವನನ್ನು ಸ್ವಾಗತಿಸಿ ಉಳಕೊಳ್ಳುವ ವ್ಯವಸ್ಥೆ ಮತ್ತು ಮರುದಿನ ಕಾರ್ಯಾಲಯಕ್ಕೂ ಕರೆದುಕೊಂಡು ಹೋಗಿ ಪರಿಚಯಿಸುವ ಕಾರ್ಯಮಗಳ ಪಟ್ಟಿಯು ಷಣ್ಮುಗನ ಕೈಸೇರಿತ್ತು. ಈಗ ತಾನು ಕಾರ್ಯೋನ್ಮುಖನಾಗ ಬೇಕು. ಅಮೆರಿಕನ್ ಟೂರಿಸ್ಟರ್ ನ ಒಂದು ಪರ್ಮಿಷನ್ ಮಿತಿಯ ಸೂಟ್ ಕೇಸ್, ಮತ್ತೆ ತನ್ನ ಲಾಪ್ ಟೊಪ್ ಇಡಲು ಒಂದು ಹೆಗಲ ಚೀಲ ಅದರಲ್ಲಿ ಅದರ ಪರಿಕರಗಳನ್ನೂ ಇಡಲು ಜಾಗವಿತ್ತು. ಇದಲ್ಲದೆ ಒಂದು ಬೆನ್ನ ಚೀಲ, ಅದರಲ್ಲಿ ತನ್ನ ಪಾಸ್ಪೋರ್ಟ್ ವೀಸಾ ಕೋಪಿಗಳು ಇತ್ಯಾದಿ ಪ್ರಯಾಣಕ್ಕೆ ಆರ್ಥಿಕ ಸವಲತ್ತನ್ನು ಒದಗಿಸುವ ಹಲವಾರು ಕಾರ್ಡ್ ಗಳು ಇದ್ದವು. ಜೊತೆಗೆ ಒಂದು ಮುನ್ನೂರು ಡಾಲರ್ ಗಳ ನಗದು ಹಣ, ಇಪ್ಪತ್ತೈದು ಸಾವಿರ ರೂಗಳ ಭಾರತೀಯ ಹಣವೂ ಆ ಚೀಲದಲ್ಲಿ ಇದ್ದವು.
ಷಣ್ಮುಗ ಇನ್ನೇನು ಹೊರಡುವ ದಿನ ಬಂದೇ ಬಂದಿತು. ತನ್ನ ಸಾಮಾನು ಸರಂಜಾಮುಗಳನ್ನು ಭದ್ರವಾಗಿ ಕಟ್ಟಿ ಎರಡೆರಡು ಬಾರಿ ಚೆಕ್ ಮಾಡಿ ಒಂದು ಟ್ಯಾಕ್ಸಿಯನ್ನು ತರಿಸಿ, ಅಪ್ಪ ಅಮ್ಮನನ್ನು ಕೂಡಿಸಿ ಕೊಂಡು ಏರ್ಪೋರ್ಟ್ ಗೆ ಬಂದದ್ದಾಯಿತು. ಮಾಲತಿ ಮತ್ತು ಕಣ್ಣರವರಿಗೆ ಈ ವಿಮಾನ ನಿಲ್ದಾಣವನ್ನು ಕಂಡು ಬಹಳ ಸಂತೋಷವಾಯಿತು. ಅವರು ಹಾರಾಡುವ ವಿಮಾನವನ್ನು ದೂರದಿಂದ ತಲೆಯೆತ್ತಿ ಮೇಲೆ ನೋಡಿದ್ದಿದೆ, ಈಗ ಅದು ಹಾರಾಡುವ ಜಾಗಕ್ಕೇ ಬಂದಿದ್ದೇವೆ. ಮಾಲತಿಗೆ ಯಾಕೋ ಭಯ ”ಮಗಾ,,, ಹೆಂಗೋ..... ಏನೂ ಆಗಲ್ಲ ತಾನೇ” ಎಂದು ಮುಖ ಊದಿಸಿಕೊಂಡಿದ್ದಳು. ”ಅಯ್ಯೋ ಅಮ್ಮ, ಹೋಗು ನೀನು, ಇಷ್ಟು ಜನ ಹೋಗೊಲ್ವೇ, ನಾನು ಸರಿ ಮೂರು ತಿಂಗಳು ಆದ ಮೇಲೆ ಬರುತ್ತೇನೆ, ಮತ್ತೆ ನೋಡುವಾ ಎಂದು” ಸಮಾಧಾನಿಸಿದ್ದ. ಕಣ್ಣ ಮಾತ್ರ ಏನನ್ನೂ ಮಾತನಾಡದೆ ಸುಮ್ಮನೆ ತನ್ನ ಮಗನ ಸಾಧನೆಯನ್ನು ನೋಡುತ್ತಾ ಮೂಕ ಪ್ರೇಕ್ಷಕನಂತೆ ಅಭಿಮಾನದಿಂದ ನೋಡುತ್ತಿದ್ದ. ನೀವಿನ್ನು ಹೋಗಿ ಎಂದು ಅದೇ ಕಾರಿನಲ್ಲಿ ಮನೆಗೆ ವಾಪಾಸು ಕಳುಹಿಸಿ ತಾನು ಚೆಕಿಂಗ್ ಕೌಂಟರ್ ನತ್ತ ಸಾಗಿ ಹೋದ ಷಣ್ಮುಗ,- ದಿ ಸೋಫ್ಟ್ ವೇರ್ ಎಂಜಿನಿಯರ್ ಎಂಡ್ ದ ಟ್ರೈನರ್, ದ ಸನ್ ಆಫ್ ಕಣ್ಣ ಮೇಸ್ತ್ರಿ ಎನ್ದ್ ದ ಡೊಮೆಸ್ಟಿಕ್ ಹೆಲ್ಪ್ ಮಾಲತಿ.
ಹಿಂದಿನ ಭಾಗಗಳನ್ನು ಇಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ:
ಬೆಂಗಳೂರಿನಿಂದ ಸಿಂಗಾಪುರ್ ಗೆ ಎರಡುವರೆ ಗಂಟೆಗಳ ಪಯಣ, ರಾತ್ರಿ ಪಾಳಿಯ ವಿಮಾನ ಅದು ಹೊರಡುವಾಗಲೇ ಸಾಧಾರಣ ಕತ್ತಲ ರಾತ್ರಿ. ವಿಮಾನದಲ್ಲಿ ಕಾಫಿ ತಿಂಡಿಗಳಾದವು, ಹಾಗೆಯೇ ಟಿ.ವಿ.ಯನ್ನು ತಿರುವಿ ಹಾಕಿ ಒಂದು ಸಿನೆಮ ನೋಡಿದ್ದಾಯಿತು, ಹಾಗೆ ಯಾವಾಗ ನಿದ್ದೆ ಬಂದಿತೋ ಗೊತ್ತಾಗಲಿಲ್ಲ. ಎದ್ದಾಗ ಬೆಳ್ಳಂ ಬೆಳಗಾಗಿತ್ತು. ವಿಮಾನ ಸಿಂಗಾಪುರ್ ನಿಲ್ದಾಣದ ಮೇಲೆ ಸುತ್ತುತ್ತಲೇ ಇತ್ತು. ಇಳಿಯಲು ರನ್ವೇ ಕ್ಲೀಯರ್ ಇಲ್ಲ, ಇನ್ನೇನು ಹತ್ತು ನಿಮಿಷದಲ್ಲಿ ಇಳಿಯಲಿದ್ದೇವೆಂದು ಪಲೆಟ್ ತನ್ನ ಸಂದೇಶದಲ್ಲಿ ತಿಳಿಸುತ್ತಲೇ ಇದ್ದ. ಷಣ್ಮುಗ ಸೀಟ್ ಬೆಲ್ಟ್ ಕಟ್ಟಿ ತನ್ನ ಬೇಗ್ ಗಳನ್ನು ತನ್ನ ವಶದಲ್ಲಿಟ್ಟು ಇಳಿಯುವ ತಯಾರಿಯಲ್ಲಿದ್ದ. ಉಳಿದ ಪ್ರಯಾಣಿಕರೂ ತಮ್ಮ ತಮ್ಮ ತಯಾರಿಯನ್ನು ಮಾಡ ತೊಡಗಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
(ಶಂಕರ ಭಟ್)