ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಸಂಸ್ಕೃತೋತ್ಸವವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ದೀಪೋಜ್ವಲನದ ಮೂಲಕ ಉದ್ಘಾಟಿಸಿದ, ನರಿಮೊಗರು ಸರಸ್ವತೀ ವಿದ್ಯಾಲಯದ ಅಧ್ಯಕ್ಷರಾದ ಶ್ರೀಅವಿನಾಶ್ ಕೊಡಂಕಿರಿ ಯವರು "ಸಂಸ್ಕೃತ ಭಾಷೆಯು ಸಂವಹನಕ್ಕಷ್ಟೇ ರೂಪಿತವಾದ ಭಾಷೆಯಲ್ಲ ಅದು ವ್ಯಕ್ತಿತ್ವವನ್ನೂ ರೂಪಿಸುತ್ತದೆ" ಎಂದು ಅಭಿಪ್ರಾಯ ಪಟ್ಟರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಶೋಭಾನಾಗರಾಜ್ ರವರು ಮಾತನಾಡುತ್ತಾ "ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆಯನ್ನು ಜಾಗ್ರತಗೊಳಿಸಿ, ಅರಿವಿನ ಹಾದಿಯಲ್ಲಿ ಮುನ್ನಡೆಸುವ ಸಂಸ್ಕೃತ ಭಾಷೆಯನ್ನು ಕಲಿಯುವುದು ಅತ್ಯಗತ್ಯ" ಎಂದು ನುಡಿದರು. ಪ್ರಾಥಮಿಕ ಶಾಲಾ ಸಂಯೋಜಕಿ ಶ್ರೀಮತಿ ಅಮೃತವಾಣಿ, ಸಂಸ್ಕೃತ ಶಿಕ್ಷಕರಾದ ಚೇತನಾ, ಅರ್ಚನಾ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ವಿಖ್ಯಾತಿ ಬೆಜ್ಜಂಗಳ(10) ಮತ್ತು ಸತ್ಯಪ್ರಸಾದ(10) ಕಾರ್ಯಕ್ರಮವನ್ನು ನಿರೂಪಿಸಿದರು. ಅಕ್ಷಯ್ ಡಿ ಎಲ್ (10) ಸ್ವಾಗತಿಸಿ ಸ್ವಾತಿ(10) ವಂದನಾರ್ಪಣೆಯನ್ನು ಮಾಡಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಂಸ್ಕೃತ ಭಾಷೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಸುದಾನ ಶಾಲೆಯ ಲಹರಿ ಸಾಹಿತ್ಯ ಸಂಘವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.