ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು: ಕುಮಮೊಟೊ ವಿವಿ ಜೊತೆಗಿನ ಶೈಕ್ಷಣಿಕ ಒಡಂಬಡಿಕೆ ನವೀಕರಣ

Upayuktha
0

 

ಮೂಡುಬಿದಿರೆ: ಇಂಜಿನಿಯರಿಂಗ್ ಶಿಕ್ಷಣದಲ್ಲಿ ಆಧುನಿಕ ಅಗತ್ಯತೆ ಮತ್ತು ಕಾರ್ಪೊರೇಟ್ ಸಂಸ್ಥೆಗಳ ನಿರೀಕ್ಷೆಗೆ ತಕ್ಕಂತ ಗುಣಮಟ್ಟದ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ, ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಮತ್ತು ಜಪಾನಿನ ಕುಮಮೊಟೊ ವಿಶ್ವವಿದ್ಯಾಲಯದ ನಡುವೆ ಈ ಹಿಂದೆ ಸಹಿ ಹಾಕಿಲಾಗಿದ್ದ ಮಹತ್ವದ ಶೈಕ್ಷಣಿಕ ಒಪ್ಪಂದವನ್ನು ನವೀಕರಿಸಲಾಯಿತು.


ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರಿಗೆ ಉನ್ನತ ಅಧ್ಯಯನಕ್ಕೆ ಅವಕಾಶ ಕಲ್ಪಿಸುವುದು, ಹೊಸ ಆವಿಷ್ಕಾರಗಳ ಮೂಲಕ ಸಂಶೋಧನೆಗೆ ನೆರವಾಗುವುದು, ಸಂಶೋಧನೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕುಮಮೊಟೊ ವಿಶ್ವವಿದ್ಯಾಲಯದಿಂದ ಸ್ಕಾಲರ್ಶಿಪ್ ಸೌಲಭ್ಯ, ಎರಡೂ ಸಂಸ್ಥೆಗಳು ಜಂಟಿಯಾಗಿ ತಾಂತ್ರಿಕ ಸಮ್ಮೇಳನಗಳನ್ನು ನಡೆಸುವುದು ಹಾಗೂ ವಿದ್ಯಾರ್ಥಿಗಳ ಕಲಿಕಾ ಮತ್ತು ಪ್ರಾಧ್ಯಾಪಕರ ಭೋದನಾ ಗುಣಮಟ್ಟವನ್ನು ಹೆಚ್ಚಿಸಲು ಕಾರ್ಯಗಾರಗಳನ್ನು ಏರ್ಪಡಿಸಲು ಈ ಒಡಂಬಡಿಕೆಯಿಂದ ಸಾಧ್ಯವಾಗುತ್ತದೆ.


ಕುಮಮೊಟೊ ವಿಶ್ವವಿದ್ಯಾಲಯದ ಫಾಕಲ್ಟಿ ಆಫ್ ಅಡ್ವಾನ್ಸ್ಡ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಡೀನ್ ತ್ಸುರೆಕಾವ ಸದಹಿರೊ ಹಾಗೂ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಒಡಂಬಡಿಕೆಗೆ ಸಹಿ ಹಾಕಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top