ಕವನ: ಮಾಡದಿರಿ ಭ್ರೂಣ ಹತ್ಯೆ

Upayuktha
0


ದಯವಿಟ್ಟು ಮಾಡದಿರಿ 

ಹೆಣ್ಣು ಭ್ರೂಣ ಹತ್ಯೆ ! 


ಒಡಲೊಳಗೆ ಮಾಂಸದ ಮುದ್ದೆ ನೀನು 

ನಿನಗೇಕೆ ಈ ಶಿಕ್ಷೆ

ನಿನ್ನ ಕಾಣದ ಮಹಾತಾಯಿಗೆ

ಯಾಕೆ ಈ ಅಗ್ನಿಪರೀಕ್ಷೆ


ಹುಡುಕಿದರು ನಿನ್ನ ಜಾತಕವ

ಮಾಡಿದರೂ ತಾಯಿಗೆ ಸೂತಕವ


ಹೆಣ್ಣನ್ನು ಸೊಸೆಯಾಗಿ ಮಾತ್ರ

ಕಾಣ ಬಯಸುವ ಜಗತ್ತು ನಶ್ವರ

ಹೆಣ್ಣಿಗೆ ಗೌರವ ನೀಡಿ

ಮಗಳಾಗಿ ಬಯಸಿದ್ದಾಗಲೇ

ಈ ವಿಸ್ಮಯ ಜಗತ್ತು ಸರ್ವಲೋಕೋತ್ತರ


ಗಂಡನಿಗೆ ಹೆಂಡತಿಯಾಗಿ 

ಅತ್ತೆ- ಮಾವನಿಗೆ ಸೊಸೆಯಾಗಿ 

ಮನೆಯ ಬೆಳಕಾಗಿ ಉಜ್ವಲಿಸುವಳು

ಈ ಪರಮಪೂಜ್ಯೆ ಹೆಣ್ಣು


ಬರುವ ನೋವನ್ನು ನೀಗಿ 

ಬರುವ ಕಷ್ಟವನ್ನು ಮೆಟ್ಟಿನಿಂತು

ಎಲ್ಲವನ್ನೂ ಸಹಿಸುವವಳು

ಕ್ಷಮಯ ಧರಿತ್ರಿ ಹೆಣ್ಣು

ಭ್ರೂಣದಲ್ಲೇ ರಕ್ತದೋಕ್ಕುಳಿ 

ಬಗೆಯುತ್ತೀರಿ, ಅವಳು ಕೂಡ ಹೆಣ್ಣು..


-ದೀಕ್ಷಿತ ಗಿರೀಶ್ 

ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter
Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top