ಕವನ: ಪ್ರಜಾಹಿತ

Upayuktha
0


 

ರಾಜಕೀಯದ ಹೊಲಸು ಗಬ್ಬೆದ್ದು ನಾರುತಿದೆ

ಪ್ರಜೆಗಳನು ಕಾಡುತ್ತ, ನಾಡನೊಡೆಯುತಿದೆ

ನಿಜ ಬಣ್ಣ ಮರೆಸಿಟ್ಟ ಸ್ವಾರ್ಥ ಸಾಧಕರಿಂಗೆ

ಸಜೆಯನೀವವ ಪ್ರಜೆಯು-ಕವಿತಾಕ್ಷರ


ಸಟೆ, ಮೋಸ, ದುರುಳತನವಿದ್ದರವ ನಾಯಕನು

ಪೀಠವನು ಪಡೆಯುವುದೆ ಅವನ ಗುರಿಯು

ಲೂಟಿ ಮಾಡುತ ಮೆರೆವ, ನಾಡಿನೇಳಿಗೆ ಮರೆವ

ಕೆಟ್ಟ ರಾಜಕರವರು - ಕವಿತಾಕ್ಷರ


ವಂಚಕರ ಗುಂಪಿನಲಿ ಸಜ್ಜನನು ತಬ್ಬಲಿಯು

ಹೊಂಚುತಿರುವುದು  ಕೆಡುಕು ಬಲಿ ಪಡೆಯಲು

ಸಂಚುಗಳ ತಡೆತಡೆದು, ಒಳಿತನ್ನು ಪೋಷಿಸುವ

ಚಿಂತಕನು ನಿಜ ದೊರೆಯು-ಕವಿತಾಕ್ಷರ


ನಯವಿನಯವಿಲ್ಲದಿಹ ದುರುಳರಾಳುವ ಪಕ್ಷ

ನ್ಯಾಯವಿಯುವುದೇನು ಸಾಮಾನ್ಯಗೆ

ರಾಜ್ಯದೇಳಿಗೆಯಲ್ಲಿ  ತನ್ನ ಏಳ್ಗೆಯ ಕಾಣ್ವ

ನಾಯಕನ ಬೆಂಬಲಿಸೋ-ಕವಿತಾಕ್ಷರ


-ಕವಿತಾ ಅಡೂರು, ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter
Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top