ಮಂಗಳೂರು ವಿವಿ ಕಾಲೇಜು: ಯುಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಗೆ ಆಟಗಾರರ ಹರಾಜು

Upayuktha
0

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಗಸ್ಟ್‌ ಎರಡನೇ ವಾರ ನಡೆಯಲಿರುವ ಯುಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಗಾಗಿ ಆಟಗಾರರ ಹರಾಜು ಪ್ರಕ್ರಿಯೆಗೆ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ ಶನಿವಾರ ಚಾಲನೆ ನೀಡಿದರು.


ಪಂದ್ಯಾವಳಿಯ ಲೋಗೋವನ್ನು ಲೋಕಾರ್ಪಣೆ ಮಾಡಿದ್ದ ಪ್ರಾಂಶುಪಾಲರು, ಆಟಗಾರರ ಹರಾಜಿಗೆ ಚಾಲನೆ ನೀಡಿ, “ಈ ವರ್ಷ ಪ್ರಕೃತಿ ನಮ್ಮೊಂದಿಗಿಲ್ಲ. ಶೈಕ್ಷಣಿಕ ಚಟುವಟಿಕೆಗಳೂ ಬಾಧಿತವಾಗಿವೆ. ಇಷ್ಟಾದರೂ ವಿದ್ಯಾರ್ಥಿಗಳ ಉತ್ಸಾಹ ಶ್ಲಾಘನೀಯ,” ಎಂದರು. ಕಾಲೇಜಿನ ದೈಹಿಕ ನಿರ್ದೇಶಕ ಡಾ. ಕೇಶವಮೂರ್ತಿ ಮಾತನಾಡಿ, ಹರಾಜು ಮತ್ತು ಪಂದ್ಯಾವಳಿಯ ನೀತಿ ನಿಯಮಗಳನ್ನು ವಿವರಿಸಿದರು.


ಈ ಯುಸಿಎಂ ಬ್ರಿಗೇಡ್‌, ಯುಸಿಎಂ ರಾಯಲ್ಸ್‌, ಯುಸಿಎಂ ವಾರಿಯರ್ಸ್‌, ಯುಸಿಎಂ ಸ್ಟ್ರೈಕರ್ಸ್‌, ಯುಸಿಎಂ ಜಾಗ್ವಾರ್ಸ್‌, ಯುಸಿಎಂ ಇಲವೆನ್ಸ್‌ ಎಂಬ ಆರು ತಂಡಗಳನ್ನು ರಚಿಸಲಾಗಿದೆ. ಪ್ರತಿಯೊಂದು ತಂಡಕ್ಕೂ 500 ಪಾಯಿಂಟ್ಸ್‌ಗಳಲ್ಲಿ 14 ಆಟಗಾರರನ್ನು ಖರೀದಿಸಲು ಅವಕಾಶವಿತ್ತು. 169 ಆಟಗಾರರು ಹೆಸರು ನೋಂದಾಯಿಸಿದ್ದರು. ಪ್ರಾದ್ಯಾಪಕರಾದ ಡಾ. ಲತಾ ಎ. ಪಂಡಿತ್‌, ಡಾ. ಶಾನಿ ಕೆ ಆರ್‌, ಡಾ. ಜಯರಾಜ್‌ ಕೆ, ಡಾ. ಶೋಭಾ, ಡಾ. ಕುಮಾರಸ್ವಾಮಿ ಮತ್ತು ಡಾ. ಎ. ಸಿದ್ಧಿಕ್‌ ವಿವಿಧ ತಂಡಗಳನ್ನು ಪ್ರಾಯೋಜಿಸಿದ್ದರು.


ವಿದ್ಯಾರ್ಥಿ ಸಂಘದ ಅಧ್ಯಕ್ಷ ಧೀರಜ್‌, ಕ್ರೀಡಾ ಕಾರ್ಯದರ್ಶಿಗಳಾದ ನಚಿಕೇತ್‌, ದಿಯಾ ಮೊದಲಾದವರು ಹಾಜರಿದ್ದರು. ವಿದ್ಯಾರ್ಥಿ ಕೀರ್ತನ್‌ ಹರಾಜು ನಡೆಸಿಕೊಟ್ಟರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top