ಉಜಿರೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

Upayuktha
0


ಉಜಿರೆ: ಶ್ರೀ ಧ. ಮಂ ಕಾಲೇಜಿನ ಎನ್‌ಎಸ್‌ಎಸ್‌ ಘಟಕದ ನೇತೃತ್ವದಲ್ಲಿ ಯೂಥ್‌ ರೆಡ್‌ ಕ್ರಾಸ್‌, ರೋವರ್ಸ್‌ & ರೇಂಜರ್ಸ್‌, ಸಾಮಾಜಿಕ ಜವಾಬ್ದಾರಿಗಳ ಉಪಕ್ರಮಗಳ ಸಮಿತಿಗಳ ಆಶ್ರಯದಲ್ಲಿ ರಕ್ತ ನಿಧಿ, ಎಜೆ ಆಸ್ಪತ್ರೆ, ಮಂಗಳೂರು ಮತ್ತು ಎಸ್‌.ಡಿ.ಎಂ. ಆಸ್ಪತ್ರೆ, ಉಜಿರೆ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು.


ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರೋಗವಿಜ್ಞಾನ ವಿಭಾಗದ ವ್ಯವಸ್ಥಾಪಕ ನಿರ್ದೇಶಕಿ ಡಾ. ತೇಜಸ್ವಿನಿ ಮಾತನಾಡಿ, ರಕ್ತದಾನದ ಮಹತ್ವವನ್ನು ತಿಳಿಸಿದರು.


ಈ ಸಂದರ್ಭ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಎ ಜಯಕುಮಾರ್‌ ಶೆಟ್ಟಿ ಮಾತನಾಡಿ ರಕ್ತದಾನ ಶಿಬಿರ ಆಯೋಜಿಸಲು ನಮ್ಮ ಕಾಲೇಜಿನ ಎನ್‌ಎಸ್‌ಎಸ್‌, ರೋವರ್ಸ್‌ & ರೇಂಜರ್ಸ್‌, ಯೂತ್‌ ರೆಡ್‌ ಕ್ರಾಸ್‌ ಯಾವತ್ತೂ ಮುಂಚೂಣಿಯಲ್ಲಿರುತ್ತವೆ, ನಮ್ಮೊಂದಿಗೆ ಮುಂದೆಯೂ ಕೈ ಜೋಡಿಸಿ ಎಂದು ಎಜೆ ಹಾಗೂ ಎಸ್‌.ಡಿ.ಎಂ ಆಸ್ಪತ್ರೆಗಳಲ್ಲಿ ಮನವಿ ಮಾಡಿದರು.


ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಒಟ್ಟು 155 ಯೂನಿಟ್‌ ರಕ್ತವನ್ನು ಸಂಗ್ರಹಿಸಲಾಯಿತು.


ಈ ಸಂದರ್ಭ ಎನ್‌ಎಸ್‌ಎಸ್‌, ಯೂಥ್‌ ರೆಡ್‌ ಕ್ರಾಸ್‌, ರೇಂಜರ್ಸ್‌ ರೋವರ್ಸ್‌, ಸಾಮಾಜಿಕ ಜವಾಬ್ದಾರಿಗಳ ಉಪಕ್ರಮಗಳ ಸಮಿತಿಗಳ ಸಂಯೋಜಕರು ಉಪಸ್ಥಿತರಿದ್ದರು.


ವಿದ್ಯಾರ್ಥಿನಿ ಸ್ಕಂದನಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನವನೀತ್‌ ಕೃಷ್ಣ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top