ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣವೇಷ ಮತ್ತು ಚಿತ್ರಕಲಾ ಸ್ಪರ್ಧೆಗಳು ನಗರದ ಬೋಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಏರ್ಪಟ್ಟಿತು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿ, ಯುವ ಬಳಗ ಅಯುಧ್ ಮತ್ತು ಬೋಳೂರಿನ ಅಮೃತ ವಿದ್ಯಾಲಯ ಜೊತೆಯಾಗಿ ಕಾರ್ಯಕ್ರಮ ಏರ್ಪಡಿಸಿದ್ದವು.
ಸ್ಪರ್ಧೆಗಳನ್ನು ಅಮೃತಾನಂದಮಯಿ ಮಠದ ಮುಖ್ಯಸ್ಥೆ ಸ್ವಾಮಿನಿ ಮಂಗಳಾಮೃತ ಪ್ರಾಣ ದೀಪ ಬೆಳಗಿ ಉದ್ಘಾಟಿಸಿ ಕೃಷ್ಣನ ಸಂದೇಶವನ್ನು ತಿಳಿಸಿದರು. ಸೇವಾ ಸಮಿತಿ ಅಧ್ಯಕ್ಷರಾದ ಡಾ. ವಸಂತಕುಮಾರ ಪೆರ್ಲ, ಶಾಲಾ ಪ್ರಾಂಶುಪಾಲೆ ಆರತಿ ಶೆಟ್ಟಿ ಮತ್ತು ಅಯುಧ್ ಅಧ್ಯಕ್ಷೆ ಮೇಘನಾ, ಬಿ. ವೇದಿಕೆಯಲ್ಲಿದ್ದರು.
ಕೃಷ್ಣಾಷ್ಟಮಿ ಪ್ರಯುಕ್ತ 2ರಿಂದ 6 ವರ್ಷದ ವರೆಗಿನ ಮತ್ತು 7ರಿಂದ 10 ವರ್ಷದೊಳಗಿನ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ ಮತ್ತು ಹಿರಿಯ ಪ್ರಾಥಮಿಕ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಗಳು ಜರಗಿದವು. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು. ವಿಜೇತರಾದವರಿಗೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ