ಅನುಭವದ ದಾಖಲೀಕರಣ ಮುಖ್ಯ: 'ಮಾಧ್ಯಮ ಮಾರ್ಗ' ಕೃತಿ ಬಿಡುಗಡೆಗೊಳಿಸಿ ಪ್ರೊ.ಯಡಪಡಿತ್ತಾಯ

Upayuktha
0

ಮಂಗಳಗಂಗೋತ್ರಿ: ವಿವಿಧ ಕ್ಷೇತ್ರಗಳಲ್ಲಿ ನಿಡುಗಾಲ ಸೇವೆ ಸಲ್ಲಿಸಿದ ಸಾಧಕರು ತಮ್ಮ ಕ್ಷೇತ್ರದ ಅನುಭವಗಳನ್ನು ದಾಖಲಿಸುವುದು ಮುಖ್ಯ. ಇದರಿಂದ ಹೊಸಬರು ಪಾಠ ಕಲಿಯುತ್ತಾರೆ ಮಾತ್ರವಲ್ಲ ಇದು ಸಾಧನೆಗೆ ಪ್ರೇರಣಾದಾಯಿ. ಡಾ. ವಸಂತಕುಮಾರ್ ಪೆರ್ಲರ ನಾಲ್ಕು ದಶಕಗಳ ಮಾಧ್ಯಮ ಕ್ಷೇತ್ರದ ಅನುಭವ 'ಮಾಧ್ಯಮ ಮಾರ್ಗ' ಕೃತಿಯಲ್ಲಿ ಹರಳುಗಟ್ಟಿದೆ. ಪ್ರಸಾರಾಂಗ ಈ ಕೃತಿಯನ್ನು ಪ್ರಕಟಿಸಿರುವುದು ಶ್ಲಾಘನೀಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್ ಯಡಪಡಿತ್ತಾಯ ಹೇಳಿದರು.


ಅವರು ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಪ್ರಕಟಿಸಿದ ಡಾ. ವಸಂತಕುಮಾರ್ ಪೆರ್ಲ ಅವರ ಮಾಧ್ಯಮ ಮಾರ್ಗ ಕೃತಿಯನ್ನು ವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.


ದಕ್ಷಿಣ ಕನ್ನಡ ಜಿಲ್ಲೆ ಮಾಧ್ಯಮ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ನೀಡಿದ ನಾಡು. ಇಲ್ಲಿನ ಮಾಧ್ಯಮ ಬಳಗದ ಸೇವಾತತ್ಪರತೆ ಪ್ರಶಂಸನೀಯ. ಕರಾವಳಿಯ ಮಾಧ್ಯಮರಂಗದಲ್ಲಿ ಆಕಾಶವಾಣಿಯ ಕೊಡುಗೆಯೂ ಸ್ಮರಣೀಯ ಎಂದರು.


ಲೇಖಕ ವಸಂತಕುಮಾರ್ ಪೆರ್ಲ ಮಾತನಾಡಿ ಪತ್ರಿಕೆ, ಆಕಾಶವಾಣಿ, ಸಮುದಾಯ ಬಾನುಲಿ, ಸಾಮಾಜಿಕ ಮಾಧ್ಯಮಗಳು ಹೀಗೆ ವಿವಿಧ ನೆಲೆಗಳ ಸಮಗ್ರ ಚಿಂತನೆಯನ್ನೊಳಗೊಂಡ ಶೈಕ್ಷಣಿಕ ಕಾಳಜಿಯ ಕೃತಿಯಿದು. ಪ್ರಕಟಿಸಿದ ಪ್ರಸಾರಾಂಗಕ್ಕೆ ಕೃತಜ್ಞತೆಗಳು ಎಂದರು.


ಸಮಾರಂಭದಲ್ಲಿ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ರಮೇಶ್ ಕೆ, ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ, ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್ ಧರ್ಮ, ಹಣಕಾಸು ಅಧಿಕಾರಿ ಪ್ರೊ.ಜಯಪ್ಪ, ಪ್ರಸಾರಾಂಗದ ನಿರ್ದೇಶಕ ಪ್ರೊ.ಸೋಮಣ್ಣ ಹೊಂಗಳ್ಳಿ, ಸಹ ನಿರ್ದೇಶಕ ಡಾ. ಧನಂಜಯ ಕುಂಬ್ಳೆ,ಮಂಗಳೂರು ವಿವಿ ಆಡಳಿತ ಅಭಿವೃದ್ಧಿ ವಿಭಾಗ ಮುಖ್ಯಸ್ಥೆ ವೀಣಾ, ಸಂಧ್ಯಾ, ವೈಶಾಲಿ ಪ್ರಸಾರಾಂಗದ ಜೆಸ್ಸಿ ಮೇರಿ ಡಿಸೋಜ, ಭರತ್, ಲೋಲಾಕ್ಷ , ಕನ್ನಡ ವಿಭಾಗದ ಚಂದ್ರಶೇಖರ ಎಂಬಿ, ಹರಿಪ್ರಸಾದ್ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top