ಪ್ರಾಚೀನ ಗಮಕ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮ ಇಂದಿನ ಕರ್ತವ್ಯ: ಶ್ರೀಪತಿ ಪದ್ಯಾಣ

Upayuktha
0


ಕುರುಡಪದವು: (ಕಾಸರಗೋಡು): "ಪ್ರಾಚೀನ ಕಲೆಗಳಿಗೆಲ್ಲ ರಾಣಿಯಂತಿರುವ ಗಮಕ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ" ಎಂಬುದಾಗಿ ನಿವೃತ್ತ ಶಿಕ್ಷಕ ಶ್ರೀಪತಿ ಪದ್ಯಾಣ ಅಭಿಪ್ರಾಯ ಪಟ್ಟರು.


ಆದಿ ಗಮಕಿಗಳಾದ ಕುಶ ಲವರ ಜನ್ಮ ಮಾಸವಾಗಿರುವ ಶ್ರಾವಣ ಮಾಸದಲ್ಲಿ ಕಾಸರಗೋಡಿನ ಹಲವು ಕೇಂದ್ರಗಳಲ್ಲಿ ಕರ್ನಾಟಕ ಗಮಕ ಕಲಾಪರಿಷತ್ತು (ರಿ) ಮತ್ತು ಸಿರಿಗನ್ನಡ ವೇದಿಕೆ (ರಿ) ಎಂಬ ಉಭಯ ಸಂಸ್ಥೆಗಳ ಕೇರಳ ಗಡಿನಾಡ ಘಟಕಗಳ ಆಶ್ರಯದಲ್ಲಿ ಕಾಸರಗೋಡಿನ ವಿವಿಧ ಕೇಂದ್ರಗಳಲ್ಲಿ ರಾಮಾಯಣ ಕಾವ್ಯದ ವಾಚನ-ವ್ಯಾಖ್ಯಾನಗಳ ಸರಣಿ ಕಾರ್ಯಕ್ರಮಗಳನ್ನು ದಶಕಗಳಿಂದ ನಡೆಸಿಕೊಂಡು ಬರುತ್ತಿರುವುದು ಸಂಪ್ರದಾಯವಾಗಿದೆ.  


ಅದರ ಅಂಗವಾಗಿ ಕುರುಡಪದವಿನ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢಶಾಲೆಯ ಸಭಾಂಗಣದಲ್ಲಿ ಜರಗಿದ 'ಗಮಕ ಶ್ರಾವಣ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಶ್ರೀಪತಿ ಪದ್ಯಾಣ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದರು.  


ಶಾಲಾ ಸಂಚಾಲಕರಾದ ಕುರಿಯ ಶ್ರೀ ಗೋಪಾಲಕೃಷ್ಣ ಭಟ್ ದೀಪಜ್ವಾಲನೆಯೊಂದಿಗೆ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತೊರವೆ ರಾಮಾಯಣ ಮಹಾಕಾವ್ಯದಿಂದಾಯ್ದ ಅಗ್ನಿಪರೀಕ್ಷೆ ಎಂಬ ಭಾಗವನ್ನು ಶ್ರೀಮತಿ ದಿವ್ಯಾ ಕಾರಂತ ಅವರು ಸುಶ್ರಾವ್ಯವಾಗಿ ವಾಚನ ಗೈದರು. ಶ್ರೀಮತಿ ಜಯಲಕ್ಷ್ಮೀ ಕಾರಂತ ಅವರು ವ್ಯಾಖ್ಯಾನ ಗೈದರು. 


ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಶ್ರೀ ವಿ.ಬಿ.ಕುಳಮರ್ವ ಅವರು ಪ್ರಸ್ತಾವನೆಯೊಂದಿಗೆ ಗಮಕ ಶ್ರಾವಣದ ಸರಣಿ ಕಾರ್ಯಕ್ರಮದ ಔಚಿತ್ಯವನ್ನು ವಿಶದಪಡಿಸಿದರು. ಗಮಕ ಪರಿಷತ್ತಿನ ಅಧ್ಯಕ್ಷ ಶ್ರೀ ತೆಕ್ಕೆಕೆರೆ ಶಂಕರನಾರಾಯಣ ಭಟ್ಟರು ಅಧ್ಯಕ್ಷತೆ ವಹಿಸಿದ್ದರು. 


ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ಅಧ್ಯಾಪಿಕೆ ಶ್ರೀಮತಿ ಕಾವ್ಯಕುಮಾರಿ ಸ್ವಾಗತಿಸಿ ಹಿರಿಯ ಶಿಕ್ಷಕಿ ಶ್ರೀಮತಿ ಗೀತಾಬಾಲಿ ವಂದಿಸಿದರು. ಸಾಹಿತ್ಯ ಸಂಘದ ಕನ್ವೀನರ್ ಭವಿತ ವಿ. ನಾಯಕ್ ನಿರ್ವಹಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಾಯತ್ರಿ ಅವರು ಗಮಕಿಗಳನ್ನು ಶಾಲು ಹೊದೆಸಿ ಗೌರವಿಸಿದರು. ಗಣ್ಯರೂ ಕಲಾವಿದರೂ ಗಮಕ ಕಲಾಸಕ್ತರೂ ನೂರಾರು ಸಂಖ್ಯೆಯಲ್ಲಿ ಸಮಾರಂಭದಲ್ಲಿ ಭಾಗವಹಿಸಿದುದು ಇತಿಹಾಸವೇ ಸರಿ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top