ವಿವೇಕಾನಂದ ಪದವಿ ಪೂರ್ವ ಕಾಲೇಜು: ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ

Upayuktha
0

ಪ್ರತಿಭೆ ಅಂಕಗಳಿಗೆ ಮಾತ್ರ ಸೀಮಿತವಲ್ಲ: ಡಾ. ಪ್ರಭಾಕರ ಭಟ್


ಪುತ್ತೂರು: ಪ್ರತಿಭಾನ್ವಿತರಾಗಲು ನಿತ್ಯ ನಿರಂತರ ಸಾಧನೆ ಅತ್ಯಗತ್ಯ. ಪ್ರತಿಭೆಗಳು ಸಮಾಜದ ಬೇರ ಬೇರೆ ಕ್ಷೇತ್ರದಲ್ಲಿ ರೂಪುಗೊಂಡು ದೇಶದ ಪರಮ ವೈಭವವನ್ನು ತೋರಿಸುವ ಕೆಲಸವನ್ನು ಕೈಗೊಳ್ಳಬೇಕು.ಭಾರತ ಮಾತೆಗೆ ಸಮಸ್ಯೆ ಬಂದಾಗ ನಮ್ಮ ಪಾತ್ರ ಏನು ಎಂದು ನಮಗೆ ತಿಳಿಯಬೇಕು. ಈ ಮೂಲಕ ಪ್ರತಿಭಾನ್ವಿತರು ಉತ್ತಮ ಸಮಾಜದ ನಿರ್ಮಾಣದ ಕಡೆಗೆ ಗಮನ ಹರಿಸಬೇಕೆಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.


ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2021-22 ನೇ ಶೈಕ್ಷಣಿಕ ವರ್ಷದ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಪ್ರತಿಭಾ ಪ್ರದೀಪ್ತಿ - 2022 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಉತ್ತಮ ಅಂಕಗಳನ್ನು ಮತ್ತು ರ‍್ಯಾಂಕ್‌ಗಳನ್ನು ಗಳಿಸುವುದು ವಿದ್ಯಾರ್ಥಿಗಳು ಮಾಡಿದಂತಹ ಸತತ ಪರಿಶ್ರಮದಿಂದಾಗಿದೆ. ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆಯನ್ನು ಗೌರವಿಸಿ, ಪ್ರತಿಭೆಯನ್ನು ಸಮಾಜಕ್ಕೆತೋರ್ಪಡಿಸುವಂತಾಗಬೇಕು. ನಮ್ಮ ಭವಿಷ್ಯವನ್ನು ನಾವೇ ನಿರ್ಧರಿಸಬೇಕು. ಪಠ್ಯವನ್ನು ಮೀರಿದಜೀವನ ಪಾಠವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.ಕಠಿಣ ಪರಿಸ್ಥಿತಿಯನ್ನು ಎದುರಿಸುವ ಇಚ್ಛಾಶಕ್ತಿ, ಆತ್ಮಸ್ಥೈರ್ಯಗಳನ್ನು ಬೆಳೆಸಿಕೊಳ್ಳಬೇಕು.ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜವುಗುರುತಿಸುವಂಥಹಕಾರ್ಯಗಳನ್ನು ಕೈಗೊಳ್ಳಬೇಕು. ಕಾಲೇಜಿನಲ್ಲಿಕಲಿತ ಪ್ರತಿಭಾನ್ವಿತ ಕುಡಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.


ಕಾರ್ಯಕ್ರಮದಲ್ಲಿ ವಿಶೇಷ ಅಭ್ಯಾಗತರಾಗಿ ಆಗಮಿಸಿದ ಮಂಗಳೂರಿನ ಶಕ್ತಿ ಕಾಲೇಜಿನ ಆಡಳಿತ ಅಧಿಕಾರಿ ರಮೇಶ್ ಭಾಗವಹಿಸಿಮಾತನಾಡಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ವಿದ್ಯಾರ್ಥಿಗಳ ಸಾಧನೆಗೆ ಎತ್ತಿ ಹಿಡಿದ ಕನ್ನಡಿ. ವಿದ್ಯಾರ್ಥಿಗಳ ಈ ಪ್ರತಿಭೆಯು ಸಮಾಜದ ಸುಖಕ್ಕೆ ಉಪಯೋಗಬೇಕು. ಸಹಜ ಕಲಿಕೆಯ ಖುಷಿಯನ್ನು ಅನುಭವಿಸಬೇಕು. ಯಾವುದೇ ಕ್ಷೇತ್ರವಾದರೂ ಅದನ್ನು ಆರಿಸಿ ಸಾಧನೆ ಮಾಡುತ್ತಾ ಮುಂದುವರೆಯಬೇಕು. ವಿದ್ಯಾರ್ಥಿಗಳು ಶಿಕ್ಷಣ ಮಾತ್ರವಲ್ಲದೆ ಇನ್ನೀತರ ಕ್ಷೇತ್ರಗಳಲ್ಲಿ ಕೂಡ ಯಶ್ವಸಿಯಾಗಿ ಕಾರ್ಯನಿರ್ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ತುಂಬಿದರು.


ವಿಶೇಷ ಸನ್ಮಾನ:


ವಿಜ್ಞಾನ, ವಾಣಿಜ್ಯ ಮತ್ತು ಕಲಾವಿಭಾಗಗಳು ಸೇರಿದಂತೆ 2021-22 ನೇ ಶೈಕ್ಷಣಿಕ ವರ್ಷದಲ್ಲಿ ವಿಶೇಷ ಶ್ರೇಣಿಯಲ್ಲಿ ಸಾಧನೆಗೈದ 251ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.


ವಾಣಿಜ್ಯ ವಿಭಾಗದಲ್ಲಿ 593 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯದಲ್ಲಿ ನಾಲ್ಕನೇ ರ‍್ಯಾಂಕ್ ಮತ್ತು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ದೀಪ್ನಾ ಜೆ , ವಿಜ್ಞಾನ ವಿಭಾಗದಲ್ಲಿ 594 ಅಂಕಗಳನ್ನು ಗಳಿಸುವುದರ ಮೂಲಕ ರಾಜ್ಯದಲ್ಲಿ ಐದನೇ ರ‍್ಯಾಂಕ್ ಮತ್ತು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 177 ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 367 ನೇ ರ‍್ಯಾಂಕ್, ಇಂಜಿನಿಯರಿಂಗ್ ನಲ್ಲಿ 859ನೇ ರ‍್ಯಾಂಕ್ ಪಡೆದ ಮನ್ವಿತ ಎನ್ ಪಿ, ಕಲಾ ವಿಭಾಗದಲ್ಲಿ 580 ಅಂಕಗಳನ್ನು ಪಡೆಯುವುದರ ಮೂಲಕ ಪುತ್ತೂರು ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ವಸುದೇವ ತಿಲಕ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 64 ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 184 ನೇ ರ‍್ಯಾಂಕ್ ಗಳಿಸಿದ್ದಾರೆ.


ಇಂಜಿನಿಯರಿಂಗ್‌ನಲ್ಲಿ 294ನೇ ರ‍್ಯಾಂಕ್ ಮತ್ತು ವೆಟರ್ನರಿಯಲ್ಲಿ 315 ನೇ ರ‍್ಯಾಂಕ್ ಗಳಿಸಿದ ಶ್ರೀನಿಧಿ ಐ, ಇಂಜಿನಿಯರಿಂಗ್ ನಲ್ಲಿ 350ನೇ ರ‍್ಯಾಂಕ್, ಫಾರ್ಮಾದಲ್ಲಿ 1848 ನೇ ರ‍್ಯಾಂಕ್ ಗಳಿಸಿದ ವಿಶಾಖ್ ಕಾಮತ್,ಸಿಪಿಟಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವೈಷ್ಣವಿ ಪೈ ಎ, ಇಂಜಿನಿಯರಿAಗ್ ನಲ್ಲಿ 658ನೇ ರ‍್ಯಾಂಕ್ ಗಳಿಸಿದ ಕೀರ್ತನ್ ಅಡಿಗ, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 535 ನೇ ರ‍್ಯಾಂಕ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 768 ನೇ ರ‍್ಯಾಂಕ್ ಗಳಿಸಿದ ವಿನೀತ್ ಜೆ, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 687 ನೇ ರ‍್ಯಾಂಕ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 735 ನೇ ರ‍್ಯಾಂಕ್ ಗಳಿಸಿದ ಸ್ತುತಿ ಎಂ. ಎಸ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 699 ನೇ ರ‍್ಯಾಂಕ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 773 ನೇ ರ‍್ಯಾಂಕ್ ಗಳಿಸಿದ ಸಾತ್ವಿಕ್ ಶಿವಾನಂದ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 1245 ನೇ ರ‍್ಯಾಂಕ್ ಪವೆದಿದ್ದಾರೆ.


ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 1277 ನೇ ರ‍್ಯಾಂಕ್ ಗಳಿಸಿದ ಕೆ. ಎ. ಅನನ್ಯ, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 1504 ನೇ ರ‍್ಯಾಂಕ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 1148 ನೇ ರ‍್ಯಾಂಕ್ ಗಳಿಸಿದ ಶ್ರೇಯಸ್ ಕಮಲ್, ಇಂಜಿನಿಯರಿಂಗ್ ನಲ್ಲಿ 1840ನೇ ರ‍್ಯಾಂಕ್ ಪವನ್ ವೈ.ಡಿ.ಜೆ, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 1964 ನೇ ರ‍್ಯಾಂಕ್ ಗಳಿಸಿದ ಬಿ ರಿಯಾ ಶೆಟ್ಟಿ, ಕೇಂದ್ರ ಸರಕಾರದ ಲೋಕ ಸೇವಾ ಆಯೋಗ ನಡೆಸಿದ ಎನ್.ಡಿ.ಎ. ಪರೀಕ್ಷೆಯಲ್ಲಿ 237ನೇ ರ‍್ಯಾಂಕ್ ಗಳಿಸಿ ಮುಂದಿನ ಹಂತವಾದ ದೈಹಿಕ ಪರೀಕ್ಷೆಯಲ್ಲೂ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ಪ್ರಸ್ತುತ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ತಿಯಾನಂದ್ ಎಂ , ರಾಷ್ಟ್ರ ಮಟ್ಟದ ಎನ್.ಟಿ.ಎಸ್.ಇ ಎರಡನೇ ಹಂತದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಆಶ್ರಯ ಪಿ ಇವರನ್ನು ಶಾಲು ಹೊದಿಸಿ ಕಡತ, ಪುಸ್ತಕ ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು.


ನಂತರ ವಿದ್ಯಾರ್ಥಿಗಳಾದ ಮನ್ವಿತ, ದೀಪ್ನಾ ಜೆ ಮತ್ತು ವಸುದೇವ ತಿಲಕ್ ಮಾತನಾಡಿ ಈ ಕಾಲೇಜಿನಲ್ಲಿದೊರೆತ ನಿರಂತರ ಪ್ರೋತ್ಸಾಹವೇ ನಮ್ಮ ಯಶಸ್ಸಿಗೆ ಕಾರಣ. ಉಪನ್ಯಾಸಕರ ಪಠ್ಯಕ್ರಮ, ಸಲಹೆ ಸೂಚನೆಗಳು ನಮ್ಮಲ್ಲಿಆತ್ಮವಿಶ್ವಾಸವನ್ನು ಮೂಡಿಸಲು ಸಹಕಾರಿಯಾಗಿವೆ. ಉತ್ತಮ ಶಿಕ್ಷಣವನ್ನು ನೀಡಿದ ವಿದ್ಯಾಸಂಸ್ಥೆ, ಗುರುಹಿರಿಯರು ಮತ್ತು ಪ್ರೋತ್ಸಾಹಿಸಿದ ಹೆತ್ತವರಿಗೆ ಕೃತಜ್ಞರಾಗಿದ್ದೇವೆ ಎಂದು ಅಭಿಪ್ರಾಯಪಟ್ಟರು.


ಕಾಲೇಜಿನ ಉಪನ್ಯಾಸಕ ಶ್ರೀಧರ ಶೆಟ್ಟಿಗಾರ್ ಮಾತನಾಡಿ ಸಾಧಕ ವಿದ್ಯಾರ್ಥಿಗಳಿಗೆ ಮಾಡುವ ಸನ್ಮಾನಗಳು ಎಲ್ಲರ ಪಾಲಿಗೆ ಆಶೀರ್ವಾದವಾಗಿ ಪರಿಣಮಿಸಿ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆಯಾಗಲಿ. ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಸಮಾಜದ ಕೀರ್ತಿಯನ್ನು ಎತ್ತಿಹಿಡಿಯುವಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳಯಬೇಕು. ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಸುಂದರವಾಗಿರಲಿ ಎಂದು ಹಾರೈಸಿದರು.


ಇದೇ ಸಂದರ್ಭದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2021-22 ನೇ ಸಾಲಿನ ವಿದ್ಯಾರ್ಥಿಗಳ ಪ್ರತಿಭೆಗೆ ಅವಕಾಶ ನೀಡುವ ವೇದಿಕೆಯಾದ ಚಿಗುರು ವಾರ್ಷಿಕ ಸಂಚಿಕೆ ಬಿಡುಗಡೆಯ ಸಮಾರಂಭವು ನಡೆಯಿತು. ವಾರ್ಷಿಕ ಸಂಚಿಕೆಯನ್ನು ಡಾ. ಪ್ರಭಾಕರ ಭಟ್ ಕಲ್ಲಡ್ಕ ಅನಾವರಣಗೊಳಿಸಿದರು.


ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ ಎಂ. ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ಭಾಗ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿ ಕವಿತಾ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top