ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಯೋಗಥಾನ್ - 2022 ತರಬೇತಿ ಕಾರ್ಯಕ್ರಮ

Upayuktha
0

ಯೋಗಾಭ್ಯಾಸವು ಸುದೃಢ ಆರೋಗ್ಯಕ್ಕೆ ಸಹಕಾರಿ



ಮಂಗಳೂರು: ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸೂಚನೆಯಂತೆ ರಾಜ್ಯದ 31 ಜಿಲ್ಲೆಗಳಲ್ಲಿ ಯೋಗಥಾನ್-2022 ವನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯೂಎಸಿ ಆಯೋಜಿಸಿದ ಒಂದು ವಾರದ ಯೋಗಥಾನ್- 2022 ನ್ನು ವಿಮೆನ್ಸ್ ನ್ಯಾಷನಲ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಕುಡ್ಪಿ ಜಗದೀಶ್ ಶೆಣೈ ಯವರು ಜುಲೈ 20 ರಂದು ಕಾಲೇಜು ಸಭಾಂಗಣದಲ್ಲಿ ಉದ್ಘಾಟಿಸಿದರು.


ಯೋಗವು ಮನಸ್ಸು, ಜ್ಞಾನ ಮತ್ತು ಭೌತಿಕ ದೇಹದ ಶಿಸ್ತಾಗಿದೆ. ಯೋಗಾಭ್ಯಾಸವು ಕಟ್ಟುಮಸ್ತಾದ ದೇಹವೊಂದನ್ನೇ ಬೆಳೆಸುವುದಲ್ಲದೇ ಎಲ್ಲ ಮಾನವ ಕೌಶಲ್ಯಕ್ಕೆ ಬೇಕಾದ ನರ-ಸ್ನಾಯುಗಳ ಸಮರ್ಥವಾದ ಸಮನ್ವಯದಿಂದಾಗಿ ದೇಹ ಮತ್ತು ಮನಸ್ಸುಗಳ ಅನುಸರಣೆಯನ್ನು ನಿರ್ವಹಿಸಿ ಉತ್ತಮಗೊಳಿಸುತ್ತದೆ.  

ಮನಸ್ಸಿನ ದೃಡತೆ ಹೆಚ್ಚಾಗುತ್ತದೆ. ಮನಸ್ಸಿನ ಏಕಾಗ್ರತೆ ಹೆಚ್ಚಿ, ಒತ್ತಡ ನಿಯಂತ್ರಣಗೊಳ್ಳುತ್ತದೆ. ಯೋಗಾಭ್ಯಾಸವು ಸುದೃಢ ಆರೋಗ್ಯದ ದೃಷ್ಟಿಯಿಂದ ಪ್ರಮುಖವಾಗಿದ್ದ್ತು ಪ್ರತಿನಿತ್ಯ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.


ಉದ್ಘಾಟನಾ ಕಾರ್ಯಕ್ರಮದಲ್ಲಿ ದೇಲಂಪಾಡಿ ಯೋಗ ಪ್ರತಿಷ್ಠಾನದ ಮುಖ್ಯಸ್ಥರಾದ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ನಡೆಯುವ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿರುವರು. ಅವರೊಂದಿಗೆ ಶಿಷ್ಯೆಯರಾದ ಶ್ರೀಮತಿ ಸುಭದ್ರ ಮತ್ತು ಶ್ರೀಮತಿ ಸುಮ ಶೆಟ್ಟಿ ಯೋಗ ತರಬೇತುದಾರರಾಗಿ  ನೆರವಾಗಲಿದ್ದಾರೆ.


ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸತೀಶ್ ಕುಮಾರ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕಿ ಶೀಮತಿ ರೂಪತಿ ಎಂ., ಮತ್ತಿತರು ಉಪಸ್ಥಿತರಿದ್ದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top