ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಪಿಪಿ ಗೋಮತಿ ಸ್ಮಾರಕ ಶಿಕ್ಷಣ ಟ್ರಸ್ಟ್ 'ಶ್ರೀ ನಾರಾಯಣ ಗುರು: ಸಂತ, ಸುಧಾರಕ, ಕವಿ'- ಎಂಬ ವಿಷಯದಲ್ಲಿ ಆ.28ರಂದು ವಿಶೆಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ.
ನಗರದ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಅಂದು ಸಂಜೆ 4:30ಕ್ಕೆ ಪ್ರೊ. ಇ.ವಿ ರಾಮಕೃಷ್ಣನ್ ಅವರು ಉಪನ್ಯಾಸ ನೀಡಲಿದ್ದಾರೆ.
ಬಳಿಕ ಶ್ರೀ ನಾರಾಯಣ ಗುರು ವಿರಚಿತ ಗೀತೆಗಳ ಗಾಯನ ಕಾರ್ಯಕ್ರಮವಿದೆ. ವಿದ್ವಾನ್ ಟಿ.ಎಂ ಕೃಷ್ಣ ಅವರ ಗಾಯನ, ಅಕ್ಕರಿ ಶುಭಲಕ್ಷ್ಮಿ ವಯಲಿನ್, ಅರುಣ್ ಪ್ರಕಾಶ್ ಮೃದಂಗ, ಚಂದ್ರಶೇಖರ ಶರ್ಮ ಘಟಂನಲ್ಲಿ ಸಾಥ್ ನೀಡಲಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ