ವಿವೇಕಾನಂದ ವಿದ್ಯಾವರ್ಧಕ ಸಂಘ: ‘ಅಮೃತ ನಡಿಗೆ ದೇಶದ ಕಡೆಗೆ’ ಬೃಹತ್ ಮೆರವಣಿಗೆ

Upayuktha
0

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಸ್ವಾತಂತ್ರ‍್ಯದ ಅಮೃತೋತ್ಸವದ ಪ್ರಯುಕ್ತ 'ಅಮೃತ ನಡಿಗೆ ದೇಶದ ಕಡೆಗೆ' ಎಂಬ ಧ್ಯೇಯದೊಂದಿಗೆ ಬೃಹತ್ ಮೆರವಣಿಗೆಯನ್ನು ಅಗಸ್ಟ್ 12ರಂದು ಆಯೋಜಿಸಲಾಗಿದೆ. ಪುತ್ತೂರಿನ ನೆಹರುನಗರದ ಆವರಣದಲ್ಲಿರುವ ವಿವೇಕಾನಂದ ವಿದ್ಯಾ ಸಂಸ್ಥೆಗಳು ಮತ್ತು ತೆಂಕಿಲದಲ್ಲಿರುವ ವಿವೇಕಾನಂದ ಸಮೂಹ ಸಂಸ್ಥೆಗಳ ಸುಮಾರು 8000 ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಈ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.


ಭಾರತ ಮಾತೆಯ ಭಾವಚಿತ್ರ, ರಾಷ್ಟ್ರಜಾಗೃತಿಯ ಉತ್ತೇಜನ ಗೊಳಿಸುವ ಸ್ತಬ್ಧಚಿತ್ರಗಳು, ಪ್ರತಿ ವಿದ್ಯಾರ್ಥಿಯ ಕೈಯಲ್ಲೂ ತ್ರಿವರ್ಣ ಧ್ವಜ, ಎಪ್ಪತ್ತೈದು ಜನ ಸ್ವಾತಂತ್ರ‍್ಯ ಹೋರಾಟಗಾರರ ಭಾವಚಿತ್ರಗಳೊಂದಿಗೆ ಮೆರವಣಿಗೆ ಸಾಗಲಿದೆ.


ಮೆರವಣಿಗೆ ಸಾಗಲಿರುವ ಮಾರ್ಗ


ನೆಹರೂ ನಗರದ ಕಾಲೇಜು ಆವರಣದಿಂದ ಸಾಗುವ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಬೊಳುವಾರು ಮಾರ್ಗ ವಾಗಿ ಸಾಗಿ, ಕೋರ್ಟ್ ರಸ್ತೆಯ ಮೂಲಕ ತೆಂಕಿಲದ ವಿವೇಕಾನಂದ ಶಾಲಾಮೈದಾನ ತಲುಪಲಿದ್ದಾರೆ. ತೆಂಕಿಲದಲ್ಲಿರುವ ವಿವೇಕಾನಂದ ಸಮೂಹ ಸಂಸ್ಥೆಗಳ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಮೆರವಣಿಗೆ ದರ್ಬೆ ವೃತ್ತದಿಂದ ಸಾಗಿ, ಕೋರ್ಟ್ ರಸ್ತೆ ಮೂಲಕ ಮತ್ತೆ ತೆಂಕಿಲ ಶಾಲಾ ಆವರಣ ತಲುಪಲಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top