ವಿಟಿಯು ಚಾಂಪಿಯನ್‌ಶಿಪ್: ನಾಲ್ಕನೇ ಬಾರಿ ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

Upayuktha
0

ಬೆಂಗಳೂರು: ಇಲ್ಲಿನ ಬಿಎಂಎಸ್ ಕಾಲೇಜು ಆಫ್ ಇಂಜಿನಿಯರಿಂಗ್ ಬಸವನಗುಡಿಯಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಅಂತರ್ ಕಾಲೇಜು ಯೂತ್ ಫೆಸ್ಟಿವಲ್ ಪ್ರತಿಭೋತ್ಸವದಲ್ಲಿ ಮೂಡುಬಿದಿರೆಯ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.


ಆಳ್ವಾಸ್ ವಿದ್ಯಾರ್ಥಿಗಳು ಗೆದ್ದ ಸ್ಪರ್ಧೆಗಳ ಫಲಿತಾಂಶ ಈ ಕೆಳಗಿನಂತಿದೆ:


ಜಾನಪದ ಆರ್ಕೆಸ್ಟ್ರಾದಲ್ಲಿ ಪ್ರಥಮ, ರಂಗೋಲಿಯಲ್ಲಿ ಪ್ರಥಮ, ಇನ್‌ಸ್ಟಾಲೇಶನ್ (ಕಸದಿಂದ ರಸ) ಪ್ರಥಮ, ಕಾರ್ಟೂನಿಂಗ್‌ನಲ್ಲಿ ಪ್ರಥಮ, ಏಕಪಾತ್ರಾಭಿನಯದಲ್ಲಿ ಪ್ರಥಮ, ಮೆರವಣಿಗೆಯಲ್ಲಿ ದ್ವಿತೀಯ, ಸ್ಕಿಟ್‌ನಲ್ಲಿ ದ್ವಿತೀಯ, ವೆಸ್ಟರ್ನ್ ಸೋಲೊ ದ್ವಿತೀಯ ಹಾಗೂ ಜಾನಪದ ನೃತ್ಯದಲ್ಲಿ ತೃತೀಯ ಸ್ಥಾನ ಗಳಿಸಿದೆ.


ವಿಟಿಯು ಸ್ವಾಯತ್ತತೆಗೆ ಒಳಪಟ್ಟ ಕಾಲೇಜುಗಳಿಗೆ ನಡೆಯುವ ಈ ಸಾಂಸ್ಕೃತಿಕ ಕೂಟದಲ್ಲಿ 25 ಸ್ಪರ್ಧೆಗಳು ನಡೆದಿದ್ದು, ಒಟ್ಟು 82 ಕಾಲೇಜುಗಳ 2,200ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕೂಟದ ಸ್ಪರ್ಧಾ ವಿಜೇತರು ದಕ್ಷಿಣ ವಲಯ ಮಟ್ಟದಲ್ಲಿ ನಡೆಯುವ ಅಂತರ್ ವಿಶ್ವವಿದ್ಯಾಲಯ ಸಾಂಸ್ಕೃತಿಕ ಯುವಜನೋತ್ಸದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ.


ವಿದ್ಯಾರ್ಥಿಗಳ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಮ್ಯಾನೇಜ್ಮೆಂಟ್ ಟ್ರಿಸ್ಟಿ ವಿವೇಕ್ ಆಳ್ವ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡೀಸ್ ಅಭಿನಂದಿಸಿದ್ದಾರೆ.


ವಿಟಿಯು ಚಾಂಪಿಯನ್‌ಶಿಪ್‌ನಲ್ಲಿ 4 ಬಾರಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡಿದ್ದು, 2015 ರಿಂದ ಪ್ರತಿ ವರ್ಷ ಟಾಪ್ ಮೂರರಲ್ಲಿ ಕಾಣಿಸಿಕೊಂಡಿದೆ. 2016-17ರಲ್ಲಿ ಆಳ್ವಾಸ್‌ನ ಡೊಳ್ಳು ಕುಣಿತ ತಂಡವು ದಕ್ಷಿಣ ವಲಯ ಮಟ್ಟದಲ್ಲಿ ವಿಟಿಯುವನ್ನು ಪ್ರತಿನಿಧಿಸಿ, ತೃತೀಯ ಸ್ಥಾನವನ್ನು ಪಡೆದಿತ್ತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top