ಪುತ್ತೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನವೀಕೃತ ಶಾಖೆ ಮತ್ತು ಎಟಿಎಂ ಕೇಂದ್ರವು ಶನಿವಾರ (ಜುಲೈ 16) ಪುತ್ತೂರಿನಲ್ಲಿ ಬೆಳಗ್ಗೆ 10 ಗಂಟೆಗೆ ಉದ್ಘಾಟನೆಯಾಗಲಿದೆ.
ಪುತ್ತೂರಿನ ಅಸಿಸ್ಟೆಂಟ್ ಕಮಿಷನರ್ ಗಿರೀಶ್ ನಂದನ್ ಎಂ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಬ್ಯಾಂಕಿನ ಡಜಿಎಂ ಮತ್ತು ಪ್ರಾದೇಶಿಕ ಮುಖ್ಯಸ್ಥರಾದ ಮಹೇಶ ಜೆ, ಮಂಗಳೂರು ವಲಯದ ಕ್ಷೇತ್ರೀಯ ಜನರಲ್ ಮ್ಯಾನೇಜರ್ ಎಂ ರವೀಂದ್ರ ಬಾಬು ಮತ್ತು ಶಾಖಾ ವ್ಯವಸ್ಥಾಪಕರಾದ ಸುರೇಶ ನಾಯ್ಕ ಬಿ ಉಪಸ್ಥಿತರಿರುತ್ತಾರೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.