ಸುರತ್ಕಲ್‌ ಗೋವಿಂದದಾಸ ಕಾಲೇಜಿನಲ್ಲಿ ಅಗ್ನಿಪಥ್‌ ಕುರಿತ ಮಾಹಿತಿ ಕಾರ್ಯಾಗಾರ

Upayuktha
0

ಮಂಗಳೂರು: ಸುರತ್ಕಲ್ ನ ಗೋವಿಂದದಾಸ ಕಾಲೇಜಿನಲ್ಲಿ ಅಗ್ನಿಪಥ್ ಯೋಜನೆಯ ಕುರಿತಾಗಿ ಹಾಗೂ ಸೈನ್ಯ ನೇಮಕಾತಿಯ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿದ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಮಾತನಾಡಿ, ಬಿಜೆಪಿ ಯುವ ಮೋರ್ಚಾ ವತಿಯಿಂದ ವಿದ್ಯಾರ್ಥಿಗಳಿಗೆ ಅಗ್ನಿಪಥ್ ಯೋಜನೆಯ ಕುರಿತಾಗಿ ಯಾವುದೇ ತಪ್ಪು ಕಲ್ಪನೆ ಇರಬಾರದು ಎಂಬ ಉದ್ದೇಶ ಹಾಗೂ ಸೈನ್ಯಕ್ಕೆ ಸೇರಲು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರಥಮ ಕಾರ್ಯಾಗಾರ ಹಮ್ಮಿಕೊಂಡಿದೆ. ನಮ್ಮ ದೇಶದಲ್ಲಿ  ಸೈನ್ಯದಲ್ಲಿ ಸೇವೆ ಮಾಡುವವರನ್ನು ಕಂಡಾಗ ವಿಶೇಷ ಗೌರವ ಭಾವನೆ ಮೂಡುತ್ತದೆ. ನಮಗೂ ಸೈನ್ಯಕ್ಕೆ ಸೇರುವ ಉತ್ಸಾಹ ಬರುತ್ತದೆ ಎಂದರು.


ಇದೀಗ ಕೇಂದ್ರ ಸರಕಾರ ಅಗ್ನಿಪಥ್ ಯೋಜನೆಯ ಮೂಲಕ ಒಳ್ಳೆಯ ಅವಕಾಶ ಕಲ್ಪಿಸಿದೆ. ದೇಶ ಸೇವೆಯ ಜತೆಗೆ ಉದ್ಯೋಗ ಹಾಗೂ ಸೈನ್ಯ ಸೇವೆಯ ಬಳಿಕ ವಿವಿಧ ಉದ್ಯೋಗ ಅವಕಾಶ ಸಿಗಲಿದೆ. ಇದರ ಮಾಹಿತಿ ಕಾರ್ಯಕ್ರಮ ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗುವುದು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಅಗ್ನಿಪಥ್ ಗೆ ಸೇರಲು ಯುವ ಸಮುದಾಯದಲ್ಲಿ ಉತ್ಸಾಹ ಕಂಡುಬರುತ್ತಿದೆ ಎಂದರು.


ಸೈನ್ಯ ನೇಮಕಾತಿ ಅಧಿಕಾರಿ ಮೇಜರ್ ಸುನೀಲ್ ಕುಮಾರ್, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ, ಮನಪಾ ಸದಸ್ಯರಾದ ವರುಣ್ ಚೌಟ, ಶ್ವೇತ ಎ, ಯುವ ಮೋರ್ಚಾ ಅಧ್ಯಕ್ಷರಾದ  ಭರತ್‍ರಾಜ್ ಕೃಷ್ಣಾಪುರ, ಮಹೇಶ್ ಮೂರ್ತಿ ಸುರತ್ಕಲ್, ಪುಷ್ಪರಾಜ್ ಮುಕ್ಕ, ಕ್ಯಾಪ್ಟನ್ ಸುಧಾ ಹಾಗೂ ಗಣ್ಯರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top