|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ‘ವಂದೇ ಗುರು ಪರಂಪರಾಂ’ ತೆಲುಗು ಅನುವಾದದ ಕೃತಿ ನಾಳೆ ಬಿಡುಗಡೆ

‘ವಂದೇ ಗುರು ಪರಂಪರಾಂ’ ತೆಲುಗು ಅನುವಾದದ ಕೃತಿ ನಾಳೆ ಬಿಡುಗಡೆ



ಬೆಂಗಳೂರು: ಅಂಕಣಕಾರ, ಮಾಧ್ಯಮ ಸಮಾಲೋಚಕ, ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರು ಬರೆದ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ವತಿಯಿಂದ ಪ್ರಕಟಿಸಿದ್ದ ‘ವಂದೇ ಗುರು ಪರಂಪರಾಂ’ ಇದೀಗ ತೆಲುಗು ಭಾಷೆಗೆ ಅನುವಾದಗೊಂಡು ಲೋಕಾರ್ಪಣೆಗೊಳ್ಳಲಿದೆ.


ಭಾರತೀಯ ಸಂಸ್ಕøತಿಯಲ್ಲಿ ಗುರುವಿನ ತತ್ವ– ಮಹತ್ವದ ಕುರಿತು ಲೇಖನಗಳ ಸಂಕಲನ ಇತ್ತೀಚೆಗೆ ಬಿಡುಗಡೆಗೊಂಡು ಆಧ್ಯಾತ್ಮ ಸಾಹಿತ್ಯಾಸಕ್ತರ ಗಮನ ಸೆಳೆದಿತ್ತು. ತಿರುಪತಿಯ ಶ್ರೀಮತಿ ಸಂಧ್ಯಾ ರವಿಕುಮಾರ್ ತೆಲುಗಿಗೆ ಅನುವಾದಿಸಿರುವ ಈ ಕೃತಿಯನ್ನು ಶಿವಮೊಗ್ಗದ ಶ್ರೀ ಅಚ್ಯುತ ಯೋಗ ವಿದ್ಯಾಪೀಠ ಪ್ರಕಟಿಸಿದೆ.

ಇದೇ ಜುಲೈ 31 ಭಾನುವಾರ ಬೆಳಗ್ಗೆ 10.00 ಗಂಟೆಗೆ ಹೊಸಪೇಟೆಯ ಬಳ್ಳಾರಿ ರಸ್ತೆಯ ಜೆ.ಪಿ.ಭವನದಲ್ಲಿ ಶ್ರೀ ಅಚ್ಯುತ ಯೋಗ ವಿದ್ಯಾಪೀಠದ ವತಿಯಿಂದ ಏರ್ಪಡಿಸಿರುವ ಪ್ರಭು ಯೋಗಿ ಶ್ರೀ ಅಚ್ಯುತರ 118ನೇ ಜನ್ಮ ದಿನಾಚರಣೆ ಹಾಗೂ ಅವರ ಶಿಷ್ಯರಾದ ಸ್ವಾಮಿ ಶ್ರೀ ವಿಜಯೀಂದ್ರರು ಮತ್ತು ಸ್ವಾಮಿ ಶ್ರೀ ಜಯತೀರ್ಥರ ಜನ್ಮಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಶಿಕ್ಷಣ ತಜ್ಞ- ಸಾಹಿತಿ ಮತ್ತೂರು ಸುಬ್ಬಣ್ಣ ಬಿಡುಗಡೆಗೊಳಿಸುವರು.


ಇದೇ ಸಂದರ್ಭದಲ್ಲಿ ಜಯ- ವಿಜಯ ಶತಮಾನೋತ್ಸವ ಗ್ರಂಥಮಾಲಾ ಅಡಿಯಲ್ಲಿ ಬಿ.ಎಸ್.ಭಾಸ್ಕರ ರಾವ್ ರವರ ‘ಶಾಂತಿ ಮಂತ್ರಗಳು ನೀಡುವ ಆದೇಶಗಳು’; ‘ನನ್ನ ಸಾಧನಾನುಭವಗಳು’, ಸುಧಾ ಭಾಸ್ಕರ ರಾವ್ ರವರ ‘ನ ಗುರೋರಧಿಕಂ’, ಡಾ.ಮೈತ್ರೇಯಿ ಆದಿತ್ಯ ಪ್ರಸಾದ್ ರವರ ‘ತೀರ್ಥ ಪ್ರಬಂಧ: ಸಾಂಸ್ಕೃತಿಕ, ಸಾಮಾಜಿಕ ಅಧ್ಯಯನ’, ದುವ್ವೂರಿ ಉದಯ ಭಾಸ್ಕರಂ ರವರ ‘ಶ್ರೀ ಅಚ್ಯುತ ಯೋಗ ವಿಜ್ಞಾನ ದೀಪಿಕಾ (ತೆಲುಗು)ಕೃತಿಗಳು ಬಿಡುಗಡೆಗೊಳ್ಳಲಿದೆ.


ಜೀವಾತ್ಮನು ಪರಮಾತ್ಮನನ್ನು ಸೇರುವ ವಿದ್ಯೆಯನ್ನೇ ‘ಯೋಗವಿದ್ಯೆ’ಯೆಂದು ಭಗವಂತನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ದುರಂತವೆಂದರೆ ಅದರ ತತ್ವದ ಆಳಕ್ಕೆ ಇಳಿದು ನೋಡಲಾರದವರಾಗಿದ್ದೇವೆ. ಯೋಗಶಾಸ್ತ್ರದ ವಿಚಾರಸರಣಿ (ಥಿಯರಿ)ಯನ್ನು ಪ್ರಾಯೋಗಿಕ(ಪ್ರಯೋಗ)ರೂಪದಲ್ಲಿ ಕಂಡುಕೊಂಡು ಜಿಜ್ಞಾಸುಗಳೆಲ್ಲ್ಲರಿಗೂ ಅದರ ಉಪದೇಶವನ್ನು ಕರುಣಿಸಿರುವ ಪ್ರಭುಯೋಗಿ ಶ್ರೀ ಅಚ್ಯುತ ಗುರುಗಳೇ ಈ ಪ್ರಾಯೋಗಿಕ ರೀತಿಯನ್ನು ಬೆಳಕಿಗೆ ತಂದು ಎಲ್ಲರಿಗೂ ನೀಡಿರುವ ಮಹನೀಯರಾಗಿದ್ದಾರೆ. ಅವರಿಂದ ಉಪದೇಶ ಪಡೆದ ಅವರ ಶಿಷ್ಯರಾದ ಸ್ವಾಮಿ ವಿಜಯೀಂದ್ರರು ಹಾಗೂ ಸ್ವಾಮಿ ಜಯತೀರ್ಥರು ಶ್ರೀ ಅಚ್ಯುತ ಯೋಗ ವಿದ್ಯಾಪೀಠದ ಮೂಲಕ ಸಾವಿರಾರು ಜನರಿಗೆ ತಲುಪಿಸಿದ್ದಾರೆ. ಪೂಜ್ಯ ಶಿಷ್ಯದ್ವಯರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಯೋಗ ವಿದ್ಯೆಗೆ ಸಂಬಂಧಿಸಿದ ಮತ್ತು ಅದಕ್ಕೆ ಪೂರಕವಾದ ಇತರ ವಿಷಯಗಳ ಕುರಿತು ಇಪ್ಪತ್ತೈದು ಪುಸ್ತಕಗಳನ್ನು ಪ್ರಕಟಿಸಿದೆ ಎಂದು ವಿದ್ಯಾಪೀಠದ ಕಾರ್ಯದರ್ಶಿ ಬೆಣ್ಣೆ ಭಾಸ್ಕರ ರಾವ್ ತಿಳಿಸಿರುತ್ತಾರೆ. ವಿವರಗಳಿಗೆ : 97393 69621/ 73490 38443


ವಿಶಿಷ್ಟ ಸಂಕಥನದ ಕೃತಿ

ಗುರುವೇ ತಾರಕ, ಕಾರಕ, ಪ್ರೇರಕ, ಅರಿವು ಇದರ ಕುರುಹು ಹಾಗೂ ಇರವು. ಚಿಂತನ-ಮಂಥನ ವಿವೇಕಗಳ ಬೆಳಕನ್ನು ನೀಡುವ ಶಕ್ತಿಯೇ ಗುರು. ಒಳಗಣ್ಣಿನ ಒಳಗಿಂದ ಒಳಗೊಳಗೇ ಇಳಿಸುವವನೇ ಗುರು. ಒಳಗಿನ ಬಗೆಯನ್ನು ತಿಳಿಸುವವನೇ ಗುರು. ಬಗೆಗಣ್ಣಿನೊಳಗಿಂದ ಭಗವಂತನ ದರುಶನ ಮಾಡಿಸುವವನೇ ಗುರು. ಜ್ಞಾನವಿಜ್ಞಾನ, ಪ್ರಜ್ಞಾನಗಳನ್ನು ಧಾರೆ ಎರೆದ ನವಚೈತನ್ಯದ ಜಲಪಾತವೇ ಗುರು. ವೇದ ಉಪನಿಷತ್ತುಗಳ ಗಾಢಗೂಢ ಅರ್ಥವನ್ನು, ಸತ್ಯವನ್ನು ಬಿಚ್ಚಿ ತೋರಿಸುವವರೇ ಗುರು.


ಆರ್ತರು, ಜಿಜ್ಞಾಸೆಗಳು, ಸಾತ್ವಿಕ ಸಜ್ಜನರು ಯಾರಲ್ಲಿಗೆ ಹೋದರೆ ಜೀವಕ್ಕೆ ನೆಮ್ಮದಿ, ಬದುಕಿಗ ಅರ್ಥ, ಸಾಂತ್ವನ ದೊರಕುವುದೆಂದು ಭಾವಿಸಿ ಧಾವಿಸಿ ಬರುತ್ತಾರೋ, ಅವರೇ ಗುರುಗಳು. ಯಾರು ಜ್ಞಾನ ಭಕ್ತಿ ವೈರಾಗ್ಯದ ಶೃಂಗದೆಡೆಗೆ ಶಿಷ್ಯರನ್ನು ಕರೆದೊಯ್ಯಬಲ್ಲರೋ ಅವರೇ ಗುರುಗಳು. ಮಠಮಾನ್ಯ, ದೇವಾಲಯ, ಆಶ್ರಮ, ಶಾಲಾ-ಕಾಲೇಜುಗಳನ್ನು ನಿರ್ಮಿಸುತ್ತಾ, ಸಮುದಾಯದ ಏಳ್ಗೆಗಾಗಿ ನಿರಂತರ ಶ್ರಮಿಸುವವರೇ ಗುರುಗಳು. 


ಕನ್ನಡ ಸಾರಸ್ವತ ಲೋಕದ ಹೊಸ ತಲೆಮಾರಿನ ಬರಹಗಾರರಲ್ಲಿ ಗಮನಾರ್ಹ ನೆಲೆ ಕಂಡುಕೊಳ್ಳುತ್ತಿರುವ ಲೇಖಕ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರ `ವಂದೇ ಗುರು ಪರಂಪರಾಮ್’ ಪ್ರಸ್ತುತ ಗ್ರಂಥ ಹಲವು ಒಳನೋಟದೊಂದಿಗೆ ಕುತೂಹಲ ಹೆಚ್ಚಿಸುತ್ತದೆ. ಒಂದು ಅಧ್ಯಯನ ಕ್ಷೇತ್ರಕ್ಕೆ ಬದ್ದದಾದ ಮೇಲೆ ಅವರ ಲೇಖನಗಳೇ ಅವರಿಗೆ ಹೆಸರು ತರವಂತಹದ್ದು ಎಂದು ಮನಗಂಡು; ಸನಾತನ ಸಂಸ್ಕøತಿಯನ್ನು ಪ್ರಚಾರ ಮಾಡಬೇಕೆಂಬ ಗೀಳೆ ಈ ಪ್ರಕಾಶನದ ಹಿಂದಿನ ಪ್ರೇರಣೆ. ಅವರ ಎಲ್ಲ ಬರಹಗಳಲ್ಲೂ ಒಂದಿಲೊಂದು ಬಗೆಯಲ್ಲಿ ತತ್ವ-ಆದರ್ಶದ ಪಲ್ಲವಿ ಹಾಡುತ್ತದೆ. ಅವರ ಮುಂಬರುವ ಸಂಪುಟಗಳ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟಿಸುತ್ತದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post