ಕವಿತೆಯು ಮನಸ್ಸಿಗೆ ಆನಂದವನ್ನು ನೀಡುತ್ತದೆ: ಡಾ. ಶ್ರೀಧರ ಎಚ್.ಜಿ

Upayuktha
0

ಪುತ್ತೂರು: ಕವಿತೆಯನ್ನು ಬರೆಯುವಾಗ ಹೊಸದಾಗಿ ಚಿಂತನೆ ಮಾಡಿ ಬರೆಯಬೇಕು. ಕವಿಗೂ ಓದುಗನಿಗೂ ಕವಿತೆಗಳು ಮನಸ್ಸಿಗೆ ಸದಾ ಆನಂದವನ್ನು ನೀಡುತ್ತದೆ ಹಾಗೂ ಕವಿತೆಗಳಲ್ಲಿ ಓದುವ ಕವಿತೆ ಹಾಗೂ ಹಾಡುವ ಕವಿತೆ ಎನ್ನುವ ಎರಡು ವಿಧಗಳನ್ನು ನಾವು ಕಾಣಬಹುದು. ಹಾಡುವ ಕವಿತೆಗಳು ನಮಗೆ ವಿಭಿನ್ನವಾದ ಅನುಭವಗಳನ್ನು ಉಂಟುಮಾಡುತ್ತದೆ ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಎಚ್.ಜಿ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನ ವಿವೇಕಾನಂದ ಸಂಶೋಧನಾ ಕೇಂದ್ರ, ಕನ್ನಡ ಸಂಘ, ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ಅನ್ನಪೂರ್ಣ ಎನ್. ಕುತ್ತಾಜೆ ಇವರ ಮೊದಲ ಹೆಜ್ಜೆ ಹೊಂಗನಸಿನೆಡೆಗೆ ಎಂಬ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.


ವಿವೇಕಾನಂದ ಕಾಲೇಜು ಹಿಂದಿನಿಂದಲೂ ಕವಿತೆ -ಕವನಗಳಿಗೆ ಆಶ್ರಯ ನೀಡಿದೆ. ಇಲ್ಲೇ ಕಲಿತ ಹಲವಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅನ್ನಪೂರ್ಣ ಅವರ ಕವಿತೆಗಳಲ್ಲಿ ಸಾಮಾಜಿಕ ಕಳಕಳಿ ಇರುವುದು ಶ್ಲಾಘನೀಯ. ಯುವ ಮನಸ್ಸುಗಳು ಕಾವ್ಯದೆಡೆಗೆ ತೊಡಗಿಸಿಕೊಳ್ಳುವುದು ಅತ್ಯಂತ ಸಂತಸದ ಸಂಗತಿ ಎಂದು ಅಭಿಪ್ರಾಯಪಟ್ಟರು.


ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಆದ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಮಾತನಾಡಿ, ಕಾವ್ಯವು ಹುಟ್ಟುವುದು ಭಾವದಿಂದ. ಮೊದಲ ಹೆಜ್ಜೆ ಇಡುವುದು ಬಹಳ ಮುಖ್ಯ. ವಸ್ತುವನ್ನು ಕಾವ್ಯವನ್ನಾಗಿ ರೂಪಾಂತರ ಮಾಡುವುದು ಒಂದು ಕಲೆ. ಕವಿತೆಗೆ ಮಿಡಿತದ ಗುಣವಿದೆ ಅಲ್ಲದೇ ಈ ಜಗತ್ತೇ ಕಾವ್ಯಮಯವಾದದ್ದು ಎಂದು ನುಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top