ಸಂಸ್ಕೃತ ಸಂಘದ ಪದಪ್ರದಾನ

Upayuktha
0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇವುಗಳ ಪದಾಧಿಕಾರಿಗಳ ಪದಪ್ರದಾನ  ಕಾರ್ಯಕ್ರಮ ನಡೆಯಿತು. ಪ್ರಾಚಾರ್ಯರಾದ ಪ್ರೊ. ದಿನೇಶ ಚೌಟ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ವಿದ್ವಾಂಸ ಹಾಗೂ ಮಂಗಳೂರಿನ ಶ್ರೀನಿವಾಸ ವಿ.ವಿ ಯ ಸಂಸ್ಕೃತ ಸಂಶೋಧನ ಮಾರ್ಗದರ್ಶಕರಾದ ಡಾ. ಶ್ರೀಕಾಂತ ಬಾಳ್ತಿಲ್ಲಾಯ, ಕನ್ಯಾಡಿ ಅವರು ಅಭ್ಯಾಗತರಾಗಿ ಸಂಸ್ಕೃತದ ಮಹತ್ವವನ್ನು ತಿಳಿಸಿದರು.


ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಪದಾಧಿಕಾರಿಗಳ ಭಿತ್ತಿಪತ್ರಿಕೆಯನ್ನೂ ಬಿಡುಗಡೆಗೊಳಿಸಲಾಯಿತು.  ಸಂಸ್ಕೃತ ಸಂಘದ ಅಧ್ಯಕ್ಷೆ ಧರಿತ್ರಿ ಭಿಡೆ, ಉಪಾಧ್ಯಕ್ಷ ವಿರೂಪಾಕ್ಷ, ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇದರ ಸಂಯೋಜಕರಾದ ವಿದ್ಯಾರಣ್ಯ ಶರ್ಮಾ, ಸಿಂಚನಾ ಪಾಳಂದೆ ಉಪಸ್ಥಿತರಿದ್ದರು.


ಧಾರಿಣಿ ಸ್ವಾಗತಿಸಿದರು. ಸಿಂಚನಾ ಪಾಳಂದೆ ನಿರೂಪಿಸಿ, ಧರಿತ್ರಿ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top