ವಿದ್ಯಾರ್ಥಿಗಳಿಗೆ ಸಮಾಜಮುಖಿ ಜೀವನ ಕಲಿಸುವ ರೆಡ್ ಕ್ರಾಸ್: ಡಾ.ಕಿಶೋರ್ ಕುಮಾರ್ ಸಿ ಕೆ

Upayuktha
3 minute read
0

ವಿವಿ ಕಾಲೇಜಿನಲ್ಲಿ ರೆಡ್ ಕ್ರಾಸ್ ಅಧಿಕಾರಿಗಳಿಗೆ ಎರಡು ದಿನಗಳ ಕಾರ್ಯಾಗಾರ ಆರಂಭ

 


ಮಂಗಳೂರು: ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಸಮಾಜಮುಖಿಯಾಗಿ ಬದುಕಲು ಕಲಿಸುತ್ತವೆ, ಜೊತೆಗೆ ಜೀವನಕ್ಕೆ ಬೇಕಾಗುವ ಶಿಸ್ತು ರೂಢಿಸಿಕೊಳ್ಳಲು ಸಹಾಯಮಾಡುತ್ತವೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ ಕೆ ಅಭಿಪ್ರಾಯಪಟ್ಟರು. 


ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕರ್ನಾಟಕ ರಾಜ್ಯ ಶಾಖೆ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಜಂಟಿಯಾಗಿ ಯುವ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಾಗಾರವನ್ನು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲೇ ಮೊದಲ ಬಾರಿಗೆ ರೆಡ್ ಕ್ರಾಸ್ ಪಠ್ಯಕ್ರಮವನ್ನು ಮಂಗಳೂರು ವಿವಿ ಜಾರಿಗೆ ತರುತ್ತಿದೆ. ಇದನ್ನು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಲುಪಿಸಲು ಕಾರ್ಯಾಗಾರ ಸಹಕಾರಿಯಾಗಲಿ, ಎಂದು ಆಶಿಸಿದರು. 


ಭಾರತೀಯ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾಧ್ಯಕ್ಷ ಶಾಂತಾರಾಮ ಶೆಟ್ಟಿ ಮಾತನಾಡಿ, ಕರಾವಳಿ ಭಾಗದಲ್ಲಿ, ವಿಶೇಷವಾಗಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ರೆಡ್ಕ್ರಾಸ್ ಗೆ ಉತ್ತಮ ಬೆಂಬಲ ದೊರೆಯುತ್ತಿದೆ. ಇನ್ನು ಮುಂದೆ ಜಿಲ್ಲೆಯಿಂದ ವರ್ಷಕ್ಕೆ ಮೂವರು ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿಗಳನ್ನು ಗುರುತಿಸಿ ರಾಜ್ಯಪಾಲರ ಗೌರವ ದೊರೆಯುವಂತೆ ಮಾಡುವ ಉದ್ದೇಶವಿದೆ.  ಅಲ್ಲದೆ ರಾಷ್ಟ್ರ, ರಾಜ್ಯಮಟ್ಟದ ಕ್ಯಾಂಪ್ಗಳನ್ನು ಜಿಲ್ಲೆಯಲ್ಲಿ ನಡೆಸುವ ಯೋಜನೆಯಿದೆ, ಎಂದರು.


ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ಕುಸುಮಾಧರ್, ವೈಆರ್ಸಿ ಪಠ್ಯಕ್ರಮ ಸಮಿತಿ ಅಧ್ಯಕ್ಷ ಪ್ರಭಾಕರ ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆನರಾ ಕಾಲೇಜಿನ ಯುವ ರೆಡ್ ಕ್ರಾಸ್ ಅಧಿಕಾರಿ ಸ್ಮಿತಾ ಎಂ ಕಾರ್ಯಕ್ರಮ ನಿರೂಪಿಸಿದರು. ಬೆಸೆಂಟ್ ಮಹಿಳಾ ಕಾಲೇಜಿನ ದೀಕ್ಷಿತಾ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಪ್ರಗತಿ ಪ್ರಾರ್ಥನೆ ನೆರವೇರಿಸಿದರು.


ಎರಡು ದಿನಗಳ ಕಾರ್ಯಾಗಾರದಲ್ಲಿ ಡಾ. ಸುರೇಶ್ ಎಚ್ಎಸ್, ಮಿಥುನ್ ಭಟ್ ಕಾಕುಂಜೆ, ಡಾ. ಗಣನಾಥ ಎಕ್ಕಾರು, ಡಾ. ಗಣಪತಿ ಗೌಡ, ಡಾ. ಸಚ್ಚಿದಾನಂದ ರೈ, ದಿಲೀಪ್ ಸಿ ಎಸ್,  ನಿತ್ಯಶ್ರೀ ಬಿವಿ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ. 


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top