ಉಜಿರೆ: ಎಸ್.ಡಿ.ಎಮ್ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ಸ್ವಯಂ ಸೇವಕರಿಂದ 'ಕೊಡೆ ನಾ ನಿನ್ನ ಬಿಡೆ' ಎನ್ನುವ ವಿಶಿಷ್ಟ ಕೊಡೆ ಉಪಯೋಗದ ಅಭಿಯಾನ ಹಾಗೂ ಶ್ರಮದಾನ ಕಾರ್ಯಕ್ರಮ ನಡೆಯಿತು.
ಮಳೆ ಬರುವ ಸಮಯದಲ್ಲಿ ಎಲ್ಲರೂ ಕೊಡೆಯನ್ನು ಆಶ್ರಯಿಸಬೇಕು. ಇಲ್ಲಿನ ಮಳೆಗೆ ಕೊಡೆ ಅನಿವಾರ್ಯ ಎಂದು ತಿಳಿಸಿ 'ಕೊಡೆ ನಾ ನಿನ್ನ ಬಿಡೆ' ಎಂಬ ಘೋಷವಾಕ್ಯ ಹೇಳಿಸುವುದರ ಮೂಲಕ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಅವರು ಈ ಅಭಿಯಾನ ಮಾಡಿಸಿದರು. ಸಹ ಯೋಜನಾಧಿಕಾರಿ ಚೇತನಾಕುಮಾರಿ ಮಾರ್ಗದರ್ಶನ ನೀಡಿದರು.
ಎನ್.ಎಸ್.ಎಸ್ ನಾಯಕರಾದ ಚೇತನ್, ವರ್ಧಿನಿ, ಜಯಂತ್ ಹಾಗೂ ಪ್ರಣಮ್ಯಾ ಜೈನ್ ಇವರ ನೇತೃತ್ವದಲ್ಲಿ ಶ್ರಮದಾನ ನಡೆಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ