ವಿವಿ ಕಾಲೇಜು: ಕುಸ್ತಿಯಲ್ಲಿ ವಿದ್ಯಾರ್ಥಿಗಳ ಪದಕ ಸಾಧನೆ

Upayuktha
0

ಮಂಗಳೂರು: ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ಕಾಲೇಜು ಕುಸ್ತಿ ಪಂದ್ಯಾವಳಿಯಲ್ಲಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ದ್ವಿತೀಯ ಬಿಎ ವಿದ್ಯಾರ್ಥಿ ಮನೋಜ್ ಎಸ್ ಎಂ 79 ಕೆ ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಪ್ರಥಮ ಬಿಎ ಯ ಓಬಳಪ್ಪ 65 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.


ಮಹಿಳೆಯರ ವಿಭಾಗದಲ್ಲಿ ತೃತೀಯ ಬಿಎಸ್ಸಿಯ ಶ್ರಾವ್ಯಾ ಬೆಳ್ಳಿ ಪದಕ (70 ಕೆ.ಜಿ), ದ್ವಿತೀಯ ಬಿ.ಕಾಂನ ಪೃಥ್ವಿ ಬೆಳ್ಳಿ ಪದಕ (65 ಕೆಜಿ), ಪ್ರಥಮ ಬಿ.ಕಾಂ ನ ದಿಶಾ ಪಿ ಎಸ್‌ ಕಂಚಿನ ಪದಕ (62  ಕೆಜಿ), ಪ್ರಥಮ ಬಿ.ಕಾಂನ ದಿಯಾ ಪಿ ಎಸ್‌ ಕಂಚಿನ ಪದಕ (53 ಕೆಜಿ), ದ್ವಿತೀಯ ಬಿ.ಕಾಂ ನ ಶ್ರೀರಕ್ಷಾ ಕಂಚಿನ ಪದಕ (50 ಕೆಜಿ) ಜಯಿಸಿದ್ದಾರೆ. ಮಹಿಳೆಯರ ತಂಡ ಮೂರನೇ ಅತ್ಯುತ್ತಮ ತಂಡವಾಗಿ ಹೊರಮಹೊಮ್ಮಿದೆ. ವಿಜೇತರಿಗೆ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಕೇಶವಮೂರ್ತಿ ಅಭಿನಂದನೆ ಸಲ್ಲಿಸಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top