ವಿವಿ ಕಾಲೇಜು: ʼಸೆಲ್ಫಿ ವಿತ್ ಮೈ ಟ್ರೀʼ- ವನಮಹೋತ್ಸವ ಆಚರಣೆ

Upayuktha
0

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ಗುರುವಾರ ವನಮಹೋತ್ಸವ ದಿನಾಚರಣೆ ನಡೆಯಿತು. ಕಾಲೇಜಿಗೆ ರಜೆ ಇದ್ದ ಹೊರತಾಗಿಯೂ ವಿದ್ಯಾರ್ಥಿಗಳು ವನಮಹೋತ್ಸವವನ್ನು ವಿನೂತನ ಶೈಲಿಯಲ್ಲಿ ಆಚರಿಸಿದರು.


ವೆಬಿನಾರ್ ರೂಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಸರ ಸಂಘದ ಸಂಘದ ವಿದ್ಯಾರ್ಥಿಗಳಾದ ಅಶ್ವಿನಿ, ಪ್ರಜ್ಞಶ್ರೀ, ಸಾಕ್ಷ್ಯ, ವೇದಾಶ್ವಿನಿ, ವಿಜೇತ ವನಮಹೋತ್ಸವದ ಹಿನ್ನೆಲೆ, ಮಹತ್ವ ಮತ್ತು ವಿವಿಧ ರೀತಿಯ ಆಚರಣೆಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ನೇಚರ್ ಕ್ಲಬ್ನ ಸಹನಿರ್ದೇಶಕ ಡಾ. ಸಿದ್ದರಾಜು ಎಂ.ಎನ್, ಮರಗಳ ಮಹತ್ವ ವಿವರಿಸಿದರು. ವಿದ್ಯಾರ್ಥಿಗಳೆಲ್ಲರೂ ಮರಗಳನ್ನು ತಮ್ಮ ಮನೆಯ ಸದಸ್ಯರಂತೆ ಪ್ರೀತಿಸುತ್ತೇವೆ ಎಂಬುವುದರ ಪ್ರತೀಕವಾಗಿ ʼಸೆಲ್ಫಿ ವಿತ್ ಮೈ ಟ್ರೀʼ ಎಂಬ ಘೋಷವಾಕ್ಯದೊಂದಿಗೆ ತಮ್ಮ ಮನೆಯಂಗಳದ ಮರದೊಂದಿಗೆ ಸೆಲ್ಫಿ ತೆಗೆದುಕೊಂಡರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top