ಉಜಿರೆ: ಸಮಾಜದ ಕಟ್ಟುಕಟ್ಟಲೆಗಳನ್ನು ಗೌರವಿಸುವ ಭಾವನೆ ಹಾಗೂ ಇನ್ನೊಬ್ಬರಿಗೆ ಸ್ಪಂದಿಸಿ ಜೀವನವನ್ನು ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಇಂತಹ ಸುಪ್ತವಾದ ವಿಷಯಗಳ ಬಗ್ಗೆ ಶಿಕ್ಷಣ ಕೊಡುವ ಧ್ಯೇಯವನ್ನು ಎನ್.ಎಸ್.ಎಸ್ ಹೊಂದಿದೆ. ಸ್ವ ಪ್ರೇರಣೆ ಪಡೆದು ಕರ್ತವ್ಯ ನಿಷ್ಠೆ ತೋರಿಸಿ ಸಮಾಜಕ್ಕೆ ಕೊಡುಗೆಯನ್ನು ನೀಡುವುದು ಯೋಜನೆಯ ಸ್ವಯಂ ಸೇವಕರ ಧ್ಯೇಯವಾಗಬೇಕು. ಮಾನವೀಯ ಮನಸ್ಸುಗಳನ್ನು ಪ್ರತಿಬಿಂಬಿಸುವುದು ಮಾತ್ರವಲ್ಲದೆ ಸುಪ್ತ ಮನಸ್ಸನ್ನು ಅರಳಿಸುವುದೇ ಈ ರಾಷ್ಟ್ರೀಯ ಸೇವಾ ಯೋಜನೆಯಾಗಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ರಾಜ್ಯಮಟ್ಟದ ಉತ್ತಮ ಎನ್.ಎಸ್.ಎಸ್ ಯೋಜನಾಧಿಕಾರಿ ಪ್ರಶಸ್ತಿ ಪುರಸ್ಕೃತ ಪ್ರೊ. ಗಣೇಶ್ ಶೆಂಡ್ಯೆ ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಆಯೋಜಿಸಿದ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಸ್ವಾಗತಿಸಿದರು. ಸಹ ಯೋಜನಾಧಿಕಾರಿ ಚೇತನಾ ಕುಮಾರಿ ಸ್ಮರಣಿಕೆ ನೀಡಿ ಗೌರವಿಸಿದರು. ವಂಶಿ ಭಟ್ ಪರಿಚಯಿಸಿದರು. ಚಂದನಾ ಹಾಗೂ ಬಳಗ ರಾಷ್ಟ್ರೀಯ ಯೋಜನಾ ಗೀತೆಯನ್ನು ಪ್ರಸ್ತುತಪಡಿಸಿದರು. ಎನ್.ಎಸ್.ಎಸ್ ನಾಯಕಿ ವರ್ಧಿನೀ ನಿರೂಪಿಸಿ, ಉಪ ನಾಯಕಿ ಪ್ರಣಮ್ಯಾ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ