ಮಂಗಳೂರು: "ಓದಿನ ಹವ್ಯಾಸ ವಿದ್ಯಾರ್ಥಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಬಹಳ ಅರ್ಥಪೂರ್ಣ. ವಿದ್ಯಾರ್ಥಿಗಳು ಓದುವ ಮತ್ತು ಕೇಳುವ ಗುಣವನ್ನು ಬೆಳೆಸಿಕೊಳ್ಳಬೇಕು. ನೋಡುವುದಕ್ಕಿಂತ ಓದುವಿಕೆ ಇನ್ನಷ್ಟು ಆಳವಾಗಿ ಬೆಳೆಯುವಂತೆ ಮಾಡುತ್ತದೆ. ಈ ನಿಟ್ಟಿನಲ್ಲಿ ಇದು ಬಹಳ ಅರ್ಥಪೂರ್ಣ ಕಾರ್ಯಕ್ರಮ"ಎಂದು ಕೆನರಾ ಕಾಲೇಜಿನ ಗ್ರಂಥಾಲಯ ಸಲಹಾ ಸಮಿತಿ ಹಾಗೂ ಓದುಗರ ಸಂಘದ ವತಿಯಿಂದ ನಡೆದ ಪುಸ್ತಕಾವಲೋಕನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಾಹಿತಿ ಉಪನ್ಯಾಸಕ ರಘು ಇಡ್ಕಿದು ನುಡಿದರು.
ಕೆನರಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಪುಸ್ತಕಾವಲೋಕನ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ವಿದ್ಯಾರ್ಥಿಗಳು ತಾವು ಓದಿದ ಪುಸ್ತಕದ ಸಮೀಕ್ಷೆ ನಡೆಸಿದರು.
ಉಪನ್ಯಾಸಕಿ ಶೈಲಜಾ ಪುದುಕೋಳಿ ರಘು ಇಡ್ಕಿದು ಅವರ 'ಕೊರಗ ತನಿಯ 'ಕನ್ನಡ ನಾಟಕ ಕೃತಿಯನ್ನು ಪರಿಚಯಿಸಿದರು. ಶ್ರೀಮತಿ ಸುಜಾತ ನಾಯಕ್, ಕೀರ್ತನ ಭಟ್ ಇವರು ತೀರ್ಪುಗಾರರಾಗಿ ಆಗಮಿಸಿದ್ದರು. ಕು. ಶ್ರಾವ್ಯಶ್ರೀ ಪ್ರಾರ್ಥಿಸಿ, ಗ್ರಂಥಪಾಲಕಿ ಕವಿತಾ ಗಣೇಶ್ ಸ್ವಾಗತಿಸಿದರು. ಗ್ರಂಥಾಲಯ ಸಲಹಾ ಸಮಿತಿ ಹಾಗೂ ಓದುಗರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಲ್ಪೇಶ್ ವಂದಿಸಿ ಅರ್ಚನಾ. ಟಿ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ