ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಟೆಕ್-ನೋ'22 ಉದ್ಘಾಟನೆ

Upayuktha
0

ನಿಟ್ಟೆ: "ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಹಾಗೂ ಅಪೂರ್ವ ಅವಕಾಶಗಳನ್ನು ಸ್ವೀಕರಿಸಲು ನಾವು ಸದಾ ಸಿದ್ದರಿರಬೇಕು. ಕಳೆದ ಎರಡೂವರೆ ದಶಕಗಳಲ್ಲಿ ಸಂವಹನ ಕ್ಷೇತ್ರದಲ್ಲಿ ಕಂಡುಬಂದ ಬೆಳವಣಿಗೆ ಶ್ಲಾಘನೀಯ" ಎಂದು ಉಡುಪಿಯ ಥಾಟ್ ಗ್ರೈನ್ಸ್ ಸೊಲ್ಯೂಶನ್ಸ ಸಂಸ್ಥೆಯ ಸಿ.ಇ.ಒ ಅರುಣಾಚಲ ಶೆಟ್ಟಿ ಅಭಿಪ್ರಾಯಪಟ್ಟರು.


ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎಂ.ಸಿ.ಎ ವಿಭಾಗದವು ಉಡುಪಿಯ ಥಾಟ್ ಗ್ರೈನ್ಸ್ ಸೊಲ್ಯೂಶನ್ಸ ಸಂಸ್ಥೆಯ ಸಹಯೋಗದೊಂದಿಗೆ ಜು.14 ರಂದು ಹಮ್ಮಿಕೊಂಡ ಟೆಕ್-ನೋ'22 ಟೆಕ್ನಿಕಲ್ ಕಾಂಟೆಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು. "ವಿದ್ಯಾರ್ಥಿಗಳು ಸಿಲೆಬಸ್‌ನ ಹೊರತಾಗಿ ಕ್ರಿಯಾತ್ಮಕವಾಗಿ ಚಿಂತಿಸಬೇಕು. ಇಂದಿನ ಕಾರ್ಪೋರೇಟ್ ಯುಗದಲ್ಲಿ ಕಂಪೆನಿಗೆ ಅನುಗುಣವಾಗಿ ನಮ್ಮ ಜ್ನಾನ ಸಂಪಾದನಾ ಚಾತುರ್ಯತೆ ಬೆಳೆಸಿಕೊಳ್ಳಬೇಕು" ಎಂದು ಅವರು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ.ಶ್ರೀನಿವಾಸ ರಾವ್ ಬಿ.ಆರ್ ಅವರು ನಿಟ್ಟೆ ಸಂಸ್ಥೆಯ ಬಗೆಗೆ ತಿಳಿಸಿ, ಎಂ.ಸಿ.ಎ ವಿಭಾಗವು ಕಾಲೇಜಿನ ವಿವಿಧ ವಿಭಾಗಗಳೊಂದಿಗೆ ಒಡಗೂಡಿ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುತ್ತಿದೆ ಎಂಬ ಪ್ರಶಂಸನಾ ಮಾತುಗಳನ್ನಾಡಿದರು.


ಕಾರ್ಯಕ್ರಮದಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿವಿಧ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.


ಎಂ.ಸಿ.ಎ ವಿಭಾಗ ಮುಖ್ಯಸ್ಥ ಡಾ.ಸುರೇಂದ್ರ ಶೆಟ್ಟಿ ಸ್ವಾಗತಿಸಿದರು. ಸಹಪ್ರಾಧ್ಯಾಪಕಿ ಡಾ.ಸ್ಪೂರ್ತಿ ಶೆಟ್ಟಿ ಅತಿಥಿಯನ್ನು ಪರಿಚಯಿಸಿದರು. ಸಹಪ್ರಾಧ್ಯಾಪಕಿ ಡಾ.ಮಂಗಳಾ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ಸುಪ್ರವಿ ಕಾರ್ಯಕ್ರಮ ನಿರೂಪಿಸಿದರು.


ಸಭಾಕಾರ್ಯಕ್ರಮದ ಅನಂತರ ವಿವಿಧ ಕಾಲೇಜುಗಳಿಂದ ಆಗಮಿಸಿದ ಬಿ.ಸಿ.ಎ ಹಾಗೂ ಬಿ.ಎಸ್ಸಿ (ಐ.ಟಿ) ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆದವು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top