ಕಾಸರಗೋಡು: ಕಾಸರಗೋಡಿನ ಪ್ರಸಿದ್ಧ ಪುಣ್ಯಕ್ಷೇತ್ರ ಮಧೂರಿನ ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಂಗಣದೊಳಗೆ ನೆರೆ ನೀರು ತುಂಬಿದೆ. ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪಕ್ಕದಲ್ಲಿ ಹರಿಯುತ್ತಿರುವ ಮಧುವಾಹಿನಿ ಹೊಳೆಯು ಉಕ್ಕೇರಿದ್ದು, ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳು ಮುಳುಗಡೆಯಾಗಿವೆ.
ಪ್ರತಿ ವರ್ಷವೂ ಮಳೆಗಾಲದಲ್ಲಿ ಕನಿಷ್ಠ ಒಂದೆರಡು ಬಾರಿಯಾದರೂ ಈ ರೀತಿ ಮಧುವಾಹಿನಿ ಹೊಳೆಯು ಉಕ್ಕಿ ಹರಿಯುವುದು ಸ್ಥಳೀಯರ ಪಾಲಿಗೆ ಸಾಮಾನ್ಯ ಸಂಗತಿಯಾಗಿದೆ. ಆದರೆ ಹೊರ ಊರುಗಳಿಂದ ಬರುವ ಭಕ್ತಾದಿಗಳಿಗೆ ಮಾತ್ರ ತೀವ್ರ ಸಮಸ್ಯೆ ಉಂಟು ಮಾಡುತ್ತಿದೆ.
ನಮ್ಮ ಓದುಗರಿಗಾಗಿ ಇಲ್ಲಿವೆ ನೋಡಿ ಕೆಲವು ಚಿತ್ರಗಳು....