"ಕರುಣಾಮಯಿ ಜಲದುರ್ಗೆ" ಭಕ್ತಿಗೀತೆ ಆಲ್ಬಮ್ ಬಿಡುಗಡೆ

Upayuktha
0

ಸುಳ್ಯ: ತುಳುನಾಡಿನ ಪ್ರಸಿದ್ಧ ತಾಣವಾದ ಬೆಳ್ಳಾರೆ  ಪೆರುವಾಜೆಯ ಉದ್ಭವ ಸ್ವರೂಪಿನಿ ಶ್ರೀ ಜಲದುರ್ಗ ದೇವಸ್ಥಾನದ ಮಹಿಮೆಯನ್ನು ವರ್ಣಿಸುವ, "ಕರುಣಾಮಯಿ ಜಲದುರ್ಗೆ" ತುಳು ಭಕ್ತಿಗೀತೆಯನ್ನು ಪಿ. ಪದ್ಮನಾಭ ಶೆಟ್ಟಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವ್ಯವಸ್ಥಾಪನಾ ಸಮಿತಿ ಹಾಗೂ ಸಿಬ್ಬಂದಿ ವರ್ಗ ಶ್ರೀ ಕ್ಷೇತ್ರ ಪೆರುವಾಜೆ ಇವರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು.


ಈ ಭಕ್ತಿಗೀತೆ ಗೆ ಸಾಹಿತ್ಯವನ್ನು ಸುದೀಪ್ ಕೆಯ್ಯೂರು ಬರೆದು ಪ್ರಮೋದ್ ತಿಂಗಲಾಡಿ ನಿರ್ಮಾಣ ಮಾಡಿದ್ದಾರೆ. ತುಳು ನಾಡಿನ ಹೆಮ್ಮೆಯ ಗಾಯಕ ರವಿ ಪಾಂಬಾರ್ ಹಾಗೂ ದುರ್ಗಾ ಕೆಯ್ಯೂರು ಹಾಡಿದ್ದಾರೆ. ಚಂದನ, ರಕ್ಷಾ, ಅಕ್ಷತಾ, ಅಕ್ಷಯ ಕೆಯ್ಯೂರು ಇವರು ನೃತ್ಯ ಮೂಲಕ ಅಭಿನಯಸಿದ್ದರೆ, ಕುಸಲ್ದ ಕಿಚ್ಚ ಬರವುದ ಮಾಣಿಕ್ಯ ಕೇಶವ ನೆಲ್ಯಾಡಿ ನಿರ್ದೇಶನ ಮಾಡಿದ್ದಾರೆ.


ಛಾಯಾಗ್ರಹಣ ಮತ್ತು ಸಂಕಲನ ಪುರುಷೋತ್ತಮ ಕುಂಬಾರ ಮತ್ತು  ಕುರಿಯಾಳ ಕೊಪ್ಪ ನೀಡಿದ್ದಾರೆ. ಮಿಥುನ್ ರಾಜ್ ವಿದ್ಯಾಪುರ, ಶ್ರೀ ರಾಜ್ ಮ್ಯೂಸಿಕಲ್ ಕಬಕ ಪುತ್ತೂರುರವರು ಧ್ವನಿ ಮುದ್ರಣ ಮಾಡಿದ್ದಾರೆ. ಈ ಭಕ್ತಿಗೀತೆ ಬಿಡುಗಡೆ ಮಾಡುವಾಗ ಇಡೀ ತಂಡ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top