ಕೇರಳದಲ್ಲಿ ದೇಶದ ಮೂರನೇ ಮಂಕಿಪಾಕ್ಸ್ ಪ್ರಕರಣ ಪತ್ತೆ

Upayuktha Writers
0

ಮಲಪ್ಪುರಂ: ಕೇರಳದಲ್ಲಿ ದೇಶದ ಮೂರನೇ ಮಂಕಿಪಾಕ್ಸ್ ಸೋಂಕಿನ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲೇ ಮೂರನೇ ಪ್ರಕರಣ ದಾಖಲಾಗಿದೆ. ಈ ಹೊಸ ಸೋಂಕಿನ ಮೂರು ಪ್ರಕರಣಗಳೂ ಕೂಡ ಕೇರಳದಲ್ಲಿ ವರದಿಯಾಗಿವೆ.



ಮಲಪ್ಪುರಂದ ಮೂಲದ 35 ವರ್ಷದ ವ್ಯಕ್ತಿ ಜುಲೈ 6ರಂದು ಯುಎಇಯಿಂದ ವಾಪಸ್​ ಆಗಿದ್ದರು. 13ರಂದು ಆ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿತ್ತು. 15ರಂದು ದೇಹದಲ್ಲಿ ಚರ್ಮದ ಮಚ್ಚೆಗಳು ಪತ್ತೆಯಾಗಿದ್ದವು. ಹೀಗಾಗಿ ಮಂಕಿಪಾಕ್ಸ್ ಸೋಂಕಿನ ಶಂಕೆ ಮೇರೆಗೆ ವೈದಕೀಯ ಮಾದರಿಗಳನ್ನು ಪುಣೆ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿತ್ತು.  ವರದಿಯಲ್ಲಿ ಮಂಕಿಪಾಕ್ಸ್ ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ. ಈ ರೋಗಿಯು ಮಂಚೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಯೊಂದಿಗೆ  ಸಂಪರ್ಕಕ್ಕೆ ಬಂದವರ ಮೇಲೂ ನಿಗಾ ಇರಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top